ಜಿ-20 ಸಮ್ಮೇಳನದಲ್ಲಿ “ಭಾರತ್” ಹೆಸರು!
– ಚೀನಾ, ರಷ್ಯಾ ಹೊರತುಪಡಿಸಿ ಉಳಿದೆಲ್ಲಾ ಬಲಿಷ್ಠ ರಾಷ್ಟ್ರಗಳು ಹಾಜರ್
– ದೆಹಲಿಯಲ್ಲಿ ಹಿಂದೆಂದೂ ಕಾಣದಷ್ಟು ಭದ್ರತೆ
NAMMUR EXPRESS NEWS
ದೆಹಲಿ : ಇಂದಿನಿಂದ ಎರಡು ದಿನ G-20 ಸಮ್ಮೇಳನ ನಡೆಯಲಿದ್ದು, ದೆಹಲಿಯ ಪ್ರಗತಿ ಮೈದಾನದಲ್ಲಿ ಶೃಂಗಸಭೆ ನಡೆಸಲಾಗುತ್ತಿದೆ. ವಿಶ್ವ ದಿಗ್ಗಜರ ಸಭೆಗೆ ಭಾರತದ ಮುಂದಾಳತ್ವದಲ್ಲಿ ಭಾರತ ಮಂಟಪದಲ್ಲಿ ಚಿಂತನ-ಮಂಥನ ಮಾಡಲಾಗುತ್ತದೆ. ಅಚ್ಚರಿ ಎಂದರೆ ಸಭೆಯ ಅಧ್ಯಕ್ಷತೆ ವಹಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಟೇಬಲ್ ಎದುರು ಇಂಡಿಯಾ ಬದಲು ಭಾರತ್ ಎಂದು ಬೋರ್ಡ್ ಹಾಕಲಾಗಿದೆ. ಮೊದಲ ದಿನ ಎಲ್ಲಾ ದೇಶದ ಪ್ರಮುಖರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಎರಡು ದಿನಗಳ ಕಾಲ ಜಾಗತಿಕ ಸಮಸ್ಯೆಗಳ ಚರ್ಚೆ , ವ್ಯಾಪಾರ, ವಾಣಿಜ್ಯ, ರಕ್ಷಣೆ, ಪರಿಸರ ವಿಚಾರಗಳ ಸಮಾಲೋಚನೆ ನಡೆಯಲಿದೆ. G-20ಯ 20 ರಾಷ್ಟ್ರಗಳ ನಾಯಕರ ನಡುವೆ ಸಮಾಲೋಚನೆ ನಡೆಸಲಾಗುತ್ತದೆ. ಚೀನಾ, ರಷ್ಯಾ ಹೊರತುಪಡಿಸಿ ಉಳಿದೆಲ್ಲಾ ಬಲಾಡ್ಯ ರಾಷ್ಟ್ರಗಳು ಭಾಗಿಯಾಗಲಿದೆ.
ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತುಕತೆ :
ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸ್ಥಾನಕ್ಕೆ ಅಮೆರಿಕ ಬೆಂಬಲ ನೀಡುತ್ತಿದೆ. ಚಂದ್ರಯಾನ-3 ಯಶಸ್ವಿಗೊಳಿಸಿದ ಭಾರತಕ್ಕೆ ಬ್ರೆಡನ್ ಅಭಿನಂದನೆ ಸಲ್ಲಿಸಿದ್ದಾರೆ. ಧಾನಿ ನಿವಾಸ 7 ಲೋಕ ಕಲ್ಯಾಣ್ ಮಾರ್ಗ್ನಲ್ಲಿ ಸುದೀರ್ಘ ಚರ್ಚೆ ನಡೆಯಲಿದ್ದು ಸುಮಾರು 50 ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆಸಲಾಗುತ್ತದೆ. ದೆಹಲಿಯಲ್ಲಿ ಹಿಂದೆಂದೂ ಕಾಣದಷ್ಟು ಭಾರೀ ಭದ್ರತೆ ಒದಗಿಸಲಾಗಿದೆ.