ಅಯೋಧ್ಯೆಯ ಭದ್ರತೆಗೆ ಉಡುಪಿಯ ಟೆಲಿಸ್ಕೋಪ್!
– ವಿಜ್ಞಾನಿ ಆರ್. ಮನೋಹರ್ ತಯಾರಿಸಿದ ಟೆಲಿಸ್ಕೋಪ್ ಖರೀದಿ!
– ಮೂರು ಕಿ.ಮೀ ದೂರದ ಚಿತ್ರಣ ಕಾಣಬಹುದು!
NAMMUR EXPRESS NEWS
ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರದ ಭದ್ರತೆಗಾಗಿ ಉಡುಪಿ ಪರ್ಕಳದ ಆರ್. ಮನೋಹರ್ ಅವರು ತಯಾರಿಸಿರುವ ಟೆಲಿಸ್ಕೋಪ್ ಬಳಕೆಯಾಗಲಿದೆ. ಅವರು ತಯಾರಿಸಿದ ಯುಎಸ್ ಪೇಟೆಂಟ್ ಪಡೆದಿರುವ 50 ಬೈನಾಕ್ಯುಲರ್ಗಳನ್ನು ಉತ್ತರ ಪ್ರದೇಶ ಪೊಲೀಸ್ ಭದ್ರತಾ ವಿಭಾಗದವರು ಖರೀದಿಸಿದ್ದಾರೆ. ವಿಜ್ಞಾನಿ ಆರ್.ಮನೋಹರ್ ತಯಾರಿಸಿದ ಅತ್ಯಾಧುನಿಕ ಟೆಲಿಸ್ಕೋಪ್ ಇದಾಗಿದೆ. ಈ ಟೆಲಿಸ್ಕೋಪ್ನಲ್ಲಿ 3 ಕಿ. ಮೀ. ದೂರದ ತನಕದ ಚಿತ್ರಣ ಕಾಣುತ್ತದೆ. ವಿದೇಶಗಳಲ್ಲಿ ತಯಾರಾಗುವ ಟೆಲಿಸ್ಕೋಪ್ಗಳಿಗಿಂತಲೂ ಈ ಟೆಲಿಸ್ಕೋಪ್ ಹೆಚ್ಚು ಕ್ಷಮತೆಯುಳ್ಳದ್ದು.
ಭಾರತದಲ್ಲಿ ಟೆಲಿಸ್ಕೋಪ್ ತಯಾರಿಸುವ ಪೇಟೆಂಟ್ ಆರ್. ಮನೋಹರ್ ದಾಗಿದೆ. ಆಪ್ಟಿಕ್ಸ್ ಪೇಟೆಂಟ್ ಇರುವುದರಿಂದ ಇಲ್ಲೇ ತಯಾರು ಮಾಡಲಾಗುತ್ತದೆ. ವಿದೇಶದ ದೂರದರ್ಶಕದ ಲೆನ್ಸ್ ಚಿಕ್ಕದು ಮತ್ತು ಏರಿಯಾ ಆಫ್ ವ್ಯೂ ಕಡಿಮೆ ಇರುತ್ತದೆ. ಮುಂದೆ ನಾನು ಅಯೋಧ್ಯೆಗೆ ಹೋಗಿ ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಅಯೋಧ್ಯೆಯ ರಕ್ಷಣಾ ವ್ಯವಸ್ಥೆ ಹೇಗೆ ಮಾಡಿಕೊಂಡಿದ್ದಾರೆ. ಅವರ ಬೇಡಿಕೆಗಳು ಏನು ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಮಸ್ಯೆಗಳಿದ್ದರೆ ಅದನ್ನು ಈಗಲೇ ಬಗೆಹರಿಸಬಹುದು. ಮುಂದಿನ ಭವಿಷ್ಯದ ಡಿಮಾಂಡ್ಗಳು ಏನು ಎಂದು ಅರಿತುಕೊಳ್ಳುವ ಪ್ರಯತ್ನ ಮಾಡುತ್ತೇನೆ. ನನಗೆ ಇದರಲ್ಲಿ ಯಾವುದೇ ಲಾಭದ ನಿರೀಕ್ಷೆ ಇಲ್ಲ ದೇಶದ ಸೇವೆಗೆ ಅದು ಬಳಕೆಯಾಗಬೇಕು ಅಷ್ಟೇ ಎಂದಿದ್ದಾರೆ ಮನೋಹರ್.