- ಬಿಜೆಪಿ ಹಿರಿಯ ನಾಯಕನ ಮಗನಿಗೆ ಒಲಿದ ಕುರ್ಚಿ
ನವ ದೆಹಲಿ: ಮಾಜಿ ಕೇಂದ್ರ ಸಚಿವ ದಿವಂಗತ ಅರುಣ್ ಜೇಟ್ಲಿಯವರ ಪುತ್ರ ರೋಹನ್ ಜೇಟ್ಲಿ ಅವರು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ದೆಹಲಿ ರಾಜಕೀಯಕ್ಕೆ ಜೇಟ್ಲಿ ಮಗ ರೋಹನ್ ಎಂಟ್ರಿಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ರೋಹನ್ ಜೇಟ್ಲಿ ವಿರುದ್ಧ ನಾಮಪತ್ರ ಸಲ್ಲಿಸಿದ್ದ ವಕೀಲ ಸುನಿಲ್ ಕುಮಾರ್ ಗೋಯೆಲ್ ಅವರು ನಿರೀಕ್ಷೆಯಂತೆ ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡರು.ನಂತರ ಅಧ್ಯಕ್ಷ ಹುದ್ದೆಗೆ ಒಬ್ಬ ಅಭ್ಯರ್ಥಿ ಮಾತ್ರ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಚುನಾವಣೆ ಇರುವುದಿಲ್ಲ ಎಂದು ರಿಟನಿರ್ಂಗ್ ಅಧಿಕಾರಿ ತಿಳಿಸಿದ್ದಾರೆ. ಖಜಾಂಚಿ ಮತ್ತು ನಾಲ್ಕು ನಿರ್ದೇಶಕರ ಹುದ್ದೆಗಳಿಗೆ ನವೆಂಬರ್ 5ರಿಂದ 8ರವರೆಗೆ ಚುನಾವಣೆ ನಡೆಯಲಿದೆ. ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನದ ಬಳಿಕ ಅವರ ಪುತ್ರರ ಎಂಟ್ರಿ ರಾಜಕೀಯದಲ್ಲೂ ಕುತೂಹಲ ಮೂಡಿದೆ.