Categories
ಅಂತಾರಾಷ್ಟ್ರೀಯ ಸುದ್ದಿ

ಮೊರಾಕೋದಲ್ಲಿ ಭಾರಿ ಭೂಕಂಪಕ್ಕೆ 296 ಮಂದಿ ಬಲಿ!

ಮೊರಾಕೋದಲ್ಲಿ ಭಾರಿ ಭೂಕಂಪಕ್ಕೆ 296 ಮಂದಿ ಬಲಿ!
– ನೂರಾರು ಜನರಿಗೆ ಗಾಯ: ರಕ್ಷಣಾ ಕಾರ್ಯ ಚುರುಕು
– ಉತ್ತರ ಆಫ್ರಿಕಾದ ದೇಶದಲ್ಲಿ ಘೋರ ದುರಂತ

NAMMUR EXPRESS NEWS
ರಬಾತ್:‌ ಉತ್ತರ ಆಪ್ರಿಕಾದ ದೇಶವಾದ ಮೊರಾಕೊದಲ್ಲಿ ಶುಕ್ರವಾರ ರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಂತರಿಕ ಸಚಿವಾಲಯ ತಿಳಿಸಿದೆ. ಸದ್ಯದ ವರದಿಗಳ ಪ್ರಕಾರ ಮೊರಾಕೋದ ಅಲ್-ಹೌಜ್, ಮರ್ರಾಕೇಶ್, ಔರ್ಜಾಝೇಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಭೂಮಿ ಕಂಪಿಸಿದ್ದು, 296 ಜನ ಸತ್ತಿದ್ದಾರೆ ಎಂದು ತಿಳಿಸಲಾಗಿದೆ. ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೇಶದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ಮರ್ಕೆಚ್‌ನ ಹಳೆಯ ಕಟ್ಟಡಗಳು ನಾಶವಾಗಿರುವ, ಧ್ವಂಸಗೊಂಡಿರುವ, ಪ್ರಸಿದ್ಧ ಕೆಂಪು ಗೋಡೆ ಹಾನಿಗೊಳಗಾಗಿರುವುದನ್ನು ತೋರಿಸುವ ವೀಡಿಯೊಗಳನ್ನು ಸ್ಥಳೀಯ ನಿವಾಸಿಗಳು ಪೋಸ್ಟ್ ಮಾಡಿದ್ದಾರೆ. ಪ್ರವಾಸಿಗರು ಮತ್ತು ಇತರರು ಆತಂಕದಿಂದ ಬೊಬ್ಬಿಡುವ, ನಗರದ ರೆಸ್ಟೋರೆಂಟ್‌ಗಳಿಂದ ಜನ ಹೊರಗೋಡಿಬರುವ ವೀಡಿಯೊಗಳನ್ನೂ ಪೋಸ್ಟ್ ಮಾಡಿದ್ದಾರೆ.

ಭಾರತದ ಪ್ರಧಾನಿ ಮೋದಿ ಸಂತಾಪ

ಮೊರಾಕೋದ ದುರಂತಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. “ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕೊದ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆʼʼ ಎಂದು ಮೋದಿ ಔಪಚಾರಿಕವಾಗಿ ಟ್ವಿಟರ್ ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ ಅಡಿಕೆ ಮಾರುಕಟ್ಟೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.