ರಕ್ಷಾಬಂಧನ ಆಚರಣೆಗೆ ಅಡ್ಡಿ ಆರೋಪ
-ಶಾಲೆಯಲ್ಲಿ ರಾಕಿ ಬಿಚ್ಚಿದ ಹಿನ್ನೆಲೆ.
-ಶಾಲೆಗೆ ಭೇಟಿ ನೀಡಿದ ಪೊಲೀಸರು.
ಸಾಗರ : ಸಾಗರದ ಮಂಕಲೆ ರಸ್ತೆಯಲ್ಲಿರುವ ಖಾಸಗಿ ಆಂಗ್ಲ ಮಧ್ಯಮ ಶಾಲೆಯಲ್ಲಿ ರಕ್ಷಾಬಂಧನದ ಪ್ರಯುಕ್ತ ಕೆಲವೊಂದಿಷ್ಟು ಹೆಣ್ಣು ಮಕ್ಕಳು ತಮ್ಮ ಸಹಪಾಠಿಗೆ ರಾಖಿ ಕಟ್ಟಿದ್ದಕ್ಕೆ ರಕ್ಷಾಬಂಧನದ ಹಿನ್ನೆಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿದರು. ಒಬ್ಬ ವಿದ್ಯಾರ್ಥಿನಿ ಎಲ್ಲರ ಎದುರು ವಿದ್ಯಾರ್ಥಿಯೊಬ್ಬನಿಗೆ ರಾಖಿ ಕಟ್ಟಿದ್ದರಿಂದ ವಿದ್ಯಾರ್ಥಿ ಮನನೊಂದು ಶೌಚಾಲಯದ ಕೊಠಡಿಗೆ ತೆರಳಿ ಅಳಲು ಆರಂಭಿಸಿದ್ದಾನೆ ಎನ್ನಲಾಗಿದೆ. ಕಟ್ಟಿಸಿದ್ದ ರಾಖಿಯನ್ನು ಬಿಚ್ಚಿಸಿದ್ದಲ್ಲದೆ, ಮರುದಿನ ಬೆಳಿಗ್ಗೆ 11 ಗಂಟೆಯವರೆಗೂ ವಿದ್ಯಾರ್ಥಿಗಳನ್ನು ಶಾಲೆ ಕೊಠಡಿಯಿಂದ ಹೊರಗೆ ನಿಲ್ಲಿಸುವ ಶಿಕ್ಷೆ ನೀಡಿದ್ದು ಎಷ್ಟು ಸರಿ’ ಎಂದು ಸ್ಥಳದಲ್ಲಿದ್ದವರು ಪ್ರಶ್ನಿಸಿದರು ಶಾಲೆಯ ಮುಖ್ಯೋಪಾಧ್ಯಾಯನಿ ರಾಕಿಯನ್ನ ಬಿಚ್ಚಿಸಿ, ಆ ಮಕ್ಕಳನ್ನ ಒಂದು ವಾರಗಳ ಕಾಲ ಶಾಲೆಯಿಂದ ಸಸ್ಪೆಂಡ್ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬೆಳಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಹಿಂದೂ ಪರ ಸಂಘಟನೆಯ ಮುಖ್ಯಸ್ಥರು ಆವರಣದಲ್ಲಿ ಗಲಾಟೆಯನ್ನು ಮಾಡಿದರು. ಸಾಗರದ ಡಿ ವೈ ಎಸ್ ಪಿ ಗಣಪತಿ ತಿಮ್ಮಪ್ಪ ನಾಯಕ್ ಅವರು ಶಾಲೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.