ವಾಹನಕ್ಕೆ ಬಾರ್ ಕೋಡ್ ನಂಬರ್ ಪ್ಲೇಟ್ ಕಡ್ಡಾಯ!
– ನೂತನ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ: 2019ಕ್ಕಿಂತ ಹಿಂದಿನ ವಾಹನಗಳಿಗೆ ಅನ್ವಯ
– ಪ್ಲೇಟ್ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆ: ನ.17 ಕೊನೆ ದಿನ
NAMMUR EXPRESS NEWS – ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ – ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ವಾಹನಗಳ ಮಾಲೀಕರು ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ (hsrp) ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (hsrp) ಅಳವಡಿಕೆ ಮಾಡಲು ಸಾರಿಗೆ ಇಲಾಖೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ.
ಹೆಚ್.ಎಸ್.ಆರ್.ಪಿ( ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ವಾಹನಗಳ ನಂಬರ್ ಪ್ಲೇಟ್ ನಲ್ಲೇ ಈ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನದಿಂದ ವಾಹನ ಕಳ್ಳತನ, ಕದ್ದ ವಾಹನ ಬಳಸಿ ಮಾಡೋ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತದೆ. ಜೊತೆಗೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬೇಧಿಸಲು ಅನುಕೂಲಗಲಿದೆ. hsrp ನಂಬರ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಇನ್ನೂ ಈ ತಂತ್ರಜ್ಞಾನ ಅಳವಡಿಸಿರೋ ವಾಹನ ರಸ್ತೆಯಲ್ಲಿ ಸಂಚರಿಸುವಾಗಲೇ ವಾಹನವನ್ನು ಗುರುತಿಸಬಹುದು. ಈ ನಂಬರ್ ಪ್ಲೇಟ್ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆಯೂ ಮಾಡಲಾಗಿರುತ್ತದೆ.
ಎಲ್ಲಾ ವಾಹನಗಳಿಗೂ ಕಡ್ಡಾಯ ಈ ನಂಬರ್ ಪ್ಲೇಟ್
ರಾಜ್ಯದ ಎಲ್ಲ ವಾಹನಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟೇಲರ್, ಟ್ರ್ಯಾಕ್ಟರ್ ಸೇರಿದಂತೆ ಎಲ್ಲಾ ವಾಹನಗಳ ಮೇಲೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳ (hsrp) ಅಳವಡಿಸುವಿಕೆ ಕಡ್ಡಾಯ ಮಾಡಲಾಗಿದೆ.ಕರ್ನಾಟಕದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ನಂತರದಲ್ಲಿ ನೋಂದಾಯಿಸಲ್ಪಟ್ಟ ಬಹುತೇಕ ವಾಹನಗಳಲ್ಲಿ ಈ ನಂಬರ್ ಪ್ಲೇಟ್ ಇದೆ ಎನ್ನಲಾಗಿದೆ. ಆದರೆ, ಅದಕ್ಕೆ ಮೊದಲು ನೋಂದಾಯಿತವಾಗಿರುವ ಹಳೆಯ ಮತ್ತು ಅಸ್ತಿತ್ವದಲ್ಲಿರುವ ವಾಹನಗಳಲ್ಲಿ ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.
2019ಕ್ಕಿಂತ ಹಳೆ ವಾಹನಗಳಿಗೆ ಕಡ್ಡಾಯ
ಹಳೆಯ ವಾಹನಗಳ ಮೇಲೆ ಎಚ್.ಎಸ್.ಆರ್.ಪಿ ಅಳವಡಿಸಲು ಏನು ಮಾಡಬೇಕು http://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ. ನಿಮ್ಮ ವಾಹನದ ವಿವರಗಳನ್ನು ಭರ್ತಿ ಮಾಡಿ. ಎಚ್ಎಸ್ಆರ್ಪಿ ಜೋಡಣೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮಡೀಲರ್ಗಳ ಸ್ಥಳವನ್ನು ಆಯ್ಕೆಮಾಡಿ.
hsrp ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ, ಯಾವುದೇ ಪಾವತಿಯನ್ನು ನಗದು ರೂಪದಲ್ಲಿ ಮಾಡಬೇಕಾಗಿಲ್ಲ. ವಾಹನ ಮಾಲೀಕರ ಮೊಬೈಲ್ಗೆ otp ಕಳುಹಿಸಲಾಗುತ್ತದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ನಂಬರ್ ಪ್ಲೇಟ್ ಅಳವಡಿಸುವಿಕೆಯ ದಿನಾಂಕ ಮತ್ತು ಸಮಯ ಆಯ್ಕೆಮಾಡಿ.
ನಿಮ್ಮಯಾವುದೇ ವಾಹನ ತಯಾರಕ ಅಥವಾ ನಂಬರ್ ಪ್ಲೇಟ್ ಮಾಡಿಸುವ ಡೀಲರ್ಗಳನ್ನೂ ಭೇಟಿ ಮಾಡಬಹುದು.
(hsrp)ನಂಬರ್ ಪ್ಲೇಟ್ ಜೋಡಣೆಗಾಗಿ, ಆನೈನ್ ಕಚೇರಿ
ಅಥವಾ ಮನೆಯಿಂದಲೂ ಅರ್ಜಿ ಸಲ್ಲಿಸಬಹುದು.