ಶೀತ, ಜ್ವರ ಎಲ್ಲೆಡೆ ಹೆಚ್ಚಳ: ಆಸ್ಪತ್ರೆಗಳು ಫುಲ್ ರಶ್!
– ಹವಾಮಾನ ವೈಪರೀತ್ಯದಿಂದಾಗಿ ಅನಾರೋಗ್ಯ
– ರಾಜ್ಯ ಸರ್ಕಾರದಿಂದ ಕರೋನಾ ಅಲರ್ಟ್
– ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಗೇ ಬೇಕು ಇಂಜೆಕ್ಷನ್…!
NAMMUR EXPRESS NEWS
ಬೆಂಗಳೂರು: ಹವಾಮಾನ ಬದಲಾವಣೆಯಿಂದ ಎಲ್ಲೆಡೆ ಶೀತ, ಜ್ವರ ಕೆಮ್ಮು ಹೆಚ್ಚಾಗಿದ್ದು ಆಸ್ಪತ್ರೆಗಳು ಫುಲ್ ರಶ್ ಆಗಿವೆ. ಹವಮಾನ ವೈಪರೀತ್ಯದಿಂದಾಗಿ, ಮಳೆ,ಚಳಿ, ಗಾಳಿ, ಬಿಸಿಲು ಮಿಶ್ರಿತ ವಾತಾವರಣದಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದು ಜನ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಪ್ರತಿ ಮನೆಯಲ್ಲಿ ಓರ್ವರಿಗೆ ಅನಾರೋಗ್ಯ ಇದೆ. ಈ ಖಾಯಿಲೆ ವೃದ್ಧರು, ಮಕ್ಕಳು ಎಲ್ಲ ವಯಸ್ಸಿನವರಿಗೂ ಕಾಣಿಸಿಕೊಂಡಿದೆ. ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಈಗ ಅತ್ಯಗತ್ಯವಾಗಿದೆ.
ಸರ್ಕಾರದಿಂದ ಕರೋನಾ ಮಾರ್ಗಸೂಚಿ
1. 60 ವರ್ಷ ಮೇಲ್ಪಟ್ಟವರು, ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾಸ್ಕ್ ಧರಿಸಬೇಕು.
2. ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸಮಸ್ಯೆ ಇದ್ದಲ್ಲಿ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
3. ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದೇ ಇರುವುದು
4. ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು
5. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಹಿರಿಯರು, ದುರ್ಬಲರನ್ನು ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡುವುದು
6. ವಿದೇಶ ಪ್ರಯಾಣದಲ್ಲಿ ಎಚ್ಚರಿಕೆಯಿಂದಿದ್ದು, ಮಾಸ್ಕ್ ಧರಿಸುವುದು.
ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಗೇ ಬೇಕು ಇಂಜೆಕ್ಷನ್…!
ಕರೋನಾ ಮೂರು ಅಲೆ ಬಂದು ಜನರ ಜೀವ ಬೀದಿ ಮೇಲೆ ಬಿದ್ದರೂ ಸರ್ಕಾರ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ, ಸೌಲಭ್ಯಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಎಲ್ಲಾ ಸರ್ಕಾರಗಳು ಬಡವರು, ಮಧ್ಯಮ ವರ್ಗದವರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈಗಲೂ ಅನೇಕ ಸರ್ಕಾರದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸಿಬ್ಬಂದಿ ಇಲ್ಲ, ಸೌಲಭ್ಯ ಇಲ್ಲ. ಈಗ ಔಷಧಿ ಕೂಡ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕರೋನಾ ಮತ್ತೊಂದು ಬಾರಿ ಬರುವ ಮುನ್ನವಾದ್ರೂ ಸರ್ಕಾರ ಇತ್ತ ಗಮನ ಕೊಡಬೇಕಿದೆ. ಅರೋಗ್ಯ, ಶಿಕ್ಷಣ, ಉದ್ಯೋಗ ಕೊಡುವ ಬಗ್ಗೆ ಸರ್ಕಾರ ಹೊಸ ಹೊಸ ಯೋಜನೆ ರೂಪಿಸಬೇಕಿದೆ.