ಉಡುಪಿಯಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ
– ಲೋಡ್ ಶೆಡ್ಡಿಂಗ್ ಭೀತಿ
– ರಾಜ್ಯದ ಹಲವೆಡೆ ವಿದ್ಯುತ್ ಕೊರತೆ
NAMMUR EXPRESS NEWS
ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಲೋಡ್ ಶೆಡ್ಡಿಂಗ್ ಭೀತಿ ಆವರಿಸಿದ್ದು, ದಿನಪ್ರತಿ ಸುಮಾರು ಅರ್ಧಗಂಟೆಯಷ್ಟು ಕಾಲ ವಿದ್ಯುತ್ ನಿಲುಗಡೆಯಾಗುತ್ತಿದೆ. ಒಂದು ವಾರದಿಂದ ವಿದ್ಯುತ್ ಕೈಕೊಡುತ್ತಿದೆ. ಅಧಿಕೃತವಾಗಿ ವಿದ್ಯುತ್ ಕಡಿತವಿಲ್ಲದಿದ್ದರೂ ಕೊರತೆ ಉಂಟಾಗುವ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು. ಕೆಲವೆಡೆ ತಾಂತ್ರಿಕ ಸಮಸ್ಯೆ ಇದ್ದ ಕಾರಣ ಉಡುಪಿ- ಮಣಿ ಪಾಲ ಭಾಗಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.
ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡುವ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ವಿದ್ಯುತ್ ಕೊರತೆ ಕಂಡು ಬಂದಲ್ಲಿ ಸರಿದೂಗಿಸಲು ಆಯಾ ಕೇಂದ್ರಗಳಿಗೆ ಸೂಚನೆ ಲಭಿಸುವ ಮೇರೆಗಷ್ಟೇ ವ್ಯತ್ಯಯ ಮಾಡಲಾಗು ತ್ತಿದೆ ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ದಿನೇಶ್ ಉಪಾಧ್ಯ ತಿಳಿಸಿದ್ದಾರೆ. ಕೇವಲ ಉಡುಪಿ ಮಾತ್ರವಲ್ಲದೆ ರಾಜ್ಯದ ಹಲವು ಕಡೆ ಲೋಡ್ ಶೆಡ್ಡಿಂಗ್ ತೊಂದರೆಯಿದ್ದು ಜನ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸಲು ತೊಂದರೆಯಾಗುತ್ತಿದೆ ಎಂದು ಪರದಾಡುತ್ತಿದ್ದಾರೆ.