Categories
ಶಿವಮೊಗ್ಗ

ಟಾಪ್ 5 ನ್ಯೂಸ್: ಶಿವಮೊಗ್ಗ ಜಿಲ್ಲೆ

ಟಾಪ್ 5 ನ್ಯೂಸ್: ಶಿವಮೊಗ್ಗ ಜಿಲ್ಲೆ

– ಇಬ್ಬರ ಬಲಿ ಪಡೆದ ಹೋರಿಗಳು!
– ಶಿಕಾರಿಪುರ : ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆ: ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ!
ರಿಪ್ಪನ್‌ಪೇಟೆ: ಜಮೀನಿನ ವಿಚಾರದಲ್ಲಿ ಗಲಾಟೆ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ
– ಸೊರಬ : ಹೋರಿ ಬೆರೆಸಿದ್ದಕ್ಕೆ ಯುವಕ ಚರಂಡಿಗೆ ಬಿದ್ದು ಸಾವು
– ಶಿವಮೊಗ್ಗ : ಅಂಗಡಿಯ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಲಕ್ಷಾಂತರ ರೂ. ನಷ್ಟ

NAMMUR EXPRESS NEWS
ರಿಪ್ಪನ್‌ಪೇಟೆ: ಜಮೀನಿಗೆ ತೆರಳುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿ ಯುವಕನೋರ್ವನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಿಗ (ಅಡ್ಡೆರಿ ) ಗ್ರಾಮದಲ್ಲಿ ನಡೆದಿದೆ. ಅಡ್ಡೇರಿ ಗ್ರಾಮದ ಆದರ್ಶ(22) ಎಂಬ ಯುವಕನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಗಲಾಟೆಯಲ್ಲಿ ಗಾಯಾಳು ಯುವಕನ ತಂದೆ ಬಸವರಾಜ್ ಹಾಗೂ ತಾಯಿ ಭವಾನಿ ರವರಿಗೂ ಗಾಯಗಳಾಗಿದ್ದು ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿಗಳಾದ ಅಡ್ಡೆರಿ ಗ್ರಾಮದ ಅಖಿಲೇಶ್ ಹಾಗೂ ಸಂದೇಶ್ ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆ ಪೊಲೀಸರು ಬಲೆ ಬೀಸಿದ್ದಾರೆ.

– ಸೊರಬ : ಹೋರಿ ಬೆದರಿಸುವ ಹಬ್ಬ ನೋಡಿ ಹಿಂದಿರುಗುತಿದ್ದ ಯುವಕ ಚರಂಡಿಗೆ ಬಿದ್ದು ಸಾವು

ಸೊರಬ : ದನ ಬರುವುದನ್ನು ನೋಡಿ ಹೆದರಿ ಚರಂಡಿಗೆ ಬಿದ್ದ ಯುವಕ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದ ಶೇಕ್ ಸುಹೇಲ್ (೧೮) ಮೃತಪಟ್ಟ ಯುವಕನಾಗಿದ್ದಾನೆ. ಯಲವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ನೋಡಿ ವಾಪಾಸ್ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಹಿಂಬದಿಯಿಂದ ದನ ಬರುವುದನ್ನು ನೋಡಿ ಹೆದರಿ ಓಡುವ ಯತ್ನದಲ್ಲಿ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದ್ದಾನೆ. ಪರಿಣಾಮ ತಲೆ ಮತ್ತು ಪಕ್ಕೆ ಭಾಗಕ್ಕೆ ಗಾಯವಾಗಿರುತ್ತದೆ. ತಕ್ಷಣವೇ ಶಿರಾಳಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶೇಕ್ ಸುಹೇಲ್ ಮೃತಪಟ್ಟಿದ್ದಾನೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿಕಾರಿಪುರ : ಸಹೋದರಿಯ ಪ್ರೀತಿಗೆ ಅಡ್ಡಿಯಾದ ತಂದೆಯನ್ನು ಸುತ್ತಿಗೆಯಲ್ಲಿ ಹೊಡೆದು ಹತ್ಯೆಗೈದ ಮಗ.

ಶಿಕಾರಿಪುರ : ಸಹೋದರಿಯ ಪ್ರೀತಿಗೆ ಒಪ್ಪದ ತಂದೆಯನ್ನು ಮಗನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಸಂಬಂಧಿಕರೊಬ್ಬರ ಮಗನನ್ನು ಪ್ರೀತಿಸುತಿದ್ದ ಮಗಳಿಗೆ ಹಿಂಸೆ ನೀಡುತ್ತಿದ್ದ ತಂದೆಯನ್ನು ಮಗ ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯನ್ನು ತಂದೆಯ ಬಳಿ ಒಪ್ಪಿಸಲು ಹೋದ ಮಗನ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಗಳದಲ್ಲಿ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಮುಸ್ತಾಫ ಬೇಗ್(42) ಸಾವನ್ನಪ್ಪಿದ್ದಾನೆ.ಶಾಹಿದ್ ಬೇಗ್ (22) ಕೊಲೆಗೈದ ಆರೋಪಿಯಾಗಿದ್ದಾನೆ. ಊಟ ಮಾಡುವ ವೇಳೆ ತಂದೆ ಮಗನ ನಡುವೆ ಜಗಳ ನಡೆದು ಮಗ ಅಪ್ಪನನ್ನ ಸುತ್ತಿಗೆಯಲ್ಲಿ ಹೊಡೆದು ಕೊಲೆ ಮಾಡಿದ್ದಾನೆ. ಸಹೋದರಿಯ ಪ್ರೀತಿಯ ವಿಚಾರದಲ್ಲಿ ಅಪ್ಪನ ಕಿರುಕುಳ ಹೆಚ್ಚಾದ ಪರಿಣಾಮ ಈ ಘಟನೆ ನಡೆದಿದೆ. ಅಪ್ಪ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

– ಶಿವಮೊಗ್ಗ : ಅಂಗಡಿಯ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಲಕ್ಷಾಂತರ ರೂ. ನಷ್ಟ!

ಶಿವಮೊಗ್ಗ: ಗಾಂಧಿ ಬಜಾರ್‌ನ ಜೈ ಅಂಬೆ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 6 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಗಾಂಧಿ ಬಜಾರ್‌ 1ನೇ ಅಡ್ಡರಸ್ತೆಯಲ್ಲಿರುವ ಜೈ ಅಂಬೆ ಮಾರ್ಕೆಟಿಂಗ್‌ ಸಂಸ್ಥೆಯಲ್ಲಿ ಗ್ಯಾಸ್‌ ಸ್ಟೌ, ಫ್ಯಾನ್‌ಗಳು ಸೇರಿದಂತೆ ವಿವಿಧ ಉಪಕರಣ ಮಾರಾಟ ಮಾಡಲಾಗುತ್ತಿತ್ತು. ಕಳೆದ ರಾತ್ರಿ ಅಂಗಡಿಯ ಮೇಲ್ಭಾಗದ ಗೋಡೋನ್‌ನಲ್ಲಿ ಧಿಡೀರ್‌ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಹಲವು ವಸ್ತುಗಳು ಸುಟ್ಟು ಹೋಗಿವೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ

– ಶಿಕಾರಿಪುರ: ಹೋರಿ ತಿವಿದು ಬೈಕ್ ಸವಾರ ಸಾವು

ಶಿಕಾರಿಪುರ : ತಾಲ್ಲೂಕು ಶಿರಾಳಕೊಪ್ಪದಲ್ಲಿ ಹೋರಿ ತಿವಿದ ಪರಿಣಾಮ ಬೈಕ್ ಸವಾರರೊಬ್ಬರು ಸಾವನ್ನಪ್ಪಿದ್ದಾರೆ. ಶಿರಾಳಕೊಪ್ಪದ ಇಟ್ಟಿಗೆಹಳ್ಳಿ ಬಳಿ ಘಟನೆ ನಡೆದಿದೆ. ಇಲ್ಲಿನ ನಿವಾಸಿ 45 ವರ್ಷದ ಸತೀಶ್ ಮೃತರು. ಇವರು ಮಗನ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರ ಮುಂದೆ ಸಾಗುತ್ತಿದ್ದ ಹೋರಿ ಇದ್ದಕ್ಕಿದ್ದ ಹಾಗೆ ರಚ್ಚೆ ಹಿಡಿದು ಇವರನ್ನು ತಿವಿದಿತ್ತು. ಪರಿಣಾಮ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಹೋರಿ ಮಾಲೀಕ ಹಾಗೂ ಹೋರಿಯನ್ನು ನೋಡಿಕೊಳ್ಳುತ್ತಿದ್ದವರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.