ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರುವುದು ಕಡ್ಡಾಯ
– ನ.6 ಅರ್ಜಿ ಸಲ್ಲಿಸಲು ಕೊನೆಯ ದಿನ
– ಹಲಬರು ಹೊಸ ಅರ್ಜಿ ಕೊಡುವುದು ಕಡ್ಡಾಯ
NAMMUR EXPRESS NEWS
ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರಲು ಬೇಕಾದ ನಮೂನೆ-18 ತಾಲ್ಲೂಕು ಕಚೇರಿ ಹಾಗೂ ಚುನಾವಣಾ ಆಯೋಗದ website ನಲ್ಲಿ ನಲ್ಲಿ ಲಭ್ಯವಿದೆ.
ತಾಲ್ಲೂಕಿನ ಪದವೀಧರರು ಈ ಕೆಳಕಂಡ ದಾಖಲೆಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ದಿನಾಂಕ 06-11-23 ರ ಒಳಗಾಗಿ ಸಲ್ಲಿಸಬಹುದಾಗಿದೆ.
ದಾಖಲೆ ಏನೇನು ಬೇಕು?
1) ಪಾಸ್ ಪೋರ್ಟ್ ಸೈಜ್ ಫೋಟೋ 1
2) ಆಧಾರ್ ಕಾರ್ಡ್ ನಕಲು
3) ಮತದಾರರ ಗುರುತಿನ ಚೀಟಿ( Voter ID)
4) ಪದವಿ ಪ್ರಮಾಣ ಪತ್ರ( Convocation certificate/ಘಟಿಕೋತ್ಸವ ಪ್ರಮಾಣ ಪತ್ರ)
ಅಥವಾ ಪದವಿಯ ಪ್ರತಿ ವರ್ಷದ ಅಂಕಪಟ್ಟಿ (Regular degree 3 years, Engineering 4 years)
ಪದವೀಧರ ಕ್ಷೇತ್ರದ ಮತಪಟ್ಟಿಗೆ ಈಗಾಗಲೇ ಸೇರಿದ್ದರೂ ಸಹ ಮತ್ತೊಮ್ಮೆ ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ.