ಅಂಚೆ ಇಲಾಖೆಯಲ್ಲಿ 1899 ಹುದ್ದೆ!
-10, 12, ಪದವೀಧರರಿಗೆ ಉದ್ಯೋಗಾವಕಾಶ
– ಯಾವ ಹುದ್ದೆ… ಇಲ್ಲಿದೆ ಅರ್ಜಿ…!
NAMMUR EXPRESS NEWS
ಭಾರತೀಯ ಸಂವಹನ ಸಚಿವಾಲಯ ಅಧೀನದ ಅಂಚೆ ಇಲಾಖೆಯು ಸ್ಪೋರ್ಟ್ಸ್ ಕೋಟಾದ 1899 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 64 ವಿವಿಧ ಬಗೆಯ ಕ್ರೀಡಾ ವಿಭಾಗದಲ್ಲಿ ಆಡಿದ, ಆಸಕ್ತರು ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ ಅನ್ನು ಆಕ್ಟಿವೇಟ್ ಮಾಡಲಾಗಿದೆ. ಹುದ್ದೆಗಳ ವಿವರ ಕುರಿತು, ಪ್ರಮುಖ ದಿನಾಂಕಗಳ ಕುರಿತು ಈಗಾಗಲೇ ಸುದ್ದಿಯನ್ನು ಪ್ರಕಟಿಸಲಾಗಿತ್ತು.
ಹುದ್ದೆವಾರು ವೇತನ ಶ್ರೇಣಿ
ಪೋಸ್ಟಲ್ ಅಸಿಸ್ಟಂಟ್ : Rs.25,500-81,000.
ಸಾರ್ಟಿಂಗ್ ಅಸಿಸ್ಟಂಟ್: Rs.25,500-81,000.
ಪೋಸ್ಟ್ಮ್ಯಾನ್ : Rs.21,700-69,100.
ಮೇಲ್ ಗಾರ್ಡ್: Rs.21,700-69,100.
ಎಂಟಿಎಸ್ : Rs.18,000-56,900.
ಅಂಚೆ ಇಲಾಖೆ ಕ್ರೀಡಾಕೋಟಾದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯಲ್ಲಿ ಒಟ್ಟು 3 ಹಂತಗಳಿವೆ. ಅವುಗಳೆಂದರೆ
ಅಪ್ಲೇಕೇಶನ್ ಸ್ಟೇಜ್-1
ಅಪ್ಲಿಕೇಶನ್ ಸ್ಟೇಜ್-2
ಸ್ಟೆಜ್-3 ಶುಲ್ಕ ಪಾವತಿ
ಅರ್ಜಿ ಸಲ್ಲಿಸುವ ವಿಧಾನ
– ಕ್ರೀಡಾ ಕೋಟಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್ಪೇಜ್ ಲಿಂಕ್ ಕ್ಲಿಕ್ ಮಾಡಿ.
– ಓಪನ್ ಆದ ಪೇಜ್ನಲ್ಲಿ ‘Application Stage-1’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ತೆರೆಯುವ ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ.
– ಮೊದಲಿಗೆ ಮೊಬೈಲ್ ನಂಬರ್, ಇ-ಮೇಲ್ ವಿಳಾಸ ನೀಡಿ ವ್ಯಾಲಿಡೇಟ್ ಮಾಡಬೇಕು.
– ನಂತರ ಇತರೆ ಮಾಹಿತಿಗಳನ್ನು ನೀಡಿ. ರಿಜಿಸ್ಟ್ರೇಷನ್ ಪಡೆಯಿರಿ.
– ನಂತರ Application Stage-2 ಎಂದಿರುವಲ್ಲಿ ಕ್ಲಿಕ್ ಮಾಡಿ.
– ರಿಜಿಸ್ಟ್ರೇಷನ್ ಪಡೆದ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ.
– ಇಲ್ಲಿ ವಿದ್ಯಾರ್ಹತೆ, ಕ್ರೀಡಾ ಅರ್ಹತೆ ಪ್ರಮಾಣ ಪತ್ರ, ಇತರೆ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣಗೊಳಿಸಬೇಕು. ದಾಖಲೆ ಅಪ್ಲೋಡ್ ಮಾಡಬೇಕು.
ಮುಂದಿನ ಹಂತದಲ್ಲಿ ಶುಲ್ಕ ಪಾವತಿಸಿ.
– ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುತ್ತದೆ. ಮುಂದಿನ ರೆಫರೆನ್ಸ್ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಕ್ರೀಡಾ ಸಾಧನೆಯ ಅರ್ಹತೆಗಳೇನು? ಯಾರು ಅರ್ಜಿ ಸಲ್ಲಿಸಬಹುದು?
ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ಅಂತರ ವಿಶ್ವವಿದ್ಯಾಲಯಗಳ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ಶಾಲಾ ಮಟ್ಟದ ಕ್ರೀಡಾ ಕೂಟದಲ್ಲಿ ಆಡಿದವರು.
ರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿದವರು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಮೊಬೈಲ್ ನಂಬರ್
ಇ-ಮೇಲ್ ವಿಳಾಸ
ಅಭ್ಯರ್ಥಿ ಹೆಸರು
ಸರ್ ನೇಮ್
ತಂದೆ ಹೆಸರು
ಕೆಟಗರಿ
ಲಿಂಗ ಮಾಹಿತಿ
ಜನ್ಮ ದಿನಾಂಕ ಮಾಹಿತಿ
ಕ್ರೀಡಾಕೂಟದ ಮಾಹಿತಿ
ವಿದ್ಯಾರ್ಹತೆ ಮಾಹಿತಿ / ಪ್ರಮಾಣ ಪತ್ರ
ಇತರೆ
ಅರ್ಜಿ ಸಲ್ಲಿಸಲು ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅವಕಾಶ ನೀಡಲಾಗಿದೆ.