ಆಪತ್ಭಾಂದವ ಈಶ್ವರ್ ಮಲ್ಪೆ ಸೇವೆಗೆ ಸಲಾಂ!
– ಕರಾವಳಿ, ಮಲೆನಾಡು ಭಾಗದಲ್ಲಿ ನಿಸ್ವಾರ್ಥ ಸೇವೆ
– ತನ್ನ ಕುಟುಂಬದ ಆಸೆ ಬಿಟ್ಟು ನೂರಾರು ಕಿಮೀ ಈಜಿ ಸೇವೆ
– ನೂರಾರು ಶವಗಳ ಹುಡುಕಿ ಕೊಟ್ಟ ಕರಾವಳಿ ಹೀರೋ!
NAMMUR EXPRESS NEWS
ಉಡುಪಿ: ಈಶ್ವರ್ ಮಲ್ಪೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಈ ಹೆಸರು ಕೆಲದವರಿಲ್ಲ.
ದೈವದತ್ತವಾಗಿ ದೇವರು ಕೊಟ್ಟ ಈಜು ಮತ್ತು ಧೈರ್ಯವನ್ನೇ ಸೇವೆಗೆ ಬಳಸಿಕೊಂಡ ಸೇವಕ. ಕಷ್ಟದಲ್ಲಿ ಅದರಲ್ಲೂ ನೀರಿಗೆ ಬಿದ್ದವರ ಆಪತ್ಭಾಂದವ ಈಶ್ವರ್ ಮಲ್ಪೆ.
ಉಡುಪಿ, ದಕ್ಷಿಣ ಕನ್ನಡ, ಕೊಡಗು,ಉತ್ತರ ಕನ್ನಡ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನೂರಾರು ಮಂದಿ ಪ್ರಾಣ ಉಳಿಸಿದ ರಿಯಲ್ ಹೀರೋ ಇವರು. ಕರಾವಳಿ, ಮಲೆನಾಡು ಭಾಗದಲ್ಲಿ ಇವರ ನಿಸ್ವಾರ್ಥ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ತನ್ನ ಕುಟುಂಬದ ಆಸೆ ಬಿಟ್ಟು ನೂರಾರು ಕಿಮೀ ಈಜಿ ಸೇವೆ ನೂರಾರು ಶವಗಳ ಹುಡುಕಿ ಕೊಟ್ಟ ಕರಾವಳಿ ಹೀರೋ!.
ಆಪತ್ಬಾಂಧವ, ಜೀವ ರಕ್ಷಕ, ಮುಳುಗು ತಜ್ಞ
ಆಪತ್ಬಾಂಧವ, ಜೀವ ರಕ್ಷಕ, ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಗೆ ನೂರಾರು ಪ್ರಶಸ್ತಿ ಸಂದಿವೆ. ರಾಜ್ಯದ ಹಲವೆಡೆ ನೀರು ಅವಘಡ ದಲ್ಲಿ ಸಿಲುಕಿದ ಅದೆಷ್ಟೋ ಜೀವಗಳನ್ನು ಉಳಿಸಿದ್ದು ಜೊತೆಗೆ ನೀರಿನಲ್ಲಿ ಕೊಚ್ಚಿ ಹೋದ ಮೃತ ದೇಹ ಹೊರ ತೆಗೆಯಲು ತಮ್ಮ ಜೀವದ ಹಂಗನ್ನೆ ತೊರೆದು ಸಾಹಸಕ್ಕಿಳಿದು ಅಂದುಕೊಂಡ ಕಾರ್ಯ ಯಶಸ್ವಿಯಾಗುವುದರಲ್ಲಿ ಶ್ರಮ ಪಟ್ಟ ಇವರಿಗೆ ಸರ್ಕಾರ ಇನ್ನು ಪ್ರಶಸ್ತಿ ನೀಡಿಲ್ಲ.
ಶಿರೂರು ಗುಡ್ಡ ಕುಸಿತ ಹಾಗೂ ಕಾಳಿ ಸೇತುವೆ ದುರಂತದಲ್ಲಿ ಸೇವೆ
ಉತ್ತರ ಜಿಲ್ಲೆಯಲ್ಲಿ ಸಂಭವಿಸಿದ ಶಿರೂರು ಗುಡ್ಡ ಕುಸಿತ ಹಾಗೂ ಕಾಳಿ ಸೇತುವೆ ದುರಂತದಲ್ಲಿ ಹಗಲು ರಾತ್ರಿ ಎನ್ನದೆ ಶ್ರಮಿಸಿ ಎರಡು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿ ಯಾವುದೇ ಅಪೇಕ್ಷೆ ಬಯಸದೆ ಅನಾರೋಗ್ಯದಲ್ಲಿರುವ ತನ್ನ ಮಕ್ಕಳು ಹಾಗೂ ಕುಟುಂಬವನ್ನೆಲ್ಲ ಬಿಟ್ಟು ಬಂದು ಸತತ 71 ದಿನಗಳಲ್ಲಿ ಕಾಲ ಜಿಲ್ಲೆಯಲ್ಲೆ ವಾಸವಿದ್ದರು. ಅಲ್ಲದೆ ಇತ್ತೀಚಿಗೆ ಸಿಕ್ಕ ಕೇರಳದ ಟ್ರಕ್ ಮತ್ತು ಟ್ರಕ್ ಡ್ರೈವರ್ ಅರ್ಜುನ್ ಶವ ಅಲ್ಲೇ ಇದೆ ಎಂದೂ ಕೂಡ ಹೇಳಿದ್ದರು. ಅವರನ್ನು ಸರ್ಕಾರದ ಆಗಲಿ, ಜಿಲ್ಲಾಡಳಿತ ಆಗಲಿ ಈ ವರೆಗೆ ಗೌರವಯುತವಾಗಿ ಗುರುತಿಸದೆ ಇರುವುದು ಮಾತ್ರ ದುರಂತ. ಈಶ್ವರ್ ಮಲ್ಪೆ ತಂಡೆಕ್ಕೆ ಧನ್ಯವಾದಗಳು.
ತಮ್ಮ ಸೇವೆಗೆ ನಮ್ಮ ಸಲಾಂ..!