ಅಮ್ಮ ಮಗನಿಗೆ ಒಟ್ಟಿಗೆ ಪೂಜೆ!
– ಎಲ್ಲೆಡೆ ಗಣಪತಿ, ಗೌರಿ ಹಬ್ಬ ಶುರುವಾಯ್ತು!
– ಮುಂಜಾನೆಯಿಂದಲೇ ದೇಗುಲಗಳಲ್ಲಿ ಪೂಜೆ, ಸಿದ್ಧತೆ
– ಗಣೇಶನ ಇಟ್ಟು ಗಣೇಶೋತ್ಸವ
– ಜನರಿಂದ ಭಕ್ತಿ ಭಾವದ ಆಚರಣೆ
NAMMUR EXPRESS NEWS – ಗಣಪತಿ, ಗೌರಿ ಹಬ್ಬದ ಸಂಭ್ರಮ ಸೋಮವಾರ ಬೆಳಗ್ಗೆಯಿಂದಲೇ ಶುರುವಾಗಿದೆ. ಗೌರಿ, ಗಣೇಶ ಪೂಜೆ ನಡೆಯುತ್ತಿದೆ. ಮುಂಜಾನೆಯಿಂದಲೇ ದೇಗುಲಗಳಲ್ಲಿ ಪೂಜೆ ಮಾಡಲಾಗುತ್ತಿದೆ. ತಾಯಿ ಮಗ ಗೌರಿ ಗಣೇಶನ ಪೂಜೆ ಒಟ್ಟಿಗೆ ಮಾಡಲಾಗುತ್ತಿದೆ. ಎಲ್ಲೆಡೆ ಸಂಭ್ರಮ. ಮನೆ ಮಾಡಿದೆ. ಮನೆ ಮನೆಯಲ್ಲಿ ಗೌರಿ, ಗಣೇಶನ ಇಟ್ಟು ಪೂಜೆ ಮಾಡಲಾಗುತ್ತಿದೆ. ಕುಟುಂಬದವರೆಲ್ಲರೂ ಸೇರಿ ಹೊಸ ಬಟ್ಟೆ ತೊಟ್ಟು, ಅಲಂಕಾರ ಮಾಡಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಜನ ಮಾರುಕಟ್ಟೆಗೆ ತೆರಳಿ ಹೂವು ಹಣ್ಣು, ವಿಗ್ರಹ, ಬಟ್ಟೆ ಅಗತ್ಯ ವಸ್ತು ಖರೀದಿ ಮಾಡಿದ್ದಾರೆ.
ಜನರಿಂದ ಭಕ್ತಿ ಭಾವದ ಆಚರಣೆ
ಹಿಂದೂಗಳ ಪವಿತ್ರ ಹಬ್ಬ ಗೌರಿ ಗಣೇಶ ಹಬ್ಬ. ಅತೀ ಹೆಚ್ಚು ಜನ ಒಟ್ಟಾಗಿ ಆಚರಣೆ ಮಾಡುವ ಹಬ್ಬ ಇದು. ಎಲ್ಲಾ ಕಡೆ ಯುವಕ ಸಂಘಗಳು ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ. ಜನತೆ ಭಕ್ತಿಭಾವದಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ. ದೇಗುಲಗಳಲ್ಲಿ ಮುಂಜಾನೆಯಿಂದ ಕ್ಯೂ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ಪ್ರತಿ ಊರು, ವಾರ್ಡ್, ಹಳ್ಳಿಯಲ್ಲೂ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 1 ದಿನದಿಂದ ಹಿಡಿದು 15 ದಿನದವರೆಗೆ ಗಣಪತಿ ಇಡಲಾಗುತ್ತಿದೆ.