ಗೌರಿ ಗಣೇಶ ಹಬ್ಬ ಆಚರಣೆ ವಿಶೇಷ!
– ಗೌರಿ ಹಬ್ಬ ಆಚರಣೆಯ ಬಗ್ಗೆ ನಿಮಗೆಷ್ಟು ಗೊತ್ತು..?
– ಸ್ವರ್ಣ ಗೌರಿ ವ್ರತ ಆಚರಣೆ ಹೇಗೆ..?
NAMMUR EXPRESS NEWS
ವಯಸ್ಸಿನ ಅಂತರವಿಲ್ಲದೆ ಆಚರಿಸುವ ಹಬ್ಬಗಳಲ್ಲಿ ಭಾದ್ರಪದ ಮಾಸದ ತದಿಗೆಯ 13ನೇ ದಿನ ಬರುವ ಗೌರಿಹಬ್ಬ ಇದಕ್ಕೆ ತನ್ನದೇ ಆದ ಮಹತ್ವವಿದೆ. ಗೌರಿ ದೇವಿಯು ಸಂತಾನ ಭಾಗ್ಯದ ಜೊತೆ ಇಚ್ಛಾ ಶಕ್ತಿಯನ್ನು ಹೆಚ್ಚಿಸುವ ದೇವಿಯಾಗಿರುವ ಈಕೆ ಪ್ರಕೃತಿ ಮಾತೆಯ ಸ್ವರೂಪವಾಗಿದ್ದಾಳೆ. ಗೌರಿ ಹಬ್ಬದ ಆಚರಣೆಯ ಹಿಂದೆಯಿದ್ದೆ ಒಂದು ಪೌರಾಣಿಕ ಕಥೆ.ಹಿಂದೂ ಪುರಾಣಗಳ ಪ್ರಕಾರ, ಗೌರಿ ದೇವಿಯು ಭೂಮಿಯ ಮೇಲಿನ ತನ್ನ ತವರುಮನೆಗೆ ಹೋಗಲು ಬಯಸಿದ್ದಳು. ಆದ್ದರಿಂದ, ಅವಳು ತನ್ನ ಆಸೆಯನ್ನು ಶಿವನಲ್ಲಿ ತಿಳಿಸಿ ಒಪ್ಪಿಗೆ ಪಡೆದ ನಂತರ ಗೌರಿ ದೇವಿಯು ತವರುಮನೆಗೆ ಮನೆಗೆ ಬಂದಳು. ಆಕೆಯನ್ನು ಸಂತೋಷ ಮತ್ತು ಪ್ರೀತಿ ಪ್ರೀತಿಯಿಂದ ಸ್ವಾಗತಿಸಿದರು ದೊಡ್ಡ ಔತಣವನ್ನು ಏರ್ಪಡಿಸುವ ಮೂಲಕ ಮತ್ತು ಸ್ನೇಹಿತರನ್ನು ಆಹ್ವಾನಿಸುವ ಮೂಲಕ ಆಕೆಯ ಗೃಹಪ್ರವೇಶವನ್ನು ಆಚರಿಸಿದರು.
ಒಂಟಿತನದಿಂದ ಗಣೇಶನು ಭೇಟಿ ತಾಯಿಯನ್ನು ನೋಡಲು ನಿರ್ಧರಿಸಿದ ಗಣೇಶ ಚಿಕ್ಕ ಹುಡುಗನಂತೆ ವೇಷ ಧರಿಸಿ ತನ್ನ ಅಜ್ಜಿಯ ಮನೆಗೆ ಗಣೇಶ ಬಂದ್ರೂ ಗೌರಿ ದೇವಿಯು ಗಣೇಶನನ್ನು ಗುರುತಿಸಲಿಲ್ಲ. ಆದರೂ ಸಹ ಅವಳು ಗಣೇಶನನ್ನು ಪ್ರೀತಿಯಿಂದ ಸ್ವಾಗತಿಸಿದಳು ಮತ್ತು ಗಣೇಶನು ತನ್ನ ತಾಯಿಯ ಪ್ರೀತಿ ಮಮತೆಯಿಂದ ಸಂತೋಷಗೊಂಡನು. ನಂತರ ಶಿವನು ಗೌರಿ ದೇವಿ ಗೌರಿಯನ್ನು ಕರೆದುಕೊಂಡು ಹೋಗಲು ಬಂದಾಗ, ಅವನು ಗಣೇಶನ ನಿಜವಾದ ರೂಪವನ್ನು ಗೌರಿ ದೇವಿಯು ರೋಮಾಂಚನಗೊಂಡು ಮತ್ತು ಆಶ್ಚರ್ಯಚಕಿತಳಾದಳು. ಹಾಗಾಗಿ ಅಂದಿನಿಂದ ಗೌರಿ ಗಣೇಶ ಪೂಜೆಯನ್ನು ಆಚರಿಸುವ ಸಂಪ್ರದಾಯ ಆರಂಭವಾಗಿದೆ. ಇದು ಗೌರಿ ದೇವಿಯು ತನ್ನ ಹೆತ್ತವರೊಂದಿಗೆ ಪುನರ್ಮಿಲನವನ್ನು ಮತ್ತು ಗಣೇಶನಿಗೆ ತನ್ನ ತಾಯಿಯ ಮೇಲಿನ ಪ್ರೀತಿಯನ್ನು ಸಂಕೇತಿಸುತ್ತದೆ ಅಲ್ಲಿದ ಗೌರಿ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದು ವದಂತಿಯಿದೆ.
ಗೌರಿ ವ್ರತ ಆಚರಣೆಯ ವಿಶೇಷತೆ ಹೇಗೆ…?
ಗೌರಿ ಅಂದರೆ ಪಾರ್ವತಿ. ಮುತೈದೆಯಾದ ಗೌರಿ ಪೂಜೆಯನ್ನು ಅತ್ಯಂತ ಮಂಗಳ ಸ್ವರೂಪ ಎಂದು ಪರಿಗಣಿಸಲಾಗುವುದು. ಅಂದು ಗೌರಿ ಮೂರ್ತಿಯನ್ನ ಮೂರ್ತಿಯನ್ನು ಮನೆಗೆ ತಂದು ಹಬ್ಬದ ಆರಂಭವನ್ನು ಮಾಡುತ್ತಾರೆ. ಹೆಣ್ಣು ಮಕ್ಕಳು ಈ ಹಬ್ಬವನ್ನು ಸಡಗರದಿಂದ ಆಚರಸಲಾಗುತ್ತದೆ,
ಸೌಮಾಂಗಲ್ಯ ಸ್ವರೂಪ ವಸ್ತುಗಳಿಂದ ದೇವಿಯನ್ನು ಅಲಂಕರಿಸಿ ಪೂಜೆ ಮಾಡುವುದು ವಾಡಿಕೆ
ಗೌರಿಗೆ ಅಲಂಕಾರ..!
ಮಂಗಳ ಗೌರಿಗೆ ಹೊಸ ಸೀರೆ ಅಥವಾ ಬಟ್ಟೆಯಿಂದ ಸಿಂಗರಿಸಿ, ಕೈಬಳೆ, ಬಂಗಾರದ ಸರಗಳನ್ನು ತೊಡಿಸುತ್ತಾರೆ. ನಂತರ ಪರಿಮಳದ ಹೂವುಗಳಿಂದಲ ಸುಂದರವಾಗಿ ಅಲಂಕಾರ ಮಾಡುವರು. ಅರಿಶಿನ ಕುಂಕುಮವು ಅವಳಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಅರಿಶಿನ ಕುಂಕುಮವನ್ನು ನೀಡುವುದರ ಮೂಲಕ ಅಲಂಕಾರ ಮಾಡಲಾಗುತ್ತದೆ.
ನೈವೇದ್ಯ ಏನೇನು?
ಗಣೇಶನಿಗೆ ಇಷ್ಟವಾಗುವಂತಹ ಸಿಹಿ ತಿಂಡಿ ಹಾಗೂ ಕುರುಕಲು ತಿಂಡಿಗಳು, ತಾಂಬೂಲ, ಹಣ್ಣು-ಹಂಪಲು, ತೆಂಗಿನಕಾಯಿಗಳನ್ನು ನೈವೇದ್ಯಕ್ಕೆ ಇಡುತ್ತಾರೆ. ಹೋಳಿಗೆ ಪಾಯಸ ಹೀಗೆ ಹಲವು ತರದ ಸಿಹಿ ತಿಂಡಿಯನ್ನು ತಯಾರಿಸಿ ನೈವೇದ್ಯ ನೀಡುತ್ತಾರೆ.
ಬಾಗಿನ ನೀಡುವುದು ಹೇಗೆ?
ಈ ಹಬ್ಬದಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಂದಿರಿಗೆ ಬಾಗಿನ ನೀಡುತ್ತಾರೆ. ತಾಯಿ ಇಲ್ಲದವರು, ಅತ್ತಿಗೆ, ಅಕ್ಕ, ಅತ್ತೆ ಹಾಗೂ ಹಿರಿಯ ಮಹಿಳೆಯರಿಗೆ ನೀಡುವುದು ಸಂಪ್ರದಾಯ. ಅಂದು ಐದು ಬಾಗಿನವನ್ನು ನೀಡಬೇಕು. ಬಾಗಿನದಲ್ಲಿ ಅಕ್ಕಿ, ಕಾಯಿ, ಬೆಲ್ಲದ ಅಚ್ಚು, ತೊಗರಿಬೇಳೆ, ಗೋಧಿ ಅಥವಾ ರವೆ, ಉದ್ದಿನ ಬೇಳೆ ಸೇರಿದಂತೆ ಐದು ಬಗೆಯ ಬೇಳೆಗಳು, ಐದು ಬಗೆಯ ತರಕಾರಿ, ಐದು ಬಗೆಯ ಹಣ್ಣುಗಳು, ಬ್ರೌಸ್ ಪೀಸ್ ಅಥವಾ ಸೀರೆ, ಸೌಂದರ್ಯ ಅಲಂಕಾರಿ ವಸ್ತುಗಳಾದ ಹಣಿಗೆ, ಕನ್ನಡಿ, ಕಾಡಿಗೆ, ಅರಿಶಿನ, ಕುಂಕುಮ, ಈ ಬಾಗಿನದ ಮೇಲೆ ಹೆಣ್ಣು ಮಕ್ಕಳಿಗೆ ವಿಶಿಷ್ಟ ಗೌರವ.
ನೈವೇದ್ಯ ನೀಡದ ಬಳಿಕ ಗೌರಿಯನ್ನು ನೀರಿನಲ್ಲಿ ವಿಷರ್ಜನೆ ಮಾಡಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಹೋದಂತೆ ಭಿನ್ನವಾಗಿ ಈ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ.ಹೀಗೆ ಗೌರಿ ಹಬ್ಬವು ತನ್ನದೇ ಆದ ಛಾಪನ್ನು ಮೂಡಿಸಿದ್ದೆ ನಮ್ಮಲ್ಲಿದೆ.
ಹಬ್ಬಗಳ ಆಚರಣೆ ಹೇಗೆ ಇರಲಿ ಹಬ್ಬಗಳನ್ನು ಆಚರಿಸುವುದ್ದರಿಂದ ಬಾಂಧವ್ಯದ ಬೆಸುಗೆ ಹೆಚ್ಚಾಗುತ್ತದೆ.
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು.