ಭಿಕ್ಷಾಟನೆ ಮಾಡಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ ಸ್ಥಳೀಯರು..!
– ಶೃಂಗೇರಿಯ ಕಡಬಗೆರೆ ಗ್ರಾಮಸ್ಥರ ವಿನೂತನ ಪ್ರತಿಭಟನೆ
-ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಕಾರು ಪಲ್ಟಿ..!
– ಬಾಳೆಹೊನ್ನೂರು: ಮೂವರು ಗಾಂಜಾ ಕೇಸ್! ಪೋಲಿಸ್ ಬಳಿ ಸಿಕ್ಕಿಬಿದ್ದ ಆರೋಪಿಗಳು
NAMMUR EXPRESS NEWS
ಶೃಂಗೇರಿ: ಭಿಕ್ಷಾಟನೆ ಮಾಡಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ ಕಡಬಗೆರೆ ಸ್ಥಳೀಯರು ಇದೀಗ ಆಡಳಿತಕ್ಕೆ ಸಡ್ಡು ಹೊಡೆದಿದ್ದಾರೆ. ಬಸ್ ನಿಲ್ದಾಣಕ್ಕಾಗಿ ಆಗ್ರಹಿಸಿ ಸಾರ್ವಜನಿಕರು ವಿನೂತನ ಪ್ರತಿಭಟನೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡಬಗೆರೆ ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೆ ಜನರು ಬಿಸಿಲು, ಮಳೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾರೆ. ಈಹಿನ್ನೆಲೆಯಲ್ಲಿ ಸ್ಥಳೀಯರು ಬಸ್ ನಿಲ್ದಾಣ ಮಾಡಿಸುವಂತೆ ಹತ್ತು ವರ್ಷಗಳಿಂದ ನೂರಾರು ಬಾರಿ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಅಲ್ಲದೇ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಅವರಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ರೋಸಿಹೋದ ಸಾರ್ವಜನಿಕರು ಭಿಕ್ಷಾಟನೆ ಮಾಡಿ ಅದರಿಂದ ಬಂದ ಹಣದಿಂದ ಟಾರ್ಪಲ್ ಖರೀದಿಸಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸಿದ್ದಾರೆ.
ಕಾಫಿ ತೋಟಕ್ಕೆ ಕಾರು ಪಲ್ಟಿ..!
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಫಿ ತೋಟಕ್ಕೆ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ನಡೆದಿದೆ.ಕೊಟ್ಟಿಗೆಹಾರದಿಂದ ಬಾಳೂರಿಗೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಬಾಳೂರಿನ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅಜ್ಜಿ ಕುಡಿಗೆ ತೋಟಕ್ಕೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾಳೆಹೊನ್ನೂರು: ಮೂವರು ಗಾಂಜಾ ಕೇಸ್!
ಹಿರೇಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೂವಿನಹಕ್ಕು ಸರ್ಕಲ್ ಬಳಿ 450 ಗ್ರಾಂ ಗಾಂಜಾ ಹೊಂದಿದ್ದ ಮೂವರನ್ನು ಬಾಳೆಹೊನ್ನೂರು ಪಿಎಸ್ಐ ದಿಲೀಪ್ ಕುಮಾರ್ ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಾದ ಜೀವನ್, ಪ್ರಕಾಶ್ ಪೀಟರ್ ಡಿಸೋಜ, ವಿಜಯ ಶೆಟ್ಟಿ ಹಾಗೂ ಅಲೆಸ್ಟರ್ ಜೋಸೆಫ್ ತಾವೋ ಎಂಬುವವರು ಜಾನ್ಸನ್ ಎಂಬುವವರಿಂದ ಹತ್ತು ಸಾವಿರ ರೂ ನೀಡಿ ಗಾಂಜಾ 450 ಗ್ರಾಂ ಗಾಂಜಾ ಖರೀದಿಸಿದ್ದರು. ವಿಷಯ ತಿಳಿದ ಬಾಳೆಹೊನ್ನೂರು ಪೊಲೀಸರು ಗಾಂಜಾ ಸಮೇತ ಮೂವರು ಆರೋಪಿಗಳನ್ನು ಹಾಗೂ ಎರಡು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.