ಏಷ್ಯಾ ಕಪ್ನಲ್ಲಿ ಬದ್ಧ ವೈರಿಗಳ ಕಾದಾಟ..!
– ಮಧ್ಯಾಹ್ನ 3ಗಂಟೆಗೆ ಕ್ಯಾಂಡಿಯಲ್ಲಿ ಸೆಣೆಸಾಡಲಿವೆ ಭಾರತ-ಪಾಕ್
NAMMUR EXPRESS NEWS
ನವದೆಹಲಿ: ಏಷ್ಯಾ ಕಪ್ನಲ್ಲಿ ಬದ್ಧ ವೈರಿಗಳ ಕಾದಾಟ ನಡೆಯಲಿದ್ದು, ಕ್ಯಾಂಡಿಯಲ್ಲಿ ಭಾರತ-ಪಾಕ್ ಸೆಣೆಸಾಡಲಿವೆ. ಪಾಕ್ ವೇಗಕ್ಕೆ ಪ್ರತ್ಯುತ್ತರ ಕೊಡಲು ರೋಹಿತ್ ಬ್ಯಾಟರ್ಸ್ ರೆಡಿಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಪಂದ್ಯ ನಡೆಯಲಿದ್ದು, ಭಾರತ-ಪಾಕ್ ಈವರೆಗೆ ಒಟ್ಟು 132 ಬಾರಿ ಕಾದಾಡಿದೆ. ಭಾರತ-ಪಾಕಿಸ್ತಾನ ಏಷ್ಯಾ ಕಪ್ ಎ ಗುಂಪಿನಲ್ಲಿದೆ. ಮೂರು ಬಾರಿ ಏಷ್ಯಾ ಕಪ್ನಲ್ಲಿ ಸೆಣೆಸುವ ಸಾಧ್ಯತೆಗಳಿವೆ.
ಇಂದು ಲೀಗ್ ಹಂತದ ಪಂದ್ಯದಲ್ಲಿ ಮೊದಲ ಕಾದಾಟವಾಗಿದ್ದು, ಕ್ಯಾಂಡಿ ಮೈದಾನ ಸ್ಪಿನ್ನರ್ಗಳಿಗೆ ಸಹಕಾರಿಯಾಗಿದೆ. ಗಾಯದ ಸಮಸ್ಯೆಯಿಂದಾಗಿ ಕನ್ನಡಿಗ ಕೆ.ಎಲ್.ರಾಹುಲ್ ಆಡ್ತಿಲ್ಲ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್,, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಜಸ್ಪೀತ್ ಬುಮ್ರಾ ಫೈನಲ್ ಇಲವೆನ್ನಲ್ಲಿ ಆಡುವ ಸಾಧ್ಯತೆಗಳಿವೆ. ಭಾರತ-ಪಾಕ್ ಏಷ್ಯಾಕಪ್ನಲ್ಲಿ 13 ಬಾರಿ ಮುಖಾಮುಖಿಯಾಗಿವೆ. ಟೀಂ ಇಂಡಿಯಾ 7 ಬಾರಿ ಪಾಕಿಸ್ತಾನವನ್ನು ಮಣಿಸಿದೆ.
ಟೀಂ ಇಂಡಿಯಾ ಸಂಭಾವ್ಯ ತಂಡ :
– ರೋಹಿತ್ ಶರ್ಮಾ- ಬ್ಯಾಟ್ಸ್ಮನ್
– ಶುಭಮನ್ ಗಿಲ್- ಬ್ಯಾಟ್ಸ್ಮನ್
– ವಿರಾಟ್ ಕೊಹ್ಲಿ- ಬ್ಯಾಟ್ಸ್ಮನ್
– ಸೂರ್ಯ ಕುಮಾರ್ ಯಾದವ್- ಬ್ಯಾಟ್ಸ್ಮನ್
– ಇಶಾನ್ ಕಿಶನ್ – ವಿಕೆಟ್ ಕೀಪರ್
– ಹಾರ್ದಿಕ್ ಪಾಂಡ್ಯ- ಆಲ್ರೌಂಡರ್
– ರವೀಂದ್ರ ಜಡೇಜಾ- ಆಲ್ ರೌಂಡರ್
– ಅಕ್ಷರ್ ಪಟೇಲ್- ಆಲ್ ರೌಂಡರ್
– ಕುಲದೀಪ್ ಯಾದವ್- ಸ್ಪಿನ್ ಬೌಲರ್
– ಮೊಹಮ್ಮದ್ ಶಮಿ- ಫಾಸ್ಟ್ ಬೌಲರ್
– ಜಸ್ಟೀತ್ ಬುಮ್ರಾ – ಫಾಸ್ಟ್ ಬೌಲರ್