ಮೋದಿ ಫ್ರೀ ಡಾಟಾ ಹೆಸರಲ್ಲಿ ಮೋಸ..ಹುಷಾರ್!
– ಎಚ್ಚರ ಎಚ್ಚರ ಫ್ರೀ ಡೇಟಾ ಯೋಜನೆ ಸುಳ್ಳು
– ಹ್ಯಾಕರ್ಸ್ ಪ್ಲಾನ್… ಯಾಮಾರಿದ್ರೆ ನಿಮ್ಮ ದುಡ್ಡು ಹೋಗುತ್ತೆ!
NAMMUR EXPRESS NEWS
ಪ್ರಧಾನಿ ನರೇಂದ್ರ ಮೋದಿಯವರು ಮೂರು ತಿಂಗಳ ಫ್ರೀ ಡೇಟಾ ಯೋಜನೆ ಜಾರಿ ಮಾಡಿದ್ದಾರೆ. ನೀವು ಪಡೆದುಕೊಳ್ಳಿ ಎಂಬ ಸುಳ್ಳು ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಎಲ್ಲಾ ವಾಟ್ಸಪ್ ಗ್ರೂಪ್ ಗಳಲ್ಲಿಯೂ ಅತಿ ವೇಗವಾಗಿ ಸೆಂಡ್ ಆಗ್ತಾ ಇರುವಂತಹ ಸಂದೇಶವಾಗಿದೆ. 3 ತಿಂಗಳ ಫ್ರೀ ಡೇಟಾ ಎಲ್ಲ ಇಂಡಿಯನ್ ಬಳಕೆದಾರರಿಗೆ ನೀಡಿದ್ದಾರೆ 2024 ರ ಚುನಾವಣೆಯಲ್ಲಿ ಗೆಲುವ ನಿಟ್ಟಿನಲ್ಲಿ ಉಚಿತ ಡೇಟಾ ಯೋಜನೆ ಕಲ್ಪಿಸಿದ್ದಾರೆ ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಕೆಳಗಡೆ ಲಿಂಕ್ ಇದೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ bjp free Recharge yojana ಎಂದು ಬರುತ್ತೆ ಅದರ ಕೆಳಗೆ ಸಾಕಷ್ಟು ಲೈಕ್ ಮತ್ತು ಕಮೆಂಟ್ಸ್ ಗಳು ಇವೆ.
ನಂತರ ಸಿಮ್ ಸೆಲೆಕ್ಟ್ ಮಾಡಿ ಎಂದು ನಂಬರ್ ಕೇಳುತ್ತೆ. ನಂತರ ನಿಮ್ಮ ಮೊಬೈಲ್ ಗೆ ರಿಚಾರ್ಜ್ ಆಗಿದೆ 10 ಜನರಿಗೆ ಕಳುಹಿಸಿ ಗ್ರೂಪ್ ಗಳಿಗೆ ಶೇರ್ ಮಾಡಿ ಎಂದು ತಿಳಿಸುತ್ತದೆ ಕಳುಹಿಸಿದ ಯಾರಿಗೂ ಕೂಡ ಫ್ರೀ ರಿಚಾರ್ಜ್ ಬರುವುದಿಲ್ಲ.ನಮ್ಮ ಹೆಸರು ವಿಳಾಸ ಎಲ್ಲಾ ಹ್ಯಾಕರ್ಸ್ ಕೈ ಸೇರುತ್ತದೆ. ಇದರಿಂದ ಹ್ಯಾಕರ್ಸ್ ನಾನಾ ರೀತಿಯ ವಂಚನೆ ಮಾಡಬಹುದು.
ನಿಮ್ಮ ಸೇಹಿತರಿಗೂ ನಿಮ್ಮ ಆತ್ಮೀಯರಿಗೂ ಎಚ್ಚರಿಕೆಯ ಸಂದೇಶವನ್ನು ನೀಡಿ. ಮೊಬೈಲ್ ಅಲ್ಲಿ ಬರೋದೆಲ್ಲ ನಿಜವಲ್ಲ.