ಹಾಸನ ಸ್ವಿಮ್ಮರ್ಸ್ ಕ್ಲಬ್ ಹಾಸನ ಇವರ ವತಿಯಿಂದ ಜೆ. ಮಂಜುನಾಥ್ ಸ್ಮರಣಾರ್ಥ ನಡೆದ ಈಜು ಸ್ಪರ್ಧೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 12 ಪದಕಗಳನ್ನು ಪಡೆದು ಅದ್ಭುತ ಸಾಧನೆ ಗೈದಿದ್ದಾರೆ.
ವಿದ್ಯಾರ್ಥಿಗಳಾದ
ಲಿಕಿತ್ ಎಂ ಗೌಡ (4ಚಿನ್ನ 2 ಬೆಳ್ಳಿ), ಗೌರವ್ ಹೆಚ್ ಎನ್ (1 ಬೆಳ್ಳಿ 1 ಕಂಚು), ಹೆಮಶ್ರೀ (1 ಬೆಳ್ಳಿ 1 ಕಂಚು), ಅನುಷಾ ಹೆಚ್. ಪಿ (1 ಬೆಳ್ಳಿ) ಶ್ರಾವ್ಯ ಸಿ. ಎ (1 ಕಂಚು) ಗಳಿಸಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ನಟರಾಜ್ ಹೆಚ್. ಹೆಚ್ ತರಭೇತಿ ನೀಡಿದ್ದು ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಕೆ.ಸುರೇಶ್ ,ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ,ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಯೋಜಕರಾದ ವೆಂಕಟೇಶ್ ಅಭಿನಂದಿಸಿದ್ದಾರೆ.