ಕುಕ್ಕುಂದೂರು ದೇಗುಲ ಅಭಿವೃದ್ಧಿಗೆ ಕಂಕಣ!
-ಜೀರ್ಣೋದ್ಧಾರದ ಮನವಿ ಪತ್ರ ಬಿಡುಗಡೆ ಮಾಡಿದ ಖ್ಯಾತ ನಟ ಟೆನ್ನಿಸ್ಕೃಷ್ಣ
– ಪರಪು ಗುತ್ತು ಕರೆ ಪಿಲಿಚಂಡಿ, ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಸ್ಥಾನಕ್ಕೆ ಬೇಕು ಭಕ್ತರ ಸಹಾಯ
NAMMUR EXPRESS NEWS
ಕಾರ್ಕಳ : ಐತಿಹಾಸಿಕ ಪರಪು ಗುತ್ತ ಕರೆಯ ಪಿಲಿಚಂಡಿ ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಗಳ ದೇಗುಲ ತೀರಾ ಹಳೆಯದಾಗಿದ್ದು ಶಿಥಿಲಾವಸ್ಥೆಗೆ ಒಳಗಾಗಿದೆ. ಈ ದೈವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ಪರಪು ಗುತ್ತು ಕರೆಯ ಹಾಗೂ ಸಂಬಂಧಪಟ್ಟ ಗುತ್ತು ಬರ್ಕೆಯವರೊಂದಿಗೆ ಎಲ್ಲಾ ದೈವ ಭಕ್ತರ ಇಚ್ಛೆಯಂತೆ ನವೀಕರಣಗೊಳಿಸಲು ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ. ಕುಕ್ಕುಂದೂರು ಗ್ರಾಮದ ಪರಪು ಗುತ್ತುಕರೆಯ ದೈವಸ್ಥಾನದ ಜೀರ್ಣೋದ್ಧಾರ ಮಾಡುವ ಸಲುವಾಗಿ ಮನವಿ ಪತ್ರವನ್ನು ಖ್ಯಾತ ಕನ್ನಡ ಚಲನಚಿತ್ರ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಡಿಸೆಂಬರ್ 29ರಂದು ಗುತ್ತುಕರೆಯ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಿದರು.
ರಾಜೇಶ್ ರಾವ್ ಪರಪ್ಪು, ಶಿವರಾಂ ರಾವ್, ಬೆಂಗಳೂರು ಉದ್ಯಮಿ ಚಂದ್ರು, ವಸಂತ್ ಅತಿಕಾರಿ, ದೇವರಾಜ ಅಧಿಕಾರಿ, ಉದ್ಯಮಿ ಸುಭಾಷ್ ಕಾಮತ್, ರವೀಂದ್ರ ಶೆಟ್ಟಿ, ಗೀತಾ ಶೆಟ್ಟಿ, ವೆಂಕಪ್ಪ ಶೆಟ್ಟಿ ಹಾಗೂ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿನಯ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.