Categories
ಅಡಿಕೆ-ದರ ಉದ್ಯೋಗ ಸುದ್ದಿ

ಅಡಿಕೆ ಬೆಳೆಗಾರರ ಬದುಕಿನ ಜೊತೆ ಚೆಲ್ಲಾಟ ನಿಲ್ಲಲಿ! – ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಮೇಗರವಳ್ಳಿ ರಮೇಶ್ ಹೆಗ್ಡೆ – ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ!

ತೀರ್ಥಹಳ್ಳಿ: ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ. 2001ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಸಲ್ಲಿಸಿದೆ. 2017, 2021 ರಲ್ಲಿ ವಿವಿಧ ಇಲಾಖೆಯ ಸಚಿವರು, ಸಂಸದರು ನಿಷೇಧಕ್ಕೆ ಆಗ್ರಹಿಸಿದ್ದಾರೆ. ಆಗ ನಮ್ಮ ಅಡಿಕೆ ಜ್ಞಾನೇಂದ್ರ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಡಿಕೆ ಬೆಳೆಗಾರರಿಗೆ ನಬಾರ್ಡ್, ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘದಲ್ಲಿ ಸಾಲ ಸಿಗದಂತೆ ಮಾಡಿದ್ದಾರೆ. ಉತ್ತರ ಭಾರತದ ಅಡಿಕೆ ವ್ಯಾಪಾರಿಗಳ ಲಾಭಕ್ಕಾಗಿ ಬೆಳೆಗಾರರನ್ನು ಬಲಿ ಹಾಕುತ್ತಿದ್ದಾರೆ. ಇಂಡೋನೇಷಿಯಾದ ಅಡಿಕೆ ಶ್ರೀಲಂಕ ಮೂಲಕ ತೆರಿಗೆ ವಂಚಿಸಿ‌ ಮರು ರಪ್ತು ಮಾಡಲಾಗುತ್ತಿದೆ. ಇವೆಲ್ಲ ಅಡಿಕೆ ಜ್ಞಾನೇಂದ್ರಣ್ಣಂಗೆ ಗೊತ್ತಿಲ್ವೆ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದ್ದಾರೆ.
ಭಾರತೀಯ ಸಂಸ್ಕೃತಿಯ ಸಂಕೇತವೂ ಹಾಗೂ ಲಕ್ಷಾಂತರ ರೈತರ ಜೀವನಾಡಿಯೂ ಆಗಿರುವ ಅಡಿಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳಿಂದ ದೊಡ್ಡ ಮಟ್ಟದ ಆತಂಕ ಎದುರಾಗಿದೆ. ಅಡಿಕೆ ಬೆಳೆಗಾರರ ಹಿತ ಕಾಯುತ್ತೇವೆ ಎಂದು ಹೇಳಿಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಕೇಂದ್ರದಿಂದ ಅಡಿಕೆ ವಿರುದ್ಧ ಕೈಗೊಳ್ಳಲಾದ ಸಾಲು ಸಾಲು ನಿರ್ಧಾರಗಳ ಬಗ್ಗೆ ನಿಗೂಢ ಮೌನ ತಳೆದಿರುವುದು ಆಘಾತಕಾರಿ.
2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ತಜ್ಞರ ಸಮಿತಿಯು ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದಿತ್ತು. ಅದನ್ನೇ ಮುಂದುವರಿಸಿ 2017 ಮತ್ತು 2019ರಲ್ಲಿಯೂ ಕೇಂದ್ರ ಆರೋಗ್ಯ ಸಚಿವರು ಸಂಸತ್ತಿನ ಅಧಿವೇಶನದಲ್ಲಿ ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂದು ಲಿಖಿತ ಹೇಳಿಕೆ ನೀಡಿದಾಗ ರಾಜ್ಯದ ನಾಯಕರು ಧ್ವನಿ ಎತ್ತಲಿಲ್ಲ. 2021ರಲ್ಲಿ ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅಡಿಕೆ ನಿಷೇಧಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಲ್ಲದೆ, 2022ರಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಡಿಕೆ ಬಳಕೆಯ ನಿಷೇಧದ ಕುರಿತು ಸಭೆ ಕರೆದಾಗಲೂ ರಾಜ್ಯ ಬಿಜೆಪಿ ನಾಯಕರು ಅದನ್ನು ಖಂಡಿಸಲಿಲ್ಲ. ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ದಾಖಲೆ ಸಮೇತ ಘೋಷಿಸಿದರು.
2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಕೃಷಿ ಮಾರಾಟ ಮಾಹಿತಿ ವೆಬ್‌ಸೈಟ್‌ನಲ್ಲಿ ಅಡಿಕೆಯನ್ನು ‘ಮಾದಕ ಉತ್ತೇಜಕ’ (Drug) ಪಟ್ಟಿಗೆ ಸೇರಿಸಿ ಅಡಕೆಯ ಗೌರವಕ್ಕೆ ಧಕ್ಕೆ ತಂದಾಗಲೂ ಯಾರೂ ಆಕ್ಷೇಪಿಸಲಿಲ್ಲ. ಇನ್ನೊಂದೆಡೆ ಈಶಾನ್ಯ ರಾಜ್ಯಗಳ ಮೂಲಕ ಬರ್ಮಾ ದೇಶದಿಂದ ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆಯಾಗುತ್ತಿದ್ದು, ಇಂಡೋನೇಷ್ಯಾ ದೇಶದ ಅಡಿಕೆಯನ್ನು ಶ್ರೀಲಂಕಾ ಅಥವಾ ಬಾಂಗ್ಲಾದೇಶದ್ದೆಂದು ಸುಳ್ಳು ದಾಖಲೆ ಸೃಷ್ಟಿಸಿ ದೇಶದೊಳಗೆ ತರಲಾಗುತ್ತಿದೆ. ಇದರಿಂದ ದೇಶೀಯ ಅಡಿಕೆಯ ಬೆಲೆ ತೀವ್ರವಾಗಿ ಕುಸಿಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಅಕ್ರಮ ಅಡಿಕೆ ಆಮದಿಗೆ ತಡೆ ನೀಡಿ, ದೇಶೀಯ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕಿದೆ ಎಂದು ಅಗ್ರಹಿಸಿದರು.

Categories
banking ಉದ್ಯೋಗ ಸುದ್ದಿ ಮಾಹಿತಿ ಮಾಹಿತಿ ಸುದ್ದಿ ವಿಶೇಷ ಸುದ್ದಿ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರೀ ನೇಮಕಾತಿ! – ಕರ್ನಾಟಕದಲ್ಲಿ 1414 ಹುದ್ದೆಗಳು ಭರ್ತಿ:

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ನೀಡಿದೆ.
ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿನ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಒಟ್ಟು ಬಾಕಿ ಇರುವ 11.403 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 1414 ಹುದ್ದೆಗಳು ಭರ್ತಿಯಾಗಲಿವೆ ಎನ್ನುವ ಮಾಹಿತಿ ಲಭಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ವಾರು ಪ್ರಕಾರ ಬ್ಯಾಂಕ್ ಆಫ್ ಬರೋಡಾದಲ್ಲಿ 180 ಹುದ್ದೆಗಳು, ಬ್ಯಾಂಕ್ ಆಫ್ ಇಂಡಿಯಾದಲ್ಲಿ 40 ಹುದ್ದೆಗಳು, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 17 ಹುದ್ದೆಗಳು, ಕೆನರಾ ಬ್ಯಾಂಕ್ ನಲ್ಲಿ 800 ಹುದ್ದೆಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 29 ಹುದ್ದೆಗಳು, ಇಂಡಿಯನ್ ಬ್ಯಾಂಕ್ ನಲ್ಲಿ 40 ಹುದ್ದೆಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 61 ಹುದ್ದೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 234 ಹುದ್ದೆಗಳು ಮತ್ತು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ ನಲ್ಲಿ 5 ಹುದ್ದೆಗಳು ಬಾಕಿ ಉಳಿದಿವೆ. ಈ ಹುದ್ದೆಗಳಿಗೆ ಅಕ್ಟೋಬರ್ ತಿಂಗಳ 10 ಮತ್ತು 11ರಂದು ಪೂರ್ವಭಾವಿ ಪರೀಕ್ಷೆಗಳು ನಡೆಯಲಿದ್ದು, ಡಿಸೆಂಬರ್ 27ರಂದು ಮುಖ್ಯ ಪರೀಕ್ಷೆ ನಡೆಯಲಿದೆ. ಮಾರ್ಚ್ 2027ರಂದು ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
ಎಸ್ ಸಿ/ಎಸ್ ಟಿ/ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 175 ಹಾಗೂ ಸಾಮಾನ್ಯ ಮತ್ತು ಇತರ ವರ್ಗಗಳ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಿದೆ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2026.

Categories
ಉದ್ಯೋಗ ಸುದ್ದಿ ರಾಜ್ಯ ರಾಷ್ಟ್ರೀಯ ವಾರ್ತೆ

ವಿಶ್ವದಲ್ಲಿ ಉದ್ಯೋಗ ಕಡಿತ ಶುರುವಾಗಿದೆ!

ವಿಶ್ವದಲ್ಲಿ ಉದ್ಯೋಗ ಕಡಿತ ಶುರುವಾಗಿದೆ!
– ಒರಾಕಲ್ ಕಂಪನಿಯಿಂದ 1.6 ಲಕ್ಷ ಉದ್ಯೋಗಿಗಳ ವಜಾ
– ಬೆಂಗಳೂರು ಸೇರಿ ಎಲ್ಲೆಡೆ ಉದ್ಯೋಗ ಕಡಿತ ಹೆಚ್ಚಳ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನ್ಯೂಯಾರ್ಕ್: ಪ್ರಸಿದ್ಧ ತಂತ್ರಜ್ಞಾನ ಸಂಸ್ಥೆಯಾದ ಒರಾಕಲ್ ಮಂಗಳವಾರದಂದು ದಿಢೀರ್ ಆಗಿ ಭಾರಿ ಪ್ರಮಾಣದ ಲೇಆಫ್ ಗೆ ಚಾಲನೆ ನೀಡಿದ್ದು, ಪರಿಣಾಮವಾಗಿ ಸುಮಾರು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಸಂಕಷ್ಟಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಒಳಗಾಗಿದ್ದಾರೆ ಎನ್ನುವುದು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

ಒರಾಕಲ್ ಸುಮಾರು 1.62 ಲಕ್ಷದಷ್ಟು ಸಿಬ್ಬಂದಿಗಳನ್ನು ಹೊಂದಿದ್ದು, ಶೇಕಡಾ 18ರಷ್ಟು ಉದ್ಯೋಗಿಗಳನ್ನು ಮಂಗಳವಾರದಂದು ವಜಗೊಳಿಸಿದೆ. ಇದರಲ್ಲಿ ಸುಮಾರು 12.೦೦೦ ಮಂದಿ ಭಾರತೀಯರಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಮಾರ್ಚ್ 31 ಕೊನೆಯ ಕೆಲಸದ ದಿನವಾಗಿರುವುದರಿಂದ ತಕ್ಷಣ ಕಂಪನಿಯು ಲೇಆಫ್ ಇ-ಮೇಲ್ ಕಳುಹಿಸಿದ್ದು, ಅದರಲ್ಲಿ ಕಂಪನಿಯ ಪುನರ್ವ್ಯವಸ್ಥಿಕರಣದ ಭಾಗವಾಗಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದು, ಇನ್ನು ಮುಂದೆ ನಿಮ್ಮ ಕೆಲಸದ ಅಗತ್ಯ ಕಂಪನಿಗೆ ಇಲ್ಲ ಎಂದು ತಿಳಿಸಿದೆ.

ಬಳಿಕ ಲ್ಯಾಪ್ ಟಾಪ್ ಹಾಗೂ ಸಿಸ್ಟಮ್ ಗಳ ಆ್ಯಕ್ಸೆಸ್ ಅನ್ನು ತಕ್ಷಣ ಸ್ಥಗಿತಗೊಳಿಸಿರುವುದು ಉದ್ಯೋಗಿಗಳಲ್ಲಿ ಚಿಂತೆಯನ್ನುಂಟು ಮಾಡಿದೆ. ನಿಜಾಂಶವೆಂದರೆ ಒರಾಕಲ್ ಯಾವುದೇ ರೀತಿಯ ನಷ್ಟವನ್ನು ಅನುಭವಿಸುತ್ತಿಲ್ಲ. ಬದಲಿಗೆ ಕಳೆದ ತ್ರೈಮಾಸಿಕದಲ್ಲಿ ಇದರ ಲಾಭವು ಶೇಕಡಾ 95 ರಷ್ಟು ಹೆಚ್ಚಳಗೊಂಡಿದ್ದು, 6.13 ಬಿಲಿಯನ್ ಡಾಲರ್ ಗೆ ತಲುಪಿದೆ ಎನ್ನಲಾಗಿದೆ. ಆದರೆ ಕಂಪನಿಯು ಕೃತಕ ಬುದ್ಧಿಮತ್ತೆ ಡೇಟಾ ಸೆಂಟರ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 156 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಗಾಗಿ ಕಂಪನಿಯು ಈಗಾಗಲೇ 50 ಬಿಲಿಯನ್ ಡಾಲರ್ ನಷ್ಟು ಸಾಲ ಮಾಡಿದ್ದು, ಅದರ ವೆಚ್ಚವನ್ನು ಸರಿದೂಗಿಸಲು ಈ ಕಠಿಣ ಕ್ರಮವನ್ನು ಕೈಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಂಪನಿಯು ವಜಾಗೊಂಡ ಉದ್ಯೋಗಿಗಳಿಗೆ ಮೂರು ತಿಂಗಳ ಸಂಬಳ ಮತ್ತು ಮಾಡಿರುವ ಕೆಲಸಕ್ಕೆ ಅನುಗುಣವಾಗಿ ಪ್ರತಿ ವರ್ಷಕ್ಕೆ 15 ದಿನಗಳ ವೇತನ, ಗ್ರಾಚ್ಯೂಟಿ ಸೇರಿದಂತೆ ಇನ್ನೂ ಅನೇಕ ಬಗೆಯ ಪರಿಹಾರ ಪ್ಯಾಕೇಜ್ ಗಳನ್ನು ಘೋಷಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೂ ಕೂಡ ಭಾರತ ಮತ್ತು ಅಮೆರಿಕಾದಲ್ಲಿನ ಸಾವಿರಾರು ಕುಟುಂಬಗಳು ಕಂಪನಿಯ ಈ ಅನಿರೀಕ್ಷಿತ ನಿರ್ಧಾರದಿಂದಾಗಿ ಆರ್ಥಿಕ ಅನಿಶ್ಚಿತತೆಗೆ ಒಳಗಾಗುವಂತಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಬೆಂಗಳೂರು ಸೇರಿ ಎಲ್ಲೆಡೆ ಉದ್ಯೋಗ ಕಡಿತ ಹೆಚ್ಚಳ ಆಗುವ ಸಾಧ್ಯತೆ ಇದೆ.

Categories
ಉದ್ಯೋಗ ಸುದ್ದಿ

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್
– ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ’ಯಲ್ಲಿ 9,871 ಹುದ್ದೆಗಳ ನೇಮಕಾತಿ.!

NAMMUR EXPRESS NEWS
ಬೆಂಗಳೂರು :
ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯನ್ನು ಸರ್ಕಾರ ನೀಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತ ಬರೋಬ್ಬರಿ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪ್ರಸ್ತಾವನೆಯಲ್ಲಿ ಈ ಕೆಳಕಂಡ ವಿವಿಧ ವೃಂದಗಳ ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಡಳಿತಾತ್ಮಕ ಅನುಮತಿ ನೀಡುವಂತೆ ಹಾಗೂ ನೇರ ನೇಮಕಾತಿ ಮೂಲಕ ಅನುಮತಿ ನೀಡಿ ಭರ್ತಿ ಮಾಡುವವರೆಗೆ ಅಥವಾ ಒಂದು ವರ್ಷದ ಅವಧಿಗೆ ಸದರಿ ಖಾಲಿ ಹುದ್ದೆಗಳನ್ನು ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

ಕ್ಲಿನಿಕಲ್ ಇನ್ ಸ್ಟ್ರಕ್ಟರ್ – 01
ಸಹಾಯಕ ಕೀಟಶಾಸ್ತ್ರಜ್ಞರು – 07
ಮೈಕ್ರೋಬಯಾಲಜಿಸ್ಟ್ – 12
ಕ್ಲಿನಿಕಲ್ ಸೈಕಾಲಜಿಸ್ಟ್ – 06
ಮನೋ ಸಾಮಾಜಿಕ ತಜ್ಞರು ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) – 07
ಕಿರಿಯ ರಾಸಾಯನ ಶಾಸ್ತ್ರಜ್ಞರು – 15

ಗ್ರೂಪ್-ಸಿ

ಫಾರ್ಮಸಿಸ್ಟ್ ಅಧಿಕಾರಿ – 640
ಶುಶ್ರೂಷಾಧಿಕಾರಿ – 1694
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳಾ) – 3317
ಆರೋಗ್ಯ ನಿರೀಕ್ಷಣಾಧಿಕಾರಿ ( ಕಿ.ಆ.ಸ) – 2628
ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 356
ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ -34
ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 59
ಹಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ -10
ನೇತ್ರಾಧಿಕಾರಿ – 125
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು – 83
ಒಟ್ಟು ಹುದ್ದೆಗಳು 8994.
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ

ಗ್ರೂಪ್-ಬಿ

ಸಹಾಯಕ ಕೀಟಶಾಸ್ತ್ರಜ್ಞರು – 02
ಮೈಕ್ರೋಬಯಾಲಜಿಸ್ಟ್ – 0
ಕ್ಲಿನಿಕಲ್ ಸೈಕಾಲಜಿಸ್ಟ್ – 02
ಮನೋ ಸಾಮಾಜಿಕ ತಜ್ಞರು ( ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ) – 0
ಕಿರಿಯ ರಾಸಾಯನ ಶಾಸ್ತ್ರಜ್ಞರು – 03

ಗ್ರೂಪ್-ಸಿ

ಫಾರ್ಮಸಿ ಅಧಿಕಾರಿ – 65
ಶುಶ್ರೂಷಾಧಿಕಾರಿ – 351
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ( ಕಿ.ಆ.ಸ – ಮಹಿಳೆ) – 133
ಆರೋಗ್ಯ ನಿರೀಕ್ಷಣಾಧಿಕಾರಿ (ಕಿ.ಆ.ಸ) – 221
ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 57
ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ – 02
ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ – 30
ನೇತ್ರಾಧಿಕಾರಿ – 05
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ -06

ಒಟ್ಟು ಹುದ್ದೆ 877.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಜೂರಾಗಿ ಖಾಲಿಯಿರುವ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANMS) ಮತ್ತು 300 ಆರೋಗ್ಯ ನಿರೀಕ್ಷಣಾಧಿಕಾರಿ (HIOS) ಹುದ್ದೆಗಳನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನೇರ ನೇಮಕಾತಿ ಮುಖಾಂತ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದ್ದಾರೆ.

ಮುಂದುವರೆದು, ಆಯುಕ್ತರು, ಆಕುಕ ಸೇವೆಗಳು ರವರು ನೇಮಕಾತಿ ಪ್ರಕ್ರಿಯೆಯನ್ನು ನಿಗಧಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಕೆಳಕಂಡಂತ ವಿಧಿಸಿರುವ ಷರತ್ತುಗಳ ಅನುಪಾಲನಾ ವರದಿಯನ್ನು ಸಲ್ಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

Categories
ಉದ್ಯೋಗ ಸುದ್ದಿ

ಉದ್ಯೋಗ ಸಿಗಬೇಕಾದ್ರೆ

ಉದ್ಯೋಗ ಸಿಗಬೇಕಾದ್ರೆ
– ಆಗ್ಬೇಕು ಆಲ್ ರೌಂಡರ್
– ಉದ್ಯೋಗ ಪಡೆಯಲು ಏನೇನು ಅರ್ಹತೆ ಬೇಕು.?
– ಯುವ ಜನತೆ ಉದ್ಯೋಗ ಪಡೆಯುವುದು ಸುಲಭ ಇಲ್ಲ

ಉದ್ಯೋಗ ದೇಶದ ದೊಡ್ಡ ಸಮಸ್ಯೆ ಆಗಿ ಮಾರ್ಪಡುತ್ತಿದೆ. ಓದಿದರೂ ಬೆಲೆ ಇಲ್ಲ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದು ಡಿಜಿಟಲ್ ಜಮಾನ. ಇಲ್ಲಿ ಕೌಶಲ್ಯ ಇದ್ದವರಿಗೆ ಅವಕಾಶ. ಬರೀ ಓದಿನ ಅಂಕದ ಚೌಕಟ್ಟು ಕೂಡ ಕೆಲವೊಮ್ಮೆ ಕೆಲಸಕ್ಕೆ ಬರುವುದಿಲ್ಲ.! ಸರ್ಕಾರಿ ಉದ್ಯೋಗ ಪಡೆಯುವುದು ಕನಸು
ಸರ್ಕಾರಿ ಉದ್ಯೋಗ ಎಂದರೆ ಅದೇನೋ ಎಲ್ಲರಿಗೂ ಸೇಫ್ ಎಂಬ ಮನೋಭಾವನೆ. ಜೀವನದ ಅಮೂಲ್ಯವಾದ ಸಂಪತ್ತನ್ನು ಮತ್ತು ಜೀವನಕ್ಕೆ ಬೇಕಾದ ಅತ್ಯಮೂಲ್ಯ ವಸ್ತು ಒಂದು ಸಿಕ್ಕ ಹಾಗೆ. ಸರ್ಕಾರಿ ಸ್ಥಾನಗಳಲ್ಲಿ ಅಧಿಕಾರವನ್ನು ಹೊಂದಿದ್ದು, ಸ್ಥಿರವಾದ ಸಂಬಳದಿಂದ ಬೆಂಬಲಿತವಾದ ಆರಾಮದಾಯಕ ಜೀವನವನ್ನು ಖಾತ್ರಿಗೊಳಿಸುತ್ತದೆ. 60 ವರ್ಷ ವಯಸ್ಸಿನವರೆಗೆ ಉದ್ಯೋಗ ಭದ್ರತೆ ಖಾತರಿಯೊಂದಿಗೆ, ವ್ಯಕ್ತಿಗಳು ವಿವಿಧ ಪ್ರಯೋಜನಗಳು, ಭತ್ಯೆಗಳು ಮತ್ತು ಸರ್ಕಾರಿ ರಜಾದಿನಗಳನ್ನು ಆನಂದಿಸುತ್ತಾರೆ. ಸರ್ಕಾರಿ ಹುದ್ದೆಗಳ ಸ್ಪರ್ಧೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆದರೆ ಅವಕಾಶ ಮಾತ್ರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ.

ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗ ಹುಡುಕುತ್ತಿದ್ದರೆ, ಮೊದಲು ಕೇಂದ್ರ ಸರ್ಕಾರಿ ಉದ್ಯೋಗ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಮುಂದುವರಿಸಲು ಬಯಸುತ್ತೀರಾ ಎಂದು ನಿರ್ಧರಿಸಿ. ನಂತರ, ನೀವು ಆಸಕ್ತಿ ಹೊಂದಿರುವ ನಿರ್ದಿಷ್ಟ ಸ್ಥಾನ ಅಥವಾ ಕ್ಷೇತ್ರವನ್ನು ನಿರ್ಧರಿಸಿ. ಆಯ್ಕೆ ಮಾಡಿದ ಪೋಸ್ಟ್ ಅರ್ಹತೆಗಳು ಮತ್ತು ಆಯ್ಕೆ ಪ್ರಕ್ರಿಯೆಗಳೊಂದಿಗೆ ಆಯ್ಕೆಯು ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಯನ್ನು ಒಳಗೊಂಡಿದ್ದರೆ, ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ. ಅಗತ್ಯ
ಮಾಹಿತಿ ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಮತ್ತು ನಿಮ್ಮ ಓದುವಿಕೆಯನ್ನು ಪ್ರಾರಂಭಿಸಿ. ನಿಮ್ಮ ಆಸಕ್ತಿಯ ಆ ಸದರಿ ಹುದ್ದೆಗೆ ಅಥವಾ ಯಾವುದೇ ಸರ್ಕಾರಿ ಹುದ್ದೆಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿ, ಪರೀಕ್ಷೆ ಬರೆಯಿರಿ.

ಖಾಸಗಿ ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳುವುದು ಶೈಕ್ಷಣಿಕ ಅರ್ಹತೆಗಳನ್ನು ಮೀರಿದೆ. ಉದ್ಯೋಗದಾತರು ಸಾಮಾನ್ಯವಾಗಿ ಕೌಶಲ್ಯಗಳು, ಗುಣಲಕ್ಷಣಗಳು ಮತ್ತು ಅನುಭವಗಳ ಸಂಯೋಜನೆಯನ್ನು ಹುಡುಕುತ್ತಾರೆ. ನಿಮ್ಮ ಅಧ್ಯಯನದ ಜೊತೆಗೆ ನಿಮ್ಮ ಉದ್ಯೋಗಾವಕಾಶವನ್ನು ಹೆಚ್ಚಿಸುವ ಕೆಲವು ಗುಣಗಳು ಈಗ ಕಡ್ಡಾಯ.

ವಾಕ್ ಸಾಮರ್ಥ್ಯ (Communication Skill)

ವೃತ್ತಿಪರ ಜಗತ್ತಿನಲ್ಲಿ ಲಿಖಿತ ಮತ್ತು ಮೌಖಿಕ ಎರಡೂ ಪರಿಣಾಮಕಾರಿ ಸಂವಹನ ಹಾಗೂ ನಿರ್ಣಾಯಕವಾಗಿದೆ. ಸ್ಪಷ್ಟ ಅಭಿವ್ಯಕ್ತಿ ಮತ್ತು ಆಲೋಚನೆಗಳನ್ನು ತಿಳಿಸುವ ಸಾಮರ್ಥ್ಯವು ಹೆಚ್ಚು ಮೌಲ್ಯಯುತವಾಗಿದೆ.

ಹೊಂದಿಕೊಳ್ಳುವಿಕೆ (Adaptability)

ಉದ್ಯೋಗದಾತರು ಹೊಸ ಸವಾಲುಗಳು, ತಂತ್ರಜ್ಞಾನಗಳು ಮತ್ತು ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳುವ ಅಭ್ಯರ್ಥಿಗಳನ್ನು ಮೆಚ್ಚುತ್ತಾರೆ.

ನಮ್ಯತೆ (Flexibility)

ಹೊಸ ಆಲೋಚನೆಗಳು, ಕಾರ್ಯಗಳು ಅಥವಾ ಯೋಜನೆಗಳಲ್ಲಿನ ಬದಲಾವಣೆಗಳಿಗೆ ಮುಕ್ತವಾಗಿರುವುದು ನಮ್ಯತೆಯನ್ನು ಪ್ರದರ್ಶಿಸುತ್ತದೆ, ಕ್ರಿಯಾತ್ಮಕ ಕೆಲಸದ ವಾತಾವರಣದಲ್ಲಿ ಹೆಚ್ಚು ಬೇಡಿಕೆಯಿರುವ ಲಕ್ಷಣವಾಗಿದೆ.

ಸಮಸ್ಯೆ-ಪರಿಹರಿಸುವ ಕೌಶಲ್ಯಗಳು (Problem-Solving Skills)

ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುವ ವ್ಯಕ್ತಿಗಳನ್ನು ಉದ್ಯೋಗದಾತರು ಗೌರವಿಸುತ್ತಾರೆ.

ನೆಟ್ವರ್ಕಿಂಗ್ (Networking)

ವೃತ್ತಿಪರ ಸಂಬಂಧಗಳನ್ನು ನಿರ್ಮಿಸುವುದು ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ. ಉದ್ಯಮದ ಈವೆಂಟ್ಗಳಿಗೆ ಹಾಜರಾಗಿ, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ನೆಟ್ವರ್ಕ್ ಅನ್ನು ವಿಸ್ತರಿಸಲು ಆನೈನ್ ಪ್ಲಾಟ್ಸಾರ್ಮ್ಗಳನ್ನು ಬಳಸಿ.

ನೆನಪಿಡಿ, ನಿಮ್ಮ ಶೈಕ್ಷಣಿಕ ಸಾಧನೆಗಳ ಜೊತೆಗೆ ಈ ಗುಣಗಳ ಸಂಯೋಜನೆಯನ್ನು ಪ್ರದರ್ಶಿಸುವುದು ನಿಮ್ಮ ಉದ್ಯೋಗಾವಕಾಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಉದ್ಯೋಗದಲ್ಲಿ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತದೆ.

ಶ್ರಮ ಮತ್ತು ನಂಬಿಕೆ

ಯಾವುದೇ ಉದ್ಯಮ, ಕಂಪನಿ, ಸಂಸ್ಥೆಯ ಯಶಸ್ಸು ಆ ವ್ಯವಸ್ಥೆಯಲ್ಲಿ ಕೆಲಸ ಮಾಡುವವರ ಶ್ರಮ, ಕಾಳಜಿ, ನಂಬಿಕೆ, ನಿರ್ಧರಿತ ಗುರಿ ಮುಟ್ಟುವುದರ ಮೇಲೆ ನಿಂತಿದೆ. ಇಲ್ಲಿ ಎಲ್ಲರ ಮನಸ್ಥಿತಿ ಒಂದೇ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಅಂತವರಿಗೆ ಅವಕಾಶ ಹೆಚ್ಚು.

ಕೌಶಲ್ಯ ಇದ್ದವರಿಗೆ ಕೆಲಸ ಗ್ಯಾರಂಟಿ ಯಾರು ಯಶಸ್ವಿ ವೃತ್ತಿಜೀವನದ ಹಾದಿಯನ್ನು ಹೊಂದಬೇಕೆಂದು ಇಚ್ಛಿಸುತ್ತಾರೋ ಅವರು ಕೇವಲ ಔಪಚಾರಿಕ ಶಿಕ್ಷಣಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತಾರೆ. ಇಂದಿನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವೃತ್ತಿಪರ ಜಗತ್ತಿನಲ್ಲಿ ಕೌಶಲ್ಯ
ಹೊಂದಿದವರಿಗೆ ಅವಕಾಶದ ಬಾಗಿಲು ತೆಗೆದಿರುತ್ತದೆ.

ವೃತ್ತಿಜೀವನಕ್ಕೆ ಪ್ರಮುಖವಾದ ನಿರ್ದಿಷ್ಟ ಕೌಶಲ್ಯಗಳನ್ನು ಅನ್ವೇಷಿಸುವಾಗ, ಪರಿಣಾಮಕಾರಿ ಸಂವಹನ, ಸಮಸ್ಯೆ-ಪರಿಹರಿಸುವುದು, ವಿಮರ್ಶಾತ್ಮಕ ಚಿಂತನೆ, ನಾಯಕತ್ವ, ತಂಡದ ಕೆಲಸ ಮತ್ತು ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಪರ ಯಶಸ್ಸಿನ ತಳಹದಿಯನ್ನು ರೂಪಿಸುತ್ತದೆ. ಕೌಶಲ್ಯ ವೃತ್ತಿಜೀವನದ ನವೀಕರಣಕ್ಕೆ ದಾರಿ ತೋರಿಸುತ್ತವೆ.

ವೃತ್ತಿಪರ ಬೆಂಬಲ ವ್ಯವಸ್ಥೆಯನ್ನು ರಚಿಸಲು, ಮಾರ್ಗದರ್ಶನ ಮತ್ತು ಹೊಸ ಅವಕಾಶಗಳಿಗೆ ಬಾಗಿಲು ತೆರೆಯಲು ನೆಟ್ವರ್ಕಿಂಗ್ ಮತ್ತು ಸಂಬಂಧ-ನಿರ್ಮಾಣ ಕೌಶಲ್ಯಗಳು ಅತ್ಯಗತ್ಯ. ಸಮಯ ನಿರ್ವಹಣೆ
ಮತ್ತು ಸ್ಥಿತಿಸ್ಥಾಪಕತ್ವವು ಸಮಾನವಾಗಿ ನಿರ್ಣಾಯಕವಾಗಿದೆ.

ತಾಂತ್ರಿಕ ಪ್ರಾವೀಣ್ಯತೆಯು ವೃತ್ತಿಜೀವನಕ್ಕೆ ಆವಶ್ಯಕವಾಗಿದೆ. ಹೊಸ ತಂತ್ರಾಂಶಗಳನ್ನು ಸ್ವೀಕರಿಸಲು ಸಿದ್ಧತೆ ಹೊಂದಿರುವ ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ನವೀಕರಿಸುವಲ್ಲಿ ಸುಲಭವಾಗಿ ಮುನ್ನಡೆಯಬಹುದು.

ಕೌಶಲ್ಯ, ಜ್ಞಾನ, ಶ್ರಮ, ನಂಬಿಕೆ, ಗುರಿ ಇದ್ದಲ್ಲಿ ಯಶಸ್ವಿ ವೃತ್ತಿಜೀವನವನ್ನು ನೀವೂ ಸಾಧಿಸಬಹುದು. ಎಲ್ಲರಿಗೂ ಬೆಸ್ಟ್ ಆಫ್ ಲಕ್.

Categories
ಉದ್ಯೋಗ ಸುದ್ದಿ

ವಿ – ಟೆಕ್ ಇಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ

ವಿ – ಟೆಕ್ ಇಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ
– ಪುರುಷ ಅಭ್ಯರ್ಥಿಗಳಿಗೆ ಆದ್ಯತೆ
– ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆ

NAMMUR EXPRESS NEWS
ವಿ ಟೆಕ್ ಇಂಜಿನಿಯರ್ಸ್ ನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಲ್ಲಿ ಆದ್ಯತೆ ನೀಡಲಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬುದನ್ನು ತಿಳಿಯೋಣ.

ಹುದ್ದೆ
1. ಅಕೌಂಟ್ ಅಸಿಸ್ಟೆಂಟ್
ಪುರುಷ ಅಭ್ಯರ್ಥಿ
ಒಂದರಿಂದ ನಾಲ್ಕು ವರ್ಷದ ಅನುಭವ ಹೊಂದಿರಬೇಕು.
ಹುದ್ದೆ : ಎರಡು
ಕೆಲಸದ ಸ್ಥಳ:- ಸಾಗರ, ಶಿವಮೊಗ್ಗ, ಕೆ ಆರ್ ಪೇಟೆ – ಮಂಡ್ಯ
ವಿದ್ಯಾರ್ಹತೆ:- ಬಿಕಾಂ, ಎಂ ಕಾಂ

2. ಬ್ರಾಂಚ್ ಮ್ಯಾನೇಜರ್
ಪುರುಷ ಅಭ್ಯರ್ಥಿ
5 ರಿಂದ 15 ವರ್ಷ ಮ್ಯಾನೇಜರ್ ವಿಭಾಗದಲ್ಲಿ ಅನುಭವ ಹೊಂದಿರಬೇಕು
ಹುದ್ದೆ :- 4
ಕೆಲಸದ ಸ್ಥಳ :- ಸಾಗರ ಶಿವಮೊಗ್ಗ,ಶಿವಮೊಗ್ಗ , ಕೆ ಆರ್ ಪೇಟೆ – ಮಂಡ್ಯ, ಕೆ ಬಿ ಕ್ರಾಸ್ – ತುಮಕೂರು
ವಿದ್ಯಾರ್ಹತೆ :-ಯಾವುದೇ ಪದವಿ

3. ಹಿರಿಯ ಎಲೆಕ್ಟ್ರಿಷಿಯನ್
ಪುರುಷ ಅಭ್ಯರ್ಥಿ
5 ರಿಂದ 15 ವರ್ಷ ಅನುಭವ ಹೊಂದಿರಬೇಕು
ಹುದ್ದೆ :- 2
ಕೆಲಸದ ಸ್ಥಳ:- ಮಾಚೇನಹಳ್ಳಿ – ಶಿವಮೊಗ್ಗ, ಶಿವಮೊಗ್ಗ.
ವಿದ್ಯಾರ್ಹತೆ :- ಐಟಿಐ – ಎಲೆಕ್ಟ್ರಿಷಿಯನ್

ಆಸಕ್ತಿಯುಳ್ಳ ಅಭ್ಯರ್ಥಿಗಳು ಬಯೋಡೇಟ ವನ್ನು ಇಮೇಲ್ ಅಥವಾ ವಾಟ್ಸಪ್ ನಂಬರಿಗೆ ಕಳಿಸಬೇಕು

ಮೊಬೈಲ್ ನಂಬರ್:- 8951422014
ಇಮೇಲ್ :- hr@vtechengineer.com

ವಿಳಾಸ : ವಿ – ಟೆಕ್ ಇಂಜಿನಿಯರ್ ಕುಂಟವಳ್ಳಿ, ಮೇಳಿಗೆ ಅಂಚೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ

Categories
ಉದ್ಯೋಗ ಸುದ್ದಿ

ಕೆಪಿಟಿಸಿಎಲ್ ಸಂಸ್ಥೆಯು 2975 ಹುದ್ದೆಗಳಿಗೆ ನೇಮಕಾತಿ!

ಕೆಪಿಟಿಸಿಎಲ್ ಸಂಸ್ಥೆಯು 2975 ಹುದ್ದೆಗಳಿಗೆ ನೇಮಕಾತಿ!
* ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆ
* ಅರ್ಜಿ ಹಾಕಿ: ಅ.21ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

NAMMUR EXPRESS NEWS
ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಸಂಸ್ಥೆಯು 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ,10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು.ಅಕ್ಟೋಬರ್.21ರಂದು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕವಾಗಿದೆ.
ನ.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.KPTCL ವಯೋಮಾನ ಸಡಿಲಿಕೆ : ಎಸ್‌ಸಿ/ಎಸ್‌ಟಿ/ಕಾಟ್-1. ಅಭ್ಯರ್ಥಿಗಳು:05 ವರ್ಷ ಸಡಿಲಿಕೆ. ಪ್ರವರ್ಗ -2ಎ/2ಬಿ & 3ಬಿ ಅಭ್ಯರ್ಥಿಗಳು: 03 ವರ್ಷ ಸಡಿಲಿಕೆ.

Categories
ಉದ್ಯೋಗ ಸುದ್ದಿ ಮಲ್ನಾಡ್

ಹೊಸನಗರ ಕೊಡಚಾದ್ರಿ ಕಾಲೇಜಲ್ಲಿ ಉದ್ಯೋಗ ಮೇಳ

ಹೊಸನಗರ ಕೊಡಚಾದ್ರಿ ಕಾಲೇಜಲ್ಲಿ ಉದ್ಯೋಗ ಮೇಳ
– ಆ.9ಕ್ಕೆ ಉದ್ಯೋಗ ಮೇಳ: 10ಕ್ಕೂ ಹೆಚ್ಚು ಕಂಪನಿಗಳು ಹಾಜರ್
– ಉದ್ಯೋಗಾಕಾಂಕ್ಷಿಗಳು ಏನೇನ್ ಮಾಡಬೇಕು ಇಲ್ಲಿದೆ ಮಾಹಿತಿ

NAMMUR EXPRESS NEWS
ಹೊಸನಗರ : ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ ಮತ್ತು ಐ.ಕ್ಯೂ.ಎ.ಸಿ ಇವರ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಈ ಉದ್ಯೋಗ ಮೇಳದಲ್ಲಿ 15 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ಆಯಾ ಕಂಪನಿಗಳ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಬಿ.ಎ/ಬಿ.ಬಿ.ಎಂ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿ, ನೇರ ಸಂದರ್ಶನದ ಮೂಲಕ ಪ್ರಯೋಜನ ಪಡೆಯಬಹುದಾಗಿದೆ.

ಸೂಚನೆಗಳು:

* ಉದ್ಯೋಗ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ದಿನಾಂಕ: 08-08-2024 ರೊಳಗೆ ಈ ಕೆಳಗಿನ QR Code ಅಥವಾ ಗೂಗಲ್ ಲಿಂಕ್ ಮುಖಾಂತರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

Link: https://forms.gle/N9PqThNWBvVp1Xw98

. ಸ್ಥಳದಲ್ಲಿಯೇ ನೋಂದಣಿ ಸಹ ಇರುತ್ತದೆ.

* ಅಭ್ಯರ್ಥಿಗಳು ಆಧಾರ್ ಕಾರ್ಡ್ ಮತ್ತು ಕನಿಷ್ಠ 10 ಬಯೋಡೇಟಾ ಪ್ರತಿಗಳೊಂದಿಗೆ ಉದ್ಯೋಗ ಮೇಳಕ್ಕೆ ಹಾಜರಾಗುವುದು.
* ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರುತ್ತದೆ.
ದಿನಾಂಕ: 09-08-2024 ಶುಕ್ರವಾರ ಸಮಯ: ಬೆಳಿಗ್ಗೆ 10-30 ಕ್ಕೆ

ಸ್ಥಳ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಶಿವಮೊಗ್ಗ ಜಿಲ್ಲೆ

ಹೆಚ್ಚಿನ ಮಾಹಿತಿಗಾಗಿ:

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಗೋಪಾಲಗೌಡ ಬಡಾವಣೆ. ಶಿವಮೊಗ್ಗ-577205 ಮೊಬೈಲ್ ಸಂಖ್ಯೆ : 9480057950, 9740175125

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ, ಶಿವಮೊಗ್ಗ ಜಿಲ್ಲೆ- 577418
ಮೊಬೈಲ್ ಸಂಖ್ಯೆ : 9481254056, 8105891407
ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲಾ ಸೂಚನೆಗಳನ್ನು ಪಾಲಿಸತಕ್ಕದ್ದು

Categories
ಉಡುಪಿ ಉದ್ಯೋಗ ಸುದ್ದಿ

ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಲ್ಲಿ ಉದ್ಯೋಗ ಅವಕಾಶ

ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಲ್ಲಿ ಉದ್ಯೋಗ ಅವಕಾಶ
ತುರ್ತಾಗಿ ಬೋಧನಾ ಸಿಬ್ಬಂದಿಗಳು ಬೇಕಾಗಿದ್ದಾರೆ..

NAMMUR EXPRESS NEWS

ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅಲ್ಲಿ ಉದ್ಯೋಗ ಅವಕಾಶ ಲಭ್ಯವಿದೆ. ತುರ್ತಾಗಿ ಬೋಧನಾ ಸಿಬ್ಬಂದಿಗಳು ಬೇಕಾಗಿದ್ದಾರೆ. ಕೆಳಗಿನ ಹುದ್ದೆಗಳಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾವ ಕೋರ್ಸ್ ಬೋಧನೆ ಅರ್ಹತೆ ಖಾಲಿ ಹುದ್ದೆ
1. ಪ್ರಿನ್ಸಿಪಲ್ ( ಬೋಧನೆಯಲ್ಲಿ ಕನಿಷ್ಠ 15 ವರ್ಷಗಳ ಅನುಭವ ) – M.com /MBA/SLET Qualified /phd

2. B. Com ( ವಾಣಿಜ್ಯ) – M.com/MBA/NET/SLET Qualified (2 ಅಭ್ಯರ್ಥಿಗಳು )

3. B. Sc ( ಆಹಾರ ತಂತ್ರಜ್ಞಾನ ) – M.Sc ಆಹಾರ ತಂತ್ರಜ್ಞಾನ / M. Sc ಬಯೋ ಟೆಕ್ನಾಲಜಿ (2 ಅಭ್ಯರ್ಥಿಗಳು )

4. BCA ( ಕಂಪ್ಯೂಟರ್ ಸೈನ್ಸ್ ) – MCA /M.Sc ಕಂಪ್ಯೂಟರ್ ಸೈನ್ಸ್/M. Sc. IT/B.tech/M. tech (2 ಅಭ್ಯರ್ಥಿಗಳು )

5. BHS ( ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ) – BSCHS/BHM/MTM ( ತಾಜಾ ಅಥವಾ ಅನುಭವಿ ಅಭ್ಯರ್ಥಿ )

6. ಕನ್ನಡ – ಕನ್ನಡದಲ್ಲಿ ಎಂ.ಎ

30-07-2024 ರ ಮೊದಲು ವಿವರವಾದ ಸಿವಿ ಮತ್ತು ಛಾಯಾಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಿ.
ಮೇಲಿನ ವಿಳಾಸ ಅಥವಾ vidyalaxmiedu@gmail.com ಗೆ ಮೇಲ್ ಮಾಡಿ

ದೂರವಾಣಿ ಸಂಖ್ಯೆ : 7259020207

ಸೂಚನೆ : ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

Categories
ಉದ್ಯೋಗ ಸುದ್ದಿ

ಅಂಚೆ ಇಲಾಖೆಯಲ್ಲಿ 30,000 ಹುದ್ದೆ!

ಅಂಚೆ ಇಲಾಖೆಯಲ್ಲಿ 30,000 ಹುದ್ದೆ!

– ಎಸ್ ಎಸ್ ಎಲ್ ಸಿ ಪಾಸಾದವರು ಅರ್ಜಿ ಹಾಕಬಹುದು
– ಏನಿದು ಹುದ್ದೆ? ಸಂಬಳ ಎಷ್ಟು…?

NAMMUR EXPRESS NEWS

ಭಾರತೀಯ ಅಂಚೆ ಇಲಾಖೆಯಲ್ಲಿ ಜುಲೈ 15 ರಿಂದ ಅಂಚೆ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭವಾಗಲಿದ್ದು, 30,000 ಕ್ಕೂ ಹೆಚ್ಚು ಜನರನ್ನು ಗ್ರಾಮೀಣ ಡಾಕ್ ಸೇವಕರಾಗಿ ನೇಮಕ ಮಾಡಿಕೊಳ್ಳಲಾಗುವುದು. ಅಂಚೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಥವಾ ಉದ್ಯೋಗವನ್ನು ಹುಡುಕುತ್ತಿರುವ ಎಲ್ಲರಿಗೂ ಇದು ಸುವರ್ಣಾವಕಾಶವಾಗಿದೆ.

ಸಹಾಯಕ ಮಹಾನಿರ್ದೇಶಕ (ಜಿಡಿಎಸ್ / ಪಿಸಿಸಿ / ಪಿಎಪಿ) ರವಿ ಪಹ್ವಾ ಅವರ ಕಚೇರಿ ಸಿಇಪಿಟಿ ಬೆಂಗಳೂರು / ಹೈದರಾಬಾದ್ ಘಟಕದ ಮುಖ್ಯ ಪೋಸ್ಟ್ ಮಾಸ್ಟ‌ರ್ ಜನರಲ್ ಮತ್ತು ಜನರಲ್ ಮ್ಯಾನೇಜರ್ ಗೆ ಸೂಚನೆಗಳನ್ನು ನೀಡಿದೆ. ಜುಲೈ ಎರಡನೇ ವಾರದಲ್ಲಿ ಜಿಡಿಎಸ್‌ ಆನ್ಲೈನ್ ಎಂಗೇಜ್ಮೆಂಟ್ ಮತ್ತು ಶೆಡ್ಯೂಲ್‌ 2024 ರ ಅಡಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಜುಲೈ 15 ರಂದು ಅಧಿಸೂಚನೆ ಹೊರಡಿಸಲಾಗುವುದು.

ಅಭ್ಯರ್ಥಿಯು ಗಣಿತ ಮತ್ತು ಇಂಗ್ಲಿಷ್ ವಿಷಯಗಳೊಂದಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಹುದ್ದೆಗಳಿಗೆ ಆಯ್ಕೆಯು ಸಂಪೂರ್ಣವಾಗಿ 10 ನೇ ಮೆರಿಟ್ ಆಧಾರದ ಮೇಲೆ ಇರುವುದರಿಂದ, ಅಭ್ಯರ್ಥಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಇದು ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಂಡ ನಂತರ, ದಾಖಲೆ ಪರಿಶೀಲನೆಯನ್ನು ಮಾತ್ರ ಕರೆಯಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಜುಲೈ 15 ರಿಂದ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಕೆಳಗಿನ ವೆಬ್ ಸೈಟ್ ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.

ವೆಬ್ ಸೈಟ್ ವಿಳಾಸ : https://indiapostgdsonline.gov.in/ ಆಯ್ಕೆಯಾದ ಗ್ರಾಮೀಣ ಡಾಕ್ ಸೇವಕ್ ಅವರಿಗೆ ಕಚೇರಿ ನಿರ್ವಹಣಾ ಭತ್ಯೆ, ನಿಗದಿತ ಸ್ಟೇಷನರಿ ಭತ್ಯೆ, ಹೆಸರು ಭತ್ಯೆ, ನಗದು ವಾಹನ ಭತ್ಯೆ, ಸಮಯ ಸಂಬಂಧಿತ ನಿರಂತರ ಭತ್ಯೆ (ಟಿಆರ್ಸಿಎ), ತುಟ್ಟಿಭತ್ಯೆ (ಡಿಎ) ಮತ್ತು ವೈದ್ಯಕೀಯ ಭತ್ಯೆಯ ರೂಪದಲ್ಲಿ ನೀಡಲಾಗುವುದು. ಬ್ರಾಂಚ್ ಪೋಸ್ಟ್ ಮಾಸ್ಟ‌ರ್ ಮತ್ತು ಪೋಸ್ಟಲ್ ಸರ್ವೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಯ ಮಾಸಿಕ ವೇತನವು ಸಂಪೂರ್ಣವಾಗಿ ವ್ಯಕ್ತಿಯ ಮಟ್ಟ ಮತ್ತು ಅರ್ಹತೆಯನ್ನು ಆಧರಿಸಿದೆ.