ಕರಾವಳಿಯಲ್ಲಿ ಭಾರತ ಜಯಕ್ಕೆ ಮರಳು ಶಿಲ್ಪ ಶುಭಾಶಯ!
– ವಿನೂತನ ರೀತಿಯಲ್ಲಿ ಟೀಂ ಇಂಡಿಯಾಗೆ ಹಾರೈಕೆ
– ಉಡುಪಿಯ ಕಾಪುವಿನಲ್ಲಿ ಮರಳು ಶಿಲ್ಪ
NAMMUR EXPRESS NEWS
ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣ ಕಾಪು ಕಡಲ ಕಿನಾರೆಯಲ್ಲಿ ಟೀಂ ಇಂಡಿಯಾಗೆ ಶುಭ ಹಾರೈಸಿ ರಚಿಸಲಾದ ಮರಳು ಶಿಲ್ಪ ಭಾರೀ ಗಮನ ಸೆಳೆಯುತ್ತಿದೆ. ಉಡುಪಿ: ಕರಾವಳಿ ಜಿಲ್ಲೆಗಳಲ್ಲೂ ವಿಶ್ವಕಪ್ ಕಾತರ ಜೋರಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಫೈನಲ್ ಪಂದ್ಯಾಟಕ್ಕೆ ಜನರು ತುದಿಗಾಲಿನಲ್ಲಿ ನಿಂತು ಕಾಯುವಂತಾಗಿದೆ. ದೇಶಾದ್ಯಂತ ಹೋಮ, ಹವನ ಹಾಗೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಭಾರತ ಗೆದ್ದರೆ ಯಾವ ರೀತಿಯಾಗಿ ಸಂಭ್ರಮಾಚರಣೆ ನಡೆಸಬೇಕು ಅನ್ನೋ ಲೆಕ್ಕಚಾರವೂ ಶುರುವಾಗಿದೆ. ಕಡಲ ತಡಿಯ ಉಡುಪಿ ಜಿಲ್ಲೆಯಲ್ಲಿ ಮರಳು ಶಿಲ್ಪದ ಮೂಲಕ ಭಾರತ ತಂಡಕ್ಕೆ ಶುಭ ಹಾರೈಸಿದೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕಾಪು ಜಿಲ್ಲೆಯ ಕಡಲ ಕಿನಾರೆಯಲ್ಲಿ ಮರಳು ಶಿಲ್ಪದ ಮೂಲಕ ಭಾರತ ತಂಡಕ್ಕೆ ಶುಭಕೋರಲಾಗಿದೆ. ಮಣಿಪಾಲ್ ಸ್ಯಾಂಡ್ ಆರ್ಟ್ನ ಕಲಾವಿದರಾದ ಶ್ರೀನಾಥ್ ಮಣಿಪಾಲ್, ರವಿ ಹೀರೆಬೆಟ್ಟು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ.ವಾರಾಂತ್ಯವಾಗಿದ್ದರಿಂದ ಜನರು ಕೂಡಾ ಕಡಲ ಕಿನಾರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಟೀಂ ಇಂಡಿಯಾಕ್ಕೆ ಶುಭ ಹಾರೈಸಿ ಮಾಡಲಾದ ಮರಳು ಶಿಲ್ಪವು ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ.ಮರಳು ಶಿಲ್ಪದ ಮೂಲಕ ವಿಶ್ವಕಪ್ ಟ್ರೋಫಿ ಹಾಗೂ ಬ್ಯಾಟ್ನ ಕಲಾಕೃತಿಯನ್ನ ರಚಿಸಲಾಗಿದೆ. ಅದರೊಂದಿಗೆ ʼಗುಡ್ ಲಕ್ ಭಾರತ್ʼ ಎಂದು ಬರೆಯಲಾಗಿದೆ.