- ಮನೆ ಮನೆಯಲ್ಲೂ ಆಚರಣೆ: ದೇಗುಲಗಳಲ್ಲಿ ವಿಶೇಷ ಪೂಜೆ
- ನಾಗರಹಳ್ಳಿಯಲ್ಲಿ ಜಾತ್ರಾ ಸಡಗರ
NAMMUR EXPRESS NEWS
ಮಲೆನಾಡು: ವರ್ಷದ ಮೊದಲ ಹಬ್ಬ ಹಿಂದೂಗಳ ಪವಿತ್ರ ಹಬ್ಬ ನಾಗರ ಪಂಚಮಿ ಹಬ್ಬವನ್ನು ಮನೆ ಮನೆಯಲ್ಲಿ ಸಂಭ್ರಮದಿಂದ ಆಚರಿಸಿದರು.
ತೀರ್ಥಹಳ್ಳಿ, ಶೃಂಗೇರಿ, ಹೊಸನಗರ ಸೇರಿ ಮಲೆನಾಡಿನ ಬಹುತೇಕ ದೇಗುಲದಲ್ಲಿ ಭಕ್ತರು ಹೆಚ್ಚಾಗಿದ್ದರು. ತೀರ್ಥಹಳ್ಳಿಯ ರಾಮೇಶ್ವರ, ನಾಗರ ಕಟ್ಟೆ, ಆರಗ, ನಂಟೂರು, ಹಡ್ಸೆ ಸೇರಿ ಬಹುತೇಕ ಕಡೆ ಪೂಜೆ ನಡೆಯಿತು.
ತೀರ್ಥಹಳ್ಳಿ ತಾಲೂಕು ಕೌದಳ್ಳಿ ಕ್ಷೇತ್ರದಲ್ಲಿ ನಾಗ ದೇವರಿಗೆ ಪಂಚಾಮೃತ ಅಭಿಷೇಕ ಕ್ಷೀರ ಅಭಿಷೇಕ ಹಾಗೂ ವಿಶೇಷ ಪೂಜೆ ಹಾಗೂ ನಾಗರಕ್ತೇಶ್ವರಿ ಅಮ್ಮನವರಿಗೆ ಅಭಿಷೇಕ ಪೂಜೆ ಹಾಗೂ ವಿಶೇಷ ಅಲಂಕಾರ ಪೂಜೆ ವಿಜೃಂಭಣೆಯಿಂದ ನೆರೆವೇರಿತು.
ಹೊಸನಗರ ತಾಲೂಕಿನ ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಹಳ್ಳಿ ಇತಿಹಾಸ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿಯ ಮಳೆಗಾಲದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ಜಾತ್ರಾ ಮಹೋತ್ಸವವು ವರ್ಷದಲ್ಲಿ ಎರಡು ಬಾರಿ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಶ್ರಾವಣ ಮಾಸದಲ್ಲಿ, ಬೇಸಿಗೆ ಕೂಳೆ ಪಂಚಮಿಯಲ್ಲಿ ವಿಶೇಷವಾಗಿ ಮಹೋತ್ಸವವು ನಡೆಯಲಿದೆ.
ಮದುವೆಗಾಗಿ, ಮಕ್ಕಳ ಫಲಕ್ಕೆ ಇಲ್ಲಿಗೆ ಆಗಮಿಸುವುದುಂಟು. ಮಂಗಳವಾರ ಮುಂಜಾನೆ ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣಭಟ್ ನೇತೃತ್ವದಲ್ಲಿ ನಾಗೇಂದ್ರ ಸ್ವಾಮಿಗೆ ಪೂಜೆ ಮಾಡಲಾಯಿತು.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನಲೆಯಲ್ಲಿ ಜಾತ್ರಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು.ಆದರೆ ಈ ಬಾರಿ ಯಾವುದೇ ನಿರ್ಬಂಧಗಳಿಲ್ಲದೇ ಇದ್ದ ಕಾರಣ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ದೇಗುಲ ಧರ್ಮದರ್ಶಿ ಸಮಿತಿ ಅಧ್ಯಕ್ಷ ಸತೀಶ್ ಗೇರುಗಲ್ಲು, ಎಚ್.ಎಂ.ವರ್ತೇಶ್ಗೌಡರು, ಶಿವರಾಜ್, ಗಿರಿಯಪ್ಪಗೌಡ, ಕೇಶವಮೂರ್ತಿ, ಸುಬ್ರಹ್ಮಣ್ಯ ಆಚಾರ್, ರಾಘವೇಂದ್ರ, ಲಲಿತಮ್ಮ,ಸುರೇಶ್ ಗುಡ್ಡೆಕೊಪ್ಪ,ಲೋಕೇಶ್ ಶ್ರೀನಿವಾಸ್ ಗೌಡ,ಶಿವರಾಜ್ ಹಾಗೂ ಇನ್ನಿತರರಿದ್ದರು.