ಉಡುಪಿ ಪ್ರೈಮ್ ನ್ಯೂಸ್
ಹಣ್ಣು, ಬಿಸ್ಕಟ್ ಮೂಲಕ ಗಾಂಜಾ ಸಾಗಣೆ?!
– ಹಿರಿಯಡ್ಕದಲ್ಲಿ ವಿಚಾರಣಾಧೀನ ಕೈದಿಗೆ ಹಣ್ಣು, ಬಿಸ್ಕಟ್ ಮೂಲಕ ಗಾಂಜಾ ಪೂರೈಕೆ
– ಓರ್ವ ಅರೆಸ್ಟ್: ಇನ್ನೋರ್ವ ನಾಪತ್ತೆ… ಏನಿದು ಸ್ಟೋರಿ?
NAMMUR EXPRESS NEWS
ಹಿರಿಯಡ್ಕ: ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಹಿರಿಯಡ್ಕ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನನ್ನು ಹಾವಂಜೆ ಗೋಳಿಕಟ್ಟೆ ನಿವಾಸಿ ಸುಧೀಶ್ (22) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ವರುಣ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸುಧೀಶ್ ಹಾಗೂ ವರುಣ ಹಿರಿಯಡ್ಕ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ರೇವುನಾಥ ಯಾನೆ ಪ್ರೇಮನಾಥ (23) ಹಣ್ಣು, ಬಿಸ್ಕಟ್ ಮೂಲಕ ಗಾಂಜಾ ಪೂರೈಸಿದ ಆರೋಪದ ಕೇಳಿಬಂದಿದೆ.
ಏನಿದು ಗಾಂಜಾ ಪೂರೈಕೆ ಪ್ರಕರಣ?
ಕೈದಿ ಸಂದರ್ಶನಕ್ಕೆ ಮೇ 20ರಂದು ಸಂಜೆ ಜೈಲಿಗೆ ಬಂದಿದ್ದು, ಮುಖ್ಯ ದ್ವಾರದಲ್ಲಿದ್ದ ದ್ವಾರಪಾಲಕ ಸಿಬ್ಬಂದಿಯಲ್ಲಿ ಪ್ರೇಮನಾಥನಿಗೆ ಕೊಡಲು ಹಣ್ಣು, ಬಿಸ್ಕೇಟ್ಗಳನ್ನು ನೀಡಿದ್ದರು. ಬಳಿಕ ಕಾರಗೃಹದ ಸಿಬ್ಬಂದಿಗಳಾದ ಸಹಾಯಕ ಜೈಲರ್, ದ್ವಾರಪಾಲಕರು ಮತ್ತು ದ್ವಾರ ಸಹಾಯಕರು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ತೊಟ್ಟೆಯಲ್ಲಿ 10 ರಿಂದ 15 ಗ್ರಾಂ ಗಾಂಜಾ ಇರುವುದು ಕಂಡುಬಂತು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.