ಭಂಡಾರಿ ಸಮಾಜ ಸಹಯೋಗದಲ್ಲಿ ಉಚಿತ ಶ್ರವಣ ತಪಾಸಣೆ
– ವಿಘ್ನಹರ್ತ ಸಂಸ್ಥೆಯ ಸಹಯೋಗದಲ್ಲಿ ಮಾದರಿ ಕಾರ್ಯಕ್ರಮ
– ಕೋಣಂದೂರಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಲಸಿಕಾ ಕಾರ್ಯಕ್ರಮ
NAMMUR EXPRESS NEWS
ಕೋಣಂದೂರು: ಅಗ್ರಹಾರ ಹೋಬಳಿ ಸವಿತಾ ಸಮಾಜದ ಸಮುದಾಯ ಭವನದಲ್ಲಿ ತೀರ್ಥಹಳ್ಳಿ ತಾಲ್ಲೂಕು ಭಂಡಾರಿ ಸಮಾಜ ಸಂಘ , ವಿಘ್ನಹರ್ತ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಉಚಿತ ಶ್ರವಣ ತಪಾಸಣಾ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಶಿಬಿರ ನಡೆಯಿತು.
ಅ.15ರಂದು ಕೋಣಂದೂರಿನಲ್ಲಿ ನಡೆಯುವ ಬೆಂಗಳೂರು ಭಂಡಾರಿ ಸಮಾಜ ಸಂಘ ಕೌಟುಂಬಿಕ ಸ್ನೇಹ ಕೂಟದ ಅಂಗವಾಗಿ ತೀರ್ಥಹಳ್ಳಿ ತಾಲ್ಲೂಕು ಭಂಡಾರಿ ಸಂಘ ಏರ್ಪಡಿಸಿದ್ದ ಉಚಿತ ಶ್ರವಣ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರ ವಿತರಣೆ ಶಿಬಿರ ನಡೆಯಿತು. ಸುಮಾರು 85 ಜನ ಶ್ರವಣ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ತಾಲ್ಲೂಕು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಗಿರೀಶ್ ಭಂಡಾರಿ, ಸರಳ ಮಂಜುನಾಥ ಭಂಡಾರಿ, ಹೊಸಕೊಪ್ಪ ಶಿವು, ವಿಘ್ನಹರ್ತ ಸಂಸ್ಥೆಯ ಮುಖ್ಯಸ್ಥ ಲವ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ಸತೀಶ್, ಶರಧಿ ಪೂರ್ಣೇಶ್, ಎಸ್.ಸಿ. ರವೀಂದ್ರ, ರವಿಶೆಟ್ಟಿ, ಸುಹಾಸ್, ಷಣ್ಮುಖ ಇದ್ದರು.
ಬಹಳ ಕಡಿಮೆ ಬೆಲೆಯಲ್ಲಿ ಶ್ರವಣ ಯಂತ್ರಗಳ ವಿತರಣೆ
ಭಂಡಾರಿ ಸಮಾಜ ಸಂಘ (ರಿ.) ತೀರ್ಥಹಳ್ಳಿ ತಾಲೂಕು ಇವರ ಆಶ್ರಯದಲ್ಲಿ ಮುಖ್ಯಸ್ಥರಾದ ಲವಕುಮಾರ್ ವಿಘ್ನಹರ್ತ ಸಂಸ್ಥೆಯ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ನಡೆಯಿತು. ಭಂಡಾರಿ ಸಮಾಜ ಸಂಘ ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು ಈಗ ಅವರು ವಿಘ್ನಹರ್ತ ಶ್ರವಣ ಚಿಕಿತ್ಸಾಲಯ ಸಹಯೋಗದೊಂದಿಗೆ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡಿದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ಭಂಡಾರಿ ಸಮಾಜ ಸಂಘ ಸಂಸ್ಥೆಯಿಂದ ಶ್ರವಣದ ಯಂತ್ರಕ್ಕೆ (Hearing Machine) ಆಗುವ ವೆಚ್ಚದ ಶೇಕಡಾ 40% ರಿಂದ 50% ಮೊತ್ತವನ್ನು ಭರಿಸಲಾಗುತ್ತಿದದೆ.
ಕೋಣಂದೂರಲ್ಲಿ ಉಚಿತ ರೇಬಿಸ್ ಅರಿವು, ಲಸಿಕಾ ಕಾರ್ಯಕ್ರಮ
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಶಿವಮೊಗ್ಗ ಹಾಗೂ ಕೋಣಂದೂರು. ಲಯನ್ಸ್ ಕ್ಲಬ್ ಕೋಣಂದೂರು ಶರಾವತಿ ಮತ್ತು ಇನ್ನರ್ ವೀಲ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ರೇಬಿಸ್ ಅರಿವು ಮತ್ತು ಲಸಿಕಾ ಕಾರ್ಯಕ್ರಮವು ಸಂಪೂರ್ಣ ಯಶಸ್ವಿಯಾಗಿ ನಡೆಯಿತು.
ಗ್ರಾಮ ಪಂಚಾಯಿತಿ ಕೋಣಂದೂರು, ಲಯನ್ಸ್ ವತಿಯಿಂದ ಉತ್ತಮ ಸೇವೆಯ ಮುಖಾಂತರ ಈ ಭಾಗದ ಸಾವಿರಾರು ಪ್ರಾಣಿಗಳನ್ನ ಜೀವ ಉಳಿಸಿದಂತಹ ವೈದ್ಯ ನಾರಾಯಣ ಹರಿ ಇವರನ್ನ ಸನ್ಮಾನಿಸಲಾಯಿತು