ತುಳಸಿ ಪೂಜೆಯ ಸಂಭ್ರಮ..!
– ಎಲ್ಲೆಡೆ ತುಳಸಿ ಪೂಜೆ ಸಿದ್ಧತೆ: ಆಚರಣೆ ಹೇಗೆ?
– ತುಳಸಿ ವಿವಾಹ ಕುರಿತು ಪುರಾಣದಲ್ಲಿ ಏನಿದೆ?
NAMMUR EXPRESS NEWS
ಹಿಂದೂಗಳು ಹತ್ತು ಹಲವು ಪೂಜೆಗಳನ್ನು ಮಾಡುವುದರ ಜೊತೆ ಗಿಡ ಮರಗಳಲ್ಲಿ ದೇವರನ್ನು ಕಂಡು ಅದಕ್ಕೆ ಪೂಜೆ ಸಲ್ಲಿಸುತ್ತಾರೆ ಅದರಂತೆ ಪವಿತ್ರವಾದ ತುಳಸಿ ಗಿಡಕ್ಕೆ ಗೌರವದೊಂದಿಗೆ ಪೂಜೆಯನ್ನು ಸಲ್ಲಿಸುವ ತುಳಸಿ ಪೂಜೆಗೆ ಎಲ್ಲಾ ಕಡೆ ಸಿದ್ಧತೆ ನಡೆದಿದೆ. ತುಳಸಿ ಕಟ್ಟೆ ಇಲ್ಲದ ಮನೆ ಇರೋದಿಲ್ಲ. ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ.
ಪುರಾಣ ಕಥೆಗಳು ಹೇಳುವುದು ಏನು?
ಶುಭ-ಅಶುಭ ಕಾರ್ಯಗಳಲ್ಲಿ ತುಳಸಿ ಎಲೆಗೆ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮುಗಿದ ನಂತರ ಹಿಂದೂಗಳು ಆಚರಿಸುವ ಕಿರು ದೀಪಾವಳಿ ಹಬ್ಬವೇ ತುಳಸಿ ಪೂಜೆ. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಲಂಧರನೆಂಬ ರಾಕ್ಷಸನಿಗೆ ಬೃಂದಾ ಎಂಬ ಮಹಾಪತಿವ್ರತೆ ಹೆಂಡತಿ. ಈಕೆಯ ಪವಿತ್ರತೆ ಹಾಗೂ ಧರ್ಮನಿಷ್ಠೆಯೆ ರಾಕ್ಷಸ ಜಲಂಧರನಿಗೆ ಶ್ರೀರಕ್ಷೆ ಎಂಬಂತೆ ಇತ್ತು.ಅಮರ ಶಕ್ತಿಯನ್ನು ಪಡೆದುಕೊಂಡು ಅಜೇಯನಾಗಿದನ್ನು ಬೃಂದೆಯು ಪರಿಶುದ್ಧತೆ ತಪ್ಪದರ ಹೊರತು ಆಕೆಯ ಪತಿಯನ್ನು ಸೋಲಿಸಲಾಗುವುದಿಲ್ಲ ಎಂಬುದು ದೇವತೆಗಳಿಗೆ ತಿಳಿದಿತ್ತು. ದೇವತೆಗಳ ಕೋರಿಕೆಯ ಅಂತೆ ವಿಷ್ಣುವು ಜಲಂಧರನ ವೇಷ ಧರಿಸಿ ಅವಳ ಬಳಿ ಹೋದನು. ವಿಷ್ಣುವಿನ ರೂಪವೆಂದು ಅರಿಯದೆ ಆತ ತನ್ನ ಪತಿಯೆಂದೇ ಬೃಂದಾ ಭಾವಿಸಿದ್ದಳು ಇದರಿಂದ ಆಕೆಯ ಪವಿತ್ರತೆಗೆ ಅಡ್ಡಿಯಾಯಿತು. ಜಲಂಧರನ ಶಕ್ತಿ ಕುಂದಿತು. ಇದೇ ಸಮಯ ನೋಡಿ ಶಿವನು ಜಲಂಧರನನ್ನು ಯುದ್ಧದಲ್ಲಿ ಕೊಂದನು.
ತನ್ನ ಪತಿ ಅಲ್ಲ ಎಂದು ತಿಳಿದ ಬೃಂದಾ ಭಗವಾನ್ ವಿಷ್ಣುವಿಗೆ ಕಪ್ಪಾಗುತ್ತಾನೆ ಮತ್ತು ಹೆಂಡತಿಯಿಂದ ಬೇರ್ಪಡುತ್ತಾನೆ ಎಂದು ಶಪಿಸಿದಳು. ಬೃಂದಾ ವಿಷ್ಣುವಿಗೆ ಶಾಪ ನೀಡಿದಕ್ಕೆ ಸತಿ ಸಹಗಮನವಾದಳು. ಆ ಬೂದಿಯಿಂದ ತುಳಸಿ ಗಿಡ ಹುಟ್ಟಿತು. ಬೃಂದಾಳ ಪಾತಿವ್ರತ್ಯಕ್ಕೆ ಹಾನಿ ತಂದಿದ್ದನ್ನು ಸರಿಪಡಿಸಲು ತುಳಸಿಯನ್ನು ವಿಷ್ಣು ವಿವಾಹವಾದನು. ಹಾಗಾಗಿ ಇದನ್ನ ತುಳಸಿ ವಿವಾಹ ಎಂದು ಕರೆಯಲಾಗುತ್ತದೆ. ಅದರಿಂದ ವಿಷ್ಣುವಿನ ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿದೆ.
ತುಳಸಿ ಪೂಜೆಯಿಂದ ಆಗುವ ಪ್ರಯೋಜನವೇನು?
ಕಂಕಣ ಭಾಗ್ಯ ಕೂಡಿಬರದೇ ಇರುವವರು ಹಾಗೂ ವಿವಾಹ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಶಾಸ್ತ್ರೋಕ್ತವಾಗಿ ತುಳಸಿ ವಿವಾಹವನ್ನು ನೆರವೇರಿಸಿದರೆ ಕೂಡಲೇ ಕಂಕಣ ಭಾಗ್ಯ ಕೂಡಿಬರುತ್ತದೆ ಹಾಗೂ ಅಡೆತಡೆಗಳು, ವಿಘ್ನಗಳು ದೂರವಾಗುತ್ತವೆ ಎಂಬುದು ನಂಬಿಕೆಯಾಗಿದೆ ನಮ್ಮಲ್ಲಿ ಆಚರಿಸುವ ಪ್ರತೀ ಆಚರಣೆ ಅಷ್ಟೇ ಅಲ್ಲ ಅದರಲ್ಲಿ ತನ್ನದೇ ಆದ ವಿಶಿಷ್ಟತೆಯಿದೆ. ತುಳಸಿ ಅಲಂಕಾರ ಮಾಡಿ ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ.