ಮೊಬೈಲ್ಗೆ ಎಮರ್ಜೆನ್ಸಿ ಅಲರ್ಟ್!.. ಮೊಬೈಲ್ ಶೇಕ್ ಶೇಕ್..!
– ತುರ್ತು ಸಂದೇಶಗಳನ್ನು ಕಳುಹಿಸುವ ಪ್ರಾಯೋಗಿಕ ವ್ಯವಸ್ಥೆ
– ಏನಿದು ಹೊಸ ಯೋಜನೆ… ಯಾಕೆ ಮೊಬೈಲ್ ಅಲರ್ಟ್ ಕೊಡುತ್ತೆ?!
NAMMUR EXPRESS NEWS
ಹಲೋ… ನಿಮ್ಮ ಮೊಬೈಲ್ ಈಗಾಗಲೇ ಗಟ್ಟಿಎರಡು ಬಾರಿ ವೈಬ್ರೇಟ್ ಆಗಿದೆ. ಅಥವಾ ಆಗುತ್ತೆ. ಹೌದು. ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಹೊರಡಿಸಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್ ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸುವ ಒಂದು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಅದರ ಪ್ರಯೋಗಾರ್ಥ ಸ್ಯಾಂಪಲ್ ಮೆಸೇಜ್ಗಳನ್ನು ಕಳುಹಿಸಲಾಗುತ್ತದೆ. ಕಳೆದ ಸೆಪ್ಟೆಂಬರ್ 15ರಂದೂ ಇಂಥದ್ದೇ ಒಂದು ಪ್ರಯೋಗ ನಡೆದಿತ್ತು. ಇದೀಗ ಅಕ್ಟೋಬರ್ 12ರಂದು ಮತ್ತೊಮ್ಮೆ ಟೆಸ್ಟ್ ಮೆಸೇಜ್ ಬಂದಿದೆ.
ನಿಮ್ಮ ಮೊಬೈಲ್ಗೆ ಇಂದು ಅಲರ್ಟ್ ಮೆಸೇಜ್ ಬಂದಿದೆ. ಇಂದೇ ಕೆಲವರಿಗೆ ಬಂದಿದ್ದಿರಲೂಬಹುದು. ಮೆಸೇಜ್ ನೋಡಿ ಗಾಬರಿ ಆಗದಿರಿ. ಇದು ಸರ್ಕಾರದಿಂದಲೇ ಕಳುಹಿಸುವ ಸ್ಯಾಂಪಲ್ ಮೆಸೇಜ್. ನೈಸರ್ಗಿಕ ವಿಕೋಪ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಅಲರ್ಟ್ ಹೊರಡಿಸಲು ದೂರಸಂಪರ್ಕ ಇಲಾಖೆ ಮೂಲಕ ಎಲ್ಲರ ಮೊಬೈಲ್ಗಳಿಗೆ ಈ ತುರ್ತು ಸಂದೇಶಗಳನ್ನು ಕಳುಹಿಸುವ ಒಂದು ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದೆ. ಅದರ ಪ್ರಯೋಗಾರ್ಥ ನಡೆದಿದೆ.