ಅನೈತಿಕ ಪೊಲೀಸ್ ಗಿರಿ ಸಹಿಸಲ್ಲ…!
– ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಖಡಕ್ ವಾರ್ನಿಂಗ್
– ಕಾಸರಗೋಡು : ಎಂಡಿಎಂಎ, ಗಾಂಜಾ ಸಹಿತ ಸೆರೆ
– ಮಂಜೇಶ್ವರ: ಅಡಿಕೆ ಕಳವು: ಇನ್ನೋರ್ವನ ಬಂಧನ
NAMMUR EXPRESS NEWS
ಮಂಗಳೂರು: ಕರ್ನಾಟಕ ಪೊಲೀಸರಿಗೆ ಸವಾಲಾಗಿರುವುದು ಅನೈತಿಕ ಪೊಲೀಸ್ಗಿರಿ.
ಮಂಗಳೂರು ಭಾಗದಲ್ಲಿ ಸಮಸ್ಯೆ ಹೆಚ್ಚಿರುವ ಬಗ್ಗೆ ಅರಿವಿದೆ. ಪೊಲೀಸರು ಈಗಾಗಲೇ ಈ ಬಗ್ಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅನೈತಿಕ ಪೊಲೀಸ್ ಗಿರಿಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಗಳ ಮೂಲಕ ಕಾನೂನಿನ ನೈಜ ಮುಖವನ್ನು ತೋರಿಸಲಿದ್ದೇವೆ ಎಂದು ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ವಾರ್ನಿಂಗ್ ಕೊಟ್ಟಿದಾರೆ ಮಂಗಳೂರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು ಮತೀಯ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ವಹಿಸಲಿದ್ದೇವೆ ಎಂದರು.
ಅನೈತಿಕ ಪೊಲೀಸ್ ಗಿರಿ ಕೃತ್ಯಗಳಿಗೆ ಯಾರು ಮುಂದಾಗುತ್ತಾರೆ ಮತ್ತು ಅವರಿಗೆ ಬೆನ್ನ ಹಿಂದೆಯಿಂದ ಯಾರೂ ಬೆಂಬಲ ನೀಡುತ್ತಾರೆಯೋ ಅವರ ಬಗ್ಗೆ ತುರ್ತಾಗಿ ಕಾನೂನಿನಡಿ ಕೈಗೊಳ್ಳಬಹುದಾದ ಕ್ರಮಗಳನ್ನು ವಹಿಸಲಾಗುವುದು. ಸಾಮಾನ್ಯವಾಗಿ ಇಂತಹ ಕೃತ್ಯಗಳು ನಡೆದಾಗ ತಡವಾಗಿ ಕ್ರಮ ವಹಿಸಲು ಮುಂದಾದಾಗ ಅವರಿಗೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿಯೇ ಮಂಗಳೂರು ಅತ್ಯಂತ ಮಹತ್ವ ಹಾಗೂ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಾಗಿ ಇಲ್ಲಿ ಕೆಲಸಮಾಡುವಾಗ ನಮ್ಮ ಹೆಚ್ಚುವರಿ ಪ್ರಯತ್ನವನ್ನು ಹಾಕಬೇಕಾಗುತ್ತದೆ. ನನಗೆ ಈಗ ಇಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಬೀಟ್ ವ್ಯವಸ್ಥೆಯೊಂದಿಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದರು
ಎಂಡಿಎಂಎ, ಗಾಂಜಾ ಸಹಿತ ಸೆರೆ
ಕಾಸರಗೋಡು: ಅಣಂಗೂರಿನಿಂದ 21 ಗ್ರಾಂ ಎಂಡಿಎಂಎ ಮತ್ತು 7.374 ಗ್ರಾಂ ಗಾಂಜಾ ವಶಪಡಿಸಿಕೊಂಡ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಟ್ಯಾಡ್, ಈ ಸಂಬಂಧ ಅಣಂಗೂರು ಸುಲ್ತಾನ್ ನಗರದ ಅಬ್ದುಲ್ ಖಾದರ್ (26)ನನ್ನು ಬಂಧಿಸಿದೆ.
ಅಡಿಕೆ ಕಳವು: ಇನ್ನೋರ್ವನ ಬಂಧನ
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಂಪೌಂಡ್ನ ರೆಹ್ಮಾನ್ ಸಹೀಂ ಅವರ ಮನೆಯಿಂದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಡಾಜೆ ಕಾಜೂರು ನಿವಾಸಿ ಅಬ್ದುಲ್ ನೌಶಾದ್(20)ನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಮೂವರನ್ನು ಈವರೆಗೆ ಬಂಧಿಸಲಾಗಿದೆ.
ಸಾಮಗ್ರಿ ಕಳವು: ಮೂವರ ಬಂಧನ
ಬದಿಯಡ್ಕ: ಕಂದಲ್-ಮುಂಡಿತ್ತಡ್ಕ ರಸ್ತೆ ನಿರ್ಮಾಣಕ್ಕಾಗಿ ತಂದಿರಿಸಿದ್ದ ಉಪಕರಣಗಳು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಪಾಲಿಪೊನದ ನಿಸಾದ್(48), ಮೇಲ್ಪರಂಬ ಕಳನಾಡಿನ ಇರ್ಫಾನ್(36) ಮತ್ತು ಚೆರ್ಕಳ ಕೆಕೆ ಪುರದ ಸುಂದರ (48) ನನ್ನು ಪೊಲೀಸರು ಬಂಧಿಸಿದ್ದಾರೆ.