ದೇಶಕ್ಕೆ ಹೊಸ ಸಂಸತ್ ಭವನ!
– ಹಳೆಯ ಸಂಸತ್ ಕಟ್ಟಡಕ್ಕೆ ಹೆಸರು ಬದಲಾವಣೆ
– ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಂವಿಧಾನ ಸದನ್ ಎಂದು ಘೋಷಿಣೆ
– ಮಹಿಳೆಯರಿಗೆ ಶೇ.33 ರಾಜಕೀಯ ಮೀಸಲಾತಿ ಪಾಸ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ :
ನವ ದೆಹಲಿ: ಹೊಸ ಸಂಸತ್ ಭವನ ಉದ್ಘಾಟನೆಯಾಗಿದ್ದು, ಇದೇ ವೇಳೆ ಹಳೆಯ ಸಂಸತ್ ಕಟ್ಟಡದ ಹೊಸ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ‘ಸಂವಿಧಾನ ಸದನ’ ಎಂದು ಘೋಷಿಸಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲೇ ಹೊಸ ಕಟ್ಟಡಕ್ಕೆ ದೇಶದ ಹಳೆಯ ಸಂಸತ್ ಕಟ್ಟಡವನ್ನು “ಸಂವಿಧಾನ ಸದನ್” ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಸಂಸತ್ ಕಟ್ಟಡದಲ್ಲಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲಿ ಘೋಷಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಕಟ್ಟಡದ ಪ್ರತಿ ಇಟ್ಟಿಗೆಗೆ ನಮನ ಸಲ್ಲಿಸಿದರು ಮತ್ತು ಸಂಸದರು “ಹೊಸ ಭರವಸೆ ಮತ್ತು ಆತ್ಮವಿಶ್ವಾಸದಿಂದ” ಹೊಸ ಕಟ್ಟಡವನ್ನು ಪ್ರವೇಶಿಸುತ್ತಾರೆ ಎಂದು ಹೇಳಿದರು.
ಕಟ್ಟಡವನ್ನು ಕೆಡವಲಾಗುವುದಿಲ್ಲ ಮತ್ತು ಸಂಸತ್ತಿನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಅದನ್ನು “ರಿಟ್ರೊಫಿಟ್” ಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳುತ್ತಿವೆ. ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಸೂಚಿಸಿವೆ. ಐತಿಹಾಸಿಕ ರಚನೆಯನ್ನು ಸಂರಕ್ಷಿಸಲಾಗುವುದು, ಏಕೆಂದರೆ ಇದು ದೇಶದ ಪುರಾತತ್ವ ಆಸ್ತಿಯಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹೊಸ ಸಂಸತ್ ಅಲ್ಲಿ ಮಹಿಳಾ ಮೀಸಲಾತಿ ಶೇ.33 ಬಿಲ್ ಪಾಸ್ ಮಾಡುವ ಮೂಲಕ ಐತಿಹಾಸಿಕ ದಾಖಲೆಯನ್ನು ಸರ್ಕಾರ ಮಾಡಿದೆ. ಇನ್ನು ಮುಂದೆ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಸಿಗಲಿದೆ.