Categories
ತೀರ್ಥಹಳ್ಳಿ

ಬೈಕ್ ಇಂಜಿನ್ ಒಳಗೆ ಇತ್ತು ಹಾವು!

ಬೈಕ್ ಇಂಜಿನ್ ಒಳಗೆ ಇತ್ತು ಹಾವು!
– ತೀರ್ಥಹಳ್ಳಿ ಪಟ್ಟಣದಲ್ಲಿ ನಿಲ್ಲಿಸಿದ್ದ ಬೈಕ್
– ಹಾವು ಇಳಿದುಹೋಗುವವರೆಗೆ ಕಾದ ಬೈಕ್ ಸವಾರ!

ವರದಿ: ಅಮಿತ್ ತೀರ್ಥಹಳ್ಳಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದಲ್ಲಿ ನಿಲ್ಲಿಸಿದ್ದ ಬೈಕ್ ಒಂದರ ಇಂಜಿನ್ ಒಳಗೆ ಸಣ್ಣ ಹಾವೊಂದು ಸೇರಿಕೊಂಡಿದ್ದ ಅಚ್ಚರಿ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ತೀರ್ಥಹಳ್ಳಿಯ ಗಾಂಧಿ ಚೌಕದ ತೃಪ್ತಿ ಬೇಕರಿ ಮುಂದೆ ನಿಲ್ಲಿಸಿದ್ದ ಬೈಕಿನ ಇಂಜಿನ್ ಒಳಗೆ ಸಣ್ಣದೊಂದು ಹಾವು ಸೇರಿಕೊಂಡಿದ್ದನ್ನು ಸ್ಥಳೀಯರು ನೋಡಿದ್ದು, ವಾಹನ ಮಾಲೀಕರಿಗೆ ತಿಳಿಸಿದ್ದಾರೆ. ಹಾವು ಬೈಕಿಂದ ಇಳಿದುಹೋಗುವವರೆಗೂ ಕಾದು ನಂತರ ಬೈಕ್ ಸವಾರ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಇತ್ತೀಚಿಗೆ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣದಲ್ಲಿ ಬಸ್ ಇಂಜಿನ್ ಅಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.