ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಭಾಗ್ಯ!
– ಆನ್ಲೈನ್ ಅರ್ಜಿ ಆಹ್ವಾನ: ಏನಿದು ಯೋಜನೆ?
– ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ
NAMMUR EXPRESS NEWS
ಉಚಿತ ಹೊಲಿಗೆ ಯಂತ್ರ ಹಾಗೂ ಇತರೆ ಉಚಿತವಾಗಿ ಸುಧಾರಿತ ಉಪಕರಣಗಳನ್ನು ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಸರ್ಕಾರದ ಯೋಜನೆಯಡಿ ಪಡೆದುಕೊಳ್ಳಬಹುದು. ಸರ್ಕಾರ ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಹಿಸಲು ಈ ಯೋಜನೆಯನ್ನು ರೂಪಿಸಿದ್ದು 2023-24ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ವೃತ್ತಿನಿರತ ಗ್ರಾಮೀಣ ಕುಶಲಕರ್ಮಿ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡಿರುವ ಅರ್ಹ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸುವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಹತೆ ಹೊಂದಿರುವ ವೃತ್ತಿಪರ ಕುಶಲಕರ್ಮಿಗಳು ಅಗತ್ಯ ದಾಖಲೆಗೊಂದಿಗೆ ಇಲಾಖೆ ನಿಗದಿ ಪಡಿಸಿರುವ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿದ್ಯುತ್ ಚಾಲಿತ ಮರಗೆಲಸ, ದೋಬಿ, ಗಾರೆಕೆಲಸ, ಕಮ್ಮಾರಿಕೆ, ಕ್ಷೌರಿಕ ಮತ್ತು ವಿದ್ಯುತ್ ಚಾಲಿತ ಹೊಲಿಗೆಯಂತ್ರ ವೃತ್ತಿಯ ಉಪಕರಣಗಳನ್ನು ಪಡೆಯಲು ಬೇಕಾಗುವ ದಾಖಲೆಗಳು ಈ ಕೇಳಗಿನಂತಿವೆ.
1. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
4. ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.
4. ರೇಷನ್ ಕಾರ್ಡ್/ ವೋಟರ್ ಐ.ಡಿ ಹೊಂದಿದ್ದಲ್ಲಿ ಪ್ರತಿ ಲಗತ್ತಿಸುವುದು.
5. ಮರಗೆಲಸ, ಗಾರೆಕೆಲಸ, ಕ್ಷೌರಿಕ ಹಾಗೂ ಧೋಬಿ ಕಸುಬಿನ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಡೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ,
ಯೋಜನೆ 2: ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ:
ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆಯಡಿ ಸಹಾಯಧನ ಪಡೆಯಲು ಈ ದಾಖಲೆಗಳು ಅಗತ್ಯ
1. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
2. ಜಾತಿ ಪ್ರಮಾಣ ಪತ್ರ
3. ಬ್ಯಾಂಕ್ ಪಾಸ್ ಪುಸ್ತಕ
4. ನಿಗದಿತ ನಮೂನೆಯಲ್ಲಿ ಬ್ಯಾಂಕ್ನಿಂದ ಸಾಲ ಮಂಜೂರಾತಿ/ಬಿಡುಗಡೆಯಾಗಿರುವ ಪತ್ರ
ಯೋಜನೆ 3: ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ
ಸಹಾಯಧನ ಪಡೆಯುವವರು ಈ ದಾಖಲೆಗಳನ್ನು ನೀಡಬೇಕು.
6. ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗಿ ಪತ್ರ
7. ಬ್ಯಾಂಕಿನಿಂದ ಬಡ್ಡಿ ಸಹಾಯಧನದ ನಮೂನೆ ಪತ್ರ
ಹೆಚ್ಚಿನ ಮಾಹಿತಿಗಾಗಿ ಸಂಬಂದಪಟ್ಟ ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳು/ ಉಪ ನಿರ್ದೇಶಕರ ಕಛೇರಿ, ಗ್ರಾಮೀಣ ಕೈಗಾರಿಕೆಗಳು (ಖಾದಿ ಮತ್ತು ಗ್ರಾಮೋದ್ಯೋಗ, ಇವರನ್ನು ಸಂಪರ್ಕಿಸಬಹುದು.