Categories
ಮಲ್ನಾಡ್

ನ್ಯಾಷನಲ್ ಸಿಲ್ವರ್ & ವಾಚಸ್ ಇಂದು ಉದ್ಘಾಟನೆ: ಸಂಸದ ರಾಘವೇಂದ್ರ ಭೇಟಿ

ನ್ಯಾಷನಲ್ ಸಿಲ್ವರ್ & ವಾಚಸ್ ಇಂದು ಉದ್ಘಾಟನೆ: ಸಂಸದ ರಾಘವೇಂದ್ರ ಭೇಟಿ
– ಸರ್ವರಿಗೂ ಸ್ವಾಗತಿಸಿದ ನ್ಯಾಷನಲ್ ಸಂಸ್ಥೆ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ನ್ಯಾಷನಲ್ ಸಮೂಹ ಸಂಸ್ಥೆಯ ಹೊಸದೊಂದು ಉದ್ಯಮ ನ್ಯಾಷನಲ್ ಸಿಲ್ವರ್ & ವಾಚಸ್ ನ.25ಕ್ಕೆ ಶುಭಾರಂಭಗೊಳ್ಳಲಿದ್ದು ಸರ್ವರಿಗೂ ಸ್ವಾಗತಿಸಲಾಗಿದೆ. ಭಾನುವಾರ ತೀರ್ಥಹಳ್ಳಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಮೊಗ್ಗ ಸಂಸದ ರಾಘವೇಂದ್ರ ಅವರು ಮಳಿಗೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ತೀರ್ಥಹಳ್ಳಿ ಪಟ್ಟಣದ ಆಜಾದ್ ರಸ್ತೆಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಪಕ್ಕದ ವಿಶಾಲ ಮೂರಂತಸ್ಥಿನ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.
ರಾಘವೇಂದ್ರ ಅವರನ್ನು ಸಂಸ್ಥೆಯ ಮುಖ್ಯಸ್ಥರಾದ ಷರೀಫ್, ರೆಹಮಾನ್, ಕಲಾಂ, ಹೈದರ್ ಕಬೀರ್,ಸುಲೇಮಾನ್ ಸೇರಿದಂತೆ ಕುಟುಂಬದವರು ಸನ್ಮಾನಿಸಿದರು. ಈ ವೇಳೆ ಉದ್ಯಮಿ ಕೋಣಂದೂರು ಪ್ರಕಾಶ್, ಬಿಜೆಪಿ ಅಧ್ಯಕ್ಷರಾದ ಹೆದ್ದೂರು ನವೀನ್, ಚಂದವಳ್ಳಿ ಸೋಮಶೇಖರ್, ಯತಿರಾಜ್ ಸೇರಿದಂತೆ ಹಲವರು ಇದ್ದರು. ಬಳಿಕ ಬಾಳೆಬೈಲಿನಲ್ಲಿ ಸ್ಥಾಪಿಸಲಾಗಿರುವ ನ್ಯಾಷನಲ್ ಸ್ಪೋರ್ಟ್ಸ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಆಟಗಾರರಿಗೆ ಶುಭ ಹಾರೈಸಿದರು.

ಉದ್ಘಾಟನೆ ಸರಳ ಕಾರ್ಯಕ್ರಮ

ನ್ಯಾಷನಲ್ ಗ್ರೂಪ್‌ ಸಂಸ್ಥಾಪಕರಾದ ಹಾಜಿ ಶೇಖ್ ಅಹಮದ್ ಅವರು ಉದ್ಯಮವನ್ನು ಉದ್ಘಾಟಿಸುವರು. ನ.25ರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿರುವ ಸರಳ ಸಮಾರಂಭಕ್ಕೆ ಸರ್ವರನ್ನೂ ನ್ಯಾಷನಲ್ ಸಂಸ್ಥೆ ಆತ್ಮೀಯವಾಗಿ ಸ್ವಾಗತಿಸಿದೆ.

ಬೆಳ್ಳಿ ವಸ್ತುಗಳ ಬೃಹತ್ ಮಳಿಗೆ

ಬೆಳ್ಳಿ ಆಭರಣಗಳು, ಸಿಲ್ವರ್ ಪ್ರಾಡಕ್ಟ್ಸ್, ಸಿಲ್ವರ್ ಐಡಲ್ಸ್, ಪೂಜಾ ಸಾಮಗ್ರಿಗಳು, ಬೆಳ್ಳಿ ಪಾತ್ರೆಗಳು, ಉಡುಗೊರೆಗಳು ಸೇರಿ ಎಲ್ಲಾ ಬೆಳ್ಳಿ ವಸ್ತುಗಳು ಇಲ್ಲಿ ಸಿಗಲಿವೆ.

ಎಲ್ಲಾ ಬ್ಯಾಂಡ್‌ಗಳ ವಾಚ್‌ಗಳ ಬೃಹತ್ ಸಂಗ್ರಹ

ನ್ಯಾಷನಲ್‌ ವಾಚಸ್‌ನಲ್ಲಿ ಸೀಕೋ, ಸಿಟಿಜನ್, ಅಲ್ಪಾ, ಟೈಟಾನ್, ಫಾಸ್ಟ್‌ಟ್ರಾಕ್, ಫಾನ್ಸಿಲ್, ಕ್ಯಾಸಿಯೋ, ಜಿ-ಶಾಕ್, ಟೈಮರ್ಸ್ ‌ ಗೆಸ್, ಮಿಕೆಲ್, ಅರ್ಮಾನಿ, ಅರ್ಮಾನಿ ಎಕ್ಸ್‌ಚೇಂಜ್, ಪೋಲಿಸ್, ಟಾಮಿ ಸೇರಿದಂತೆ ಎಲ್ಲಾ ಪ್ರಖ್ಯಾತ ಬ್ರಾಂಡ್‌ಗಳ ವಾಚ್‌ಗಳ ವಿಫುಲ ಸಂಗ್ರಹ ಇಲ್ಲಿರಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.