- 5000 ರೂ ಮೇಲಿನ ವಿತ್ ಡ್ರಾಗೆ ಶುಲ್ಕ
- ಹೆಚ್ಚುವರಿ 24 ರೂಪಾಯಿ ಪಾವತಿಗೆ ಸಿದ್ಧರಾಗಿ…
ನವದೆಹಲಿ: ಎಟಿಎಂನಲ್ಲಿ ತಿಂಗಳಿಗೆ 5 ಬಾರಿ ಮಾತ್ರ ಉಚಿತ!. 5000 ರೂ ಮೇಲಿನ ವಿತ್ ಡ್ರಾಗೆ ಶುಲ್ಕ. ಹೌದು. ಭಾರತೀಯ ರಿಸರ್ವ್ ಬ್ಯಾಂಕ್ ಬಹಳ ವರ್ಷಗಳ ನಂತರ ಎಟಿಎಂ ವಿತ್ ಡ್ರಾ ಮೇಲಿನ ಶುಲ್ಕ ವಿಧಿಸುವ ನಿಯಮದಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಬ್ಯಾಂಕ್ ಗ್ರಾಹಕರು 5000 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದಾಗ ವಿಧಿಸಲಾಗುತ್ತಿದ್ದಂತ ಶುಲ್ಕದಿಂದ ವಿನಾಯಿತಿ ನೀಡುವ ನಿಯಮದಲ್ಲಿ ಬದಲಾವಣೆಗೆ ಮುಂದಾಗಿದೆ.
ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದರೆ, ಈ ಮೊತ್ತಕ್ಕೆ ನೀವು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಎಂಟು ವರ್ಷಗಳ ನಂತರ ಎಟಿಎಂ ವಿತ್ ಡ್ರಾ ನಿಯಮಬದಲಿಸಲು ಸಿದ್ಧತೆ ಮಾಡಿದೆ. ಈ ಹೊಸ ನಿಯಮವು ಎಟಿಎಂಗಳಿಂದ ತಿಂಗಳಿಗೆ ಐದು ಬಾರಿ ಉಚಿತ ಹಣ ಪಡೆಯುವುದಕ್ಕೆ ಅನ್ವಯಿಸುವುದಿಲ್ಲ.
ವರದಿಗಳ ಪ್ರಕಾರ, ಎಟಿಎಂನಿಂದ 5000 ರೂಪಾಯಿಗಿಂತ ಹೆಚ್ಚು ಹಣವನ್ನು ಹಿಂತೆಗೆದುಕೊಳ್ಳುವ ಗ್ರಾಹಕರು ಹೆಚ್ಚುವರಿ 24 ರೂಪಾಯಿ ಪಾವತಿಸಬೇಕಾಗಲಿದೆ. ಎಟಿಎಂಗಳಿಂದ ನಗದು ವಿತ್ ಡ್ರಾ ಮಾಡುವ ನಿಯಮಗಳ ಪ್ರಕಾರ, ತಿಂಗಳಿಗೆ ಐದು ಬಾರಿ ಹಣ ಡ್ರಾ ಮಾಡಬಹುದು. ಒಂದು ವೇಳೆ ಒಂದು ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ನಗದು ಹಿಂತೆಗೆತ ಮಾಡಿದರೆ, ಆರನೇ ವಿತ್ ಡ್ರಾಗೆ 20 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು, ಇಂತಹ ಹೆಚ್ಚವರಿ ವಿತ್ ಡ್ರಾ ಶುಲ್ಕವನ್ನು ರದ್ದು ಪಡಿಸಲು ಇದೀಗ ಆರ್ಬಿಐ ಮುಂದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಮಿತಿ ಮಾಡಿರುವ ಶಿಫಾರಸುಗಳ ಆಧಾರದ ಮೇಲೆ ಎಟಿಎಂಗಳಿಂದ ಹಣ ಡ್ರಾ ಮಾಡುವ ನಿಯಮ ಬದಲಿಸಲಾಗಿದೆ. ಆದರೆ, ಸಮಿತಿಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಲಾದ ಮಾಹಿತಿಯಲ್ಲಿ ಈ ವಿವರ ನೀಡಲಾಗಿದೆ.