ಉಡುಪಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿಯ ಅಕ್ಕಿ ನೈವೇದ್ಯ ಸಂಕಲ್ಪ!
– ಕೃಷ್ಣನಿಗೆ ೩೪೦ ತಳಿಯ ಅಕ್ಕಿಯನ್ನು ನೀಡುತ್ತೆ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ
– ಭತ್ತದ ಬೀಜ ತಳಿ ಸಂರಕ್ಷಣೆ ಕಾರ್ಯಕ್ಕೆ ಮಠದ ಮುನ್ನುಡಿ
NAMMUR EXPRESS NEWS
ಉಡುಪಿ: ಸೋದೆ ಮಠದ ಪರ್ಯಾಯದಲ್ಲಿ ಶ್ರೀಕೃಷ್ಣನಿಗೆ ದಿನಕ್ಕೊಂದು ತಳಿಯ ಅಕ್ಕಿಯ ನೈವೇದ್ಯ ಮಾಡುವ ಸಂಕಲ್ಪ ಮಾಡಿದೆ. ಇದಕ್ಕಾಗಿ ಒಂದು ವರ್ಷಕ್ಕೆ ಸುಮಾರು ೩೪೦ ತಳಿಯ ಅಕ್ಕಿಯ ಅಗತ್ಯವನ್ನು ಸಮುದಾಯದ ಮುಂದಿಟ್ಟಿದ್ದಾರೆ. ಅದಕ್ಕೆ ಈಗಾಗಲೇ ಸ್ಪಂದಿಸಿರುವ ತೀರ್ಥಹಳ್ಳಿಯ ಕೃಷಿ ಪ್ರಯೋಗ ಪರಿವಾರ ಕಳೆದ ವರ್ಷ ತೀರ್ಥಹಳ್ಳಿ ಹಾಗೂ ಉಡುಪಿಯಲ್ಲಿ ಬೊಗಸೆ ಭತ್ತದ ಬೀಜವನ್ನು ನೀಡುವ ಮೂಲಕ ತಳಿ ಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿದೆ.
ಈ ಬಾರಿ ಕೂಡಾ ಅದನ್ನು ವಿಸ್ತರಿಸುವ ಕಾರ್ಯಕ್ರಮದ ಭಾಗವಾಗಿ ಇನ್ನು ಹೆಚ್ಚಿನ ರೈತರಿಗೆ ಬೊಗಸೆ ಭತ್ತದ ಬೀಜವನ್ನು ನೀಡುವ ನಿಟ್ಟಿನಲ್ಲಿ ಜೂನ್ ೨೦ ರಂದು ಸಂಜೆ ೪ ಗಂಟೆಗೆ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನ , ಉಡುಪಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅದಮಾರು ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬೊಗಸೆ ಭತ್ತ ಬೀಜ ಪ್ರಧಾನ ಮಾಡಲಿದ್ದಾರೆ. ಭತ್ತದ ತಳಿ ಸಂರಕ್ಷಣೆ ಜೊತೆಗೆ ಶ್ರೀ ಕೃಷ್ಣ ನಿಗೆ ಶುದ್ದ ನೈವೇಧ್ಯ ಸಮರ್ಪಿಸುವ ಚಿಂತನೆಗೆ ಕೈ ಜೋಡಿಸಲು ಆಸಕ್ತರಿರುವ ಎಲ್ಲರೂ ಕೈ ಜೋಡಿಸಬಹುದು ಎದು ಭಾರತೀಯ ಕಿಸಾನ್ ಸಂಘಗಳ ಪ್ರಧಾನ ಕಾರ್ಯಾದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.