ಗುಡ್ಡ ಕುಸಿತಕ್ಕೆ 200 ಮಂದಿ ಬಲಿ!?
– 151 ಮಂದಿ ಶವ ಪತ್ತೆ: ಇನ್ನು 150ಕ್ಕೂ ಹೆಚ್ಚು ಮಂದಿ ನಾಪತ್ತೆ
– ಎಲ್ಲೆಂದರಲ್ಲಿ ಹೆಣಗಳ ರಾಶಿ, ಕೊಚ್ಚಿ ಹೋದ ಬದುಕು.!
– ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು
– ಕರ್ನಾಟಕದ 10ಕ್ಕೂ ಹೆಚ್ಚು ಮಂದಿ ಸಾವು?!
– ಮೃತ ಕನ್ನಡಿಗ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
NAMMUR EXPRESS NEWS
ತಿರುವನಂತಪುರಂ: ಕೇರಳ-ಹೆಸರು ಕೇಳುತ್ತಿದ್ದರೆ ಸಾಕು ಹಚ್ಚ ಹಸಿರಿನ ಗುಡ್ಡ-ಬೆಟ್ಟ, ನದಿಯ ನಿನಾದ, ಪ್ರಕೃತಿ ಸೌಂದರ್ಯದಿಂದ ಕೂಡಿದ ಬಯಲು ಈ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಅದರಲ್ಲಿಯೂ ವಯನಾಡು ಎಂದರೆ ಪ್ರವಾಸಿಗರ ಪಾಲಿಗೆ ಸ್ವರ್ಗ ಎನಿಸಿಕೊಂಡಿದೆ. ಆದರೆ ಇದೀಗ ಇಲ್ಲಿನ ಚಿತ್ರಣವೇ ಬದಲಾಗಿದೆ.
ಮಳೆ, ಗುಡ್ಡ ಕುಸಿತ ವಯನಾಡು ಜಿಲ್ಲೆಯ ಮೆಪ್ಪಾಡಿ ಗ್ರಾಮ ಪಂಚಾಯತ್ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ ಊರನ್ನೇ ಅಪೋಶನ ತೆಗೆದುಕೊಂಡಿದ್ದು, ಇದೀಗ ಎಲ್ಲಡೆ ಆಕ್ರಂದನದ ಕೂಗು ಕೇಳಿ ಬರುತ್ತಿದೆ. ಸ್ವರ್ಗದಂತಿದ್ದ ಭೂಮಿ ಸ್ಮಶಾನದಂತಾಗಿದೆ.
ಭೂಕುಸಿತ ಬಾಧಿತ ಚುರಲ್ಮಲ ಗ್ರಾಮದಲ್ಲಿ ಅಂಗಡಿ, ಮನೆಗಳು ಮಣ್ಣಿನಡಿಯಲ್ಲಿ ಹುದುಗಿದ್ದರೆ ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸದ್ಯ ಈ ಗ್ರಾಮದ ಚಿತ್ರಣ ಗುರುತೇಸಿಗದಂತೆ ಬದಲಾಗಿದೆ. ಕೆಲವು ಕಿಲೋಮೀಟರ್ ದೂರದಲ್ಲಿರುವ ಮುಂಡಕೈನಲ್ಲಿ ಉಂಟಾದ ಭೂಕುಸಿತದ ಪರಿಣಾಮವನ್ನು ಚುರಲ್ಮಲ ಗ್ರಾಮ ಎದುರಿಸುತ್ತಿದ್ದು, ಮಣ್ಣು ಮತ್ತು ಅವಶೇಷಗಳ ರಾಶಿಯೇ ಇಲ್ಲಿ ಕಂಡು ಬಂದಿದೆ. ಅಲ್ಲದೆ ಎರುವಾಝಂಜಿ ನದಿಯು ತನ್ನ ಪಥವನ್ನು ಬದಲಾಯಿಸಿ ಗ್ರಾಮದ ಮಧ್ಯದ ಮೂಲಕ ಹರಿಯುತ್ತಿದೆ. ಇದರಿಂದ ರಸ್ತೆಗಳೂ ಕೊಚ್ಚಿಕೊಂಡು ಹೋಗಿ ಕಾರ್ಯಾಚರಣೆಗೆ ಇನ್ನಷ್ಟು ತೊಡುಕುಂಟು ಮಾಡಿದೆ.
ಗ್ರಾಮದ ಹಲವು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲವರ ಮೃತದೇಹ ಹಲವು ಕಿ.ಮೀ. ದೂರದ ಮಲಪ್ಪುರಂ ಜಿಲ್ಲೆಯ ನಿಲಂಬೂರ್ನಲ್ಲಿ ಪತ್ತೆಯಾಗಿದೆ” ಎಂದು ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಕೇರಳದ ವಯನಾಡು ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 150ಕ್ಕೇರಿದೆ. ಈ ಪೈಕಿ 7 ಕನ್ನಡಿಗರು ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.