-ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾ?
-ಕೆಳಗಡೆ ಲಿಂಕ್ ಕ್ಲಿಕ್ ಮಾಡಿ…
NAMMUR EXPRESS NEWS : ಈ ಮೂಲಕ ತಾಲ್ಲೂಕಿನ ಪಡಿತರ ಚೀಟಿದಾರರಿಗೆ ತಿಳಿಯಪಡಿಸುವುದೇನೆಂದರೆ,
1. ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ದಿನಾಂಕ: 01/09/2023 ಅಂದ 10/09/2023 ರವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಸರ್ಕಾರವು ಅವಕಾಶ ಕಲ್ಪಿಸಿರುತ್ತದೆ.
2, ಆದರಂತೆ, ಪಡಿತರ ಚೀಟಿಯಲ್ಲಿನ ಫಲಾನುಭವಿಗಳು ಮಾಹಿತಿಯ ತಿದ್ದುಪಡಿ ಹಾಗೂ
ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರ್ಪಡೆ ಮಾಡಲು
https://ahara.kar.nic.in ವೆಬ್ ಸೈಟ್ನಲ್ಲಿ ಅವಕಾಶ ಇರುತ್ತದೆ.
ಪಡಿತರ ಚೀಟಿದಾರರು ತಾಲ್ಲೂಕಿನ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ನಾಗರೀಕ ಸೇವಾ ಕೇಂದ್ರ ಮತ್ತು ಸೈಬರ್ ಸೆಂಟರ್ಗಳಲ್ಲಿ ಪಡಿತರ ಚೀಟಿ ತಿದ್ದುಪಡಿ ಮತ್ತು ಸೇರ್ಪಡೆ ಆನ್ ಲೈನ್ ಮುಖಾಂತರ ಸಕಾಲದಲ್ಲಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿರುತ್ತದೆ. ಮೇಲ್ಕಂಡಂತೆ ಸೌಲಭ್ಯವನ್ನು ನಿಗದಿತ ಸಮಯದೊಳಗಾಗಿ ಸದುಪಯೋಗಪಡಿಸಿ ಕೊಳ್ಳಬೇಕೆಂದು ಈ ಮೂಲಕ ಪತ್ರಿಕಾ ಪ್ರಕಟಣೆ ನೀಡಿದೆ.