Categories
Uncategorized

ಬಣ್ಣ ಬಣ್ಣದ ಆಹಾರ ಬೆಂಕಿ ಇಲ್ಲದೆ ತಯಾರಾಯ್ತು!

ಬಣ್ಣ ಬಣ್ಣದ ಆಹಾರ ಬೆಂಕಿ ಇಲ್ಲದೆ ತಯಾರಾಯ್ತು!
– ಬ್ರಹ್ಮಾವರ ವಿದ್ಯಾಲಕ್ಷ್ಮೀ ಕಾಲೇಜಲ್ಲಿ ವಿದ್ಯಾರ್ಥಿಗಳ ಕೈಚಳಕ
– ನೈಸರ್ಗಿಕವಾಗಿ ದೊರೆಯುವ ಬಣ್ಣ ಬಳಸಿ ವರ್ಣ ರಂಜಿತ ಆಹಾರ ತಯಾರಿ

NAMMUR EXPRESS NEWS
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಆಹಾರ ತಂತ್ರಜ್ಞಾನ ವಿಭಾಗದಿಂದ ನಿಸರ್ಗದತ್ತವಾಗಿ ದೊರೆಯುವ ಬಣ್ಣವನ್ನು ಬಳಸಿ ಅಂದರೆ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ಹೊಸ ಬಗೆಯ ವರ್ಣರಂಜಿತ ಆಹಾರ ಪದಾರ್ಥಗಳನ್ನು ಬೆಂಕಿ ಇಲ್ಲದೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಭಿನ್ನ ಆಹಾರ ತಯಾರಿಕೆ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.
ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಹಾನಿಕಾರಕ ಬಣ್ಣವನ್ನು ಬಳಸದೆ ಸಹಜವಾಗಿ ಸಿಗುವ ಬಣ್ಣಗಳಿಂದ ಹೊಸ ಬಗೆಯ ಪಾನೀಯ, ತಿಂಡಿ ತಿನಿಸುಗಳನ್ನು ತಯಾರಿಸಿ ಅದರ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಮಣ್ಯ , ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ ಹಾಗೂ ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಉಪನ್ಯಾಸಕರಾದ ರೋಹನ್, ನಿತಿನ್,ಮನೋಜ್ , ಸವಿತಾ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡಿದರು.
ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಅನ್ಸೀಟಾ ವಿಭಾಗದ ಉಪನ್ಯಾಸಕರಾದ ಶ್ರಾವಿಕ, ಸಾಕ್ಷಿತಾ, ಬೆನಕ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.