ಡ್ರೈವಿಂಗ್ ಕಲಿಯುವವರಿಗೆ ಕಹಿ ಸುದ್ದಿ!
– ದುಬಾರಿಯಾದ ಡ್ರೈವಿಂಗ್ ತರಬೇತಿ ವೆಚ್ಚ
– 10 ವರ್ಷದ ನಂತರ ಶುಲ್ಕ ಹೆಚ್ಚಿಸಲು ಆದೇಶ
– ಜನವರಿಯಿಂದ ಜಾರಿ: ಯಾವ ವಾಹನಕ್ಕೆ ಎಷ್ಟು?
NAMMUR EXPRESS NEWS
ಎಲ್ಲಾ ವಾಹನಗಳ ಡ್ರೈವಿಂಗ್ ತರಬೇತಿಯ ಮೇಲಿನ ವೆಚ್ಚ ಹೆಚ್ಚಾಗಿದ್ದು ತರಬೇತಿ ಕೇಂದ್ರಗಳ ನಿರಂತರ ಹೋರಾಟಕ್ಕೆ ಇದೀಗ ಸಾರಿಗೆ ಇಲಾಖೆ ಅಸ್ತು ಎಂದಿದೆ. ಈ ಬಗ್ಗೆ ಆರ್ಟಿಓಗಳು, ಆಯುಕ್ತರು ಇಲಾಖೆಗೆ ಬಹಳ ಹಿಂದೆಯೇ ಅರ್ಜಿಸಲ್ಲಿಸಿದ್ದು ಅದರಲ್ಲಿ ಬದಲಾದ ಇಂಧನ ದರ, ಡ್ರೈವಿಂಗ್ ಸ್ಕೂಲ್ ನಿರ್ವಹಣೆ, ಡ್ರೈವಿಂಗ್ ಕಲಿಯುವಾಗಿನ ಡ್ಯಾಮೇಜ್ ಗಳು, ಮತ್ತು ಚಾಲಕರ ಸಂಬಳ ಎಲ್ಲವನ್ನೂ ಪರಿಗಣಿಸಲಾಗಿದೆ. ಈ ನಿಯಮ ಜನವರಿ 1.2024 ರಿಂದ ಜಾರಿಗೆ ಬರಲಿದೆ. ಇನ್ಮುಂದೆ ಆರ್ಟಿಒ ಕಚೇರಿಗಳಲ್ಲಿ ಲೈಸೆನ್ಸ್ ಪಡೆಯಲು LLR ಗೆ 350ರೂ ಮತ್ತು DL ಗೆ 1,000 ರೂ.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು. ಈ ಹಿಂದೆ ತರಬೇತಿ ಕೇಂದ್ರಗಳ ಶುಲ್ಕ ನಾಲ್ಕು ಚಕ್ರ ವಾಹನಗಳಿಗೆ 4,500 ಇದ್ದು ಲೈಸೆನ್ಸ್ ಜೊತೆಗೆ 4,500 ರಿಂದ 8 ಸಾವಿರದ ವರೆಗೂ ಪಡೆಯುತ್ತಿದ್ದು ಇದೀಗ ಒಬ್ಬ ವ್ಯಕ್ತಿ ಕಾರು ಚಾಲನೆ ಕಲಿಕೆ ಮತ್ತು ಲೈಸೆನ್ಸ್ ಗೆ ನೀಡಬೇಕಾದ ಹಣ 7ರಿಂದ 8 ಸಾವಿರದಷ್ಟಾಗಿದೆ.
ಶುಲ್ಕವನ್ನು ನಾಲ್ಕು ವರ್ಗಗಳಲ್ಲಿ ನಿಗದಿ
ಬೈಕ್: 2,000 ರಿಂದ 3,000ರೂ.
ಆಟೋರಿಕ್ಷಾ : 3,000 – 4,000ರೂ.
ಕಾರು: 4,000-7,000ರೂ.
ಸಾರಿಗೆ ವಾಹನ: 6,000- 9,000 ರೂ.