ಕೇಂದ್ರದಿಂದ ರೈತರಿಗೆ 8000 ರೂ.ಹಣ?
– ಪಿಎಂ ಕಿಸಾನ್ ನಿಧಿ 8 ಸಾವಿರಕ್ಕೆ ಏರಿಕೆ ನಿರೀಕ್ಷೆ
– ಸಣ್ಣ ರೈತರಿಗೆ ಇನ್ನೂ ಹೆಚ್ಚು ನಗದು ಬೆಂಬಲ
NAMMUR EXPRESS NEWS
ನವದೆಹಲಿ: ಕೇಂದ್ರ ಸರ್ಕಾರ ರೈತರ ಬೆಂಬಲ ಕ್ರೂಢೀಕರಿಸುವ ಉದ್ದೇಶದಿಂದ ಈಗ ಸಣ್ಣ ಹಿಡುವಳಿದಾರರಿಗೆ ನೀಡುತ್ತಿರುವ ನಗದು ನೇರವಾಗಿ ಮೂರನೇ ಒಂದರಷ್ಟು ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಂದರೆ ಪ್ರತಿಯೊಬ್ಬರಿಗೂ 8000 ರೂ ಹಣ ಹಾಕಲು ಚಿಂತನೆ ಮಾಡಿದೆ. ಪ್ರಸ್ತುತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ಸಣ್ಣ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿರುವ ವಾರ್ಷಿಕ 6000 ರೂ ಮೊತ್ತವನ್ನು 8000 ರೂ ಗೆ ಏರಿಸಲು ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಈ ಯೋಜನೆಗೆ ಅನುಮೋದನೆ ಸಿಕ್ಕರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 22 ಸಾವಿರ ಕೋಟಿ ರೂ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ದೇಶದ 140 ಕೋಟಿ ಜನಸಂಖ್ಯೆಯ ಅಂದಾಜು ಶೇ.65 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಈ ರೈತರು ನರೇಂದ್ರ ಮೋದಿ ಬೆಂಬಲದ ನಿರ್ಣಾಯಕ ಭಾಗವಾಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.