ಯುವನಿಧಿ ನೋಂದಣಿ ಪ್ರಾರಂಭ
– ಅರ್ಜಿ ಹಾಕಬೇಕೆ? ಎಲ್ಲಿ? ಹೇಗೆ? ಇಲ್ಲಿದೆ ಡೀಟೆಲ್ಸ್.
NAMMUR EXPRESS NEWS
ಬೆಂಗಳೂರು: ಡಿ.26 ರಂದು ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದ್ದು ಈಗ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ಜನವರಿ 12.2024 ರಂದು ಉದ್ಘಾಟನೆಗೊಳ್ಳಲಿರುವ ಈ ಯೋಜನೆಗೆ ಅಲ್ಲಿಯವರೆಗೂ ನೋಂದಣಿಯಾದ, ಈ ಯೋಜನೆಗೆ ಅರ್ಹವಾದ ನಿರುದ್ಯೋಗಿ ಯುವಕ ಯುವತಿಯರಿಗೆ ಆ ದಿನವೇ ಡಿಬಿಟಿ ಮೂಲಕ ಭತ್ಯೆ ನೀಡಲಾಗುವುದು.
ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ:-
-2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
-ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
-ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
-ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
-2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಲಿದೆ.ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಏನು ಮಾಡಬೇಕು?
-ಮತದಾರರ ಗುರುತಿನ ಚೀಟಿ,
-ಪಡಿತರ ಚೀಟಿ
-ಆಧಾರ್ ಕಾರ್ಡ್.
-ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು.
-ಕೆವೈಸಿ ಕೂಡಾ ಮಾಡಿಸಿರಬೇಕು.
-ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
-ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
ಈಗ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ
-ಇ-ಆಡಳಿತ ವಿಭಾಗದ ಅಡಿಯಲ್ಲಿ EDCS ಮೂಲಕ (Electronic Delivery of Citizen Services) ಯುವನಿಧಿಗಾಗಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
-ಇದನ್ನು NICಯ ಬೆಂಬಲದೊಂದಿಗೆ EDCS ನಿರ್ವಹಿಸುವ ಸೇವಾಸಿಂಧು ವೇದಿಕೆಯ ಮೂಲಕ ಒದಗಿಸಲಾಗುತ್ತಿದೆ.
-ಬೆಂಗಳೂರು ಒನ್, ಕರ್ನಾಟಕ ಒಂದು ಮತ್ತು ಗ್ರಾಮ ಒಂದು ಕೇಂದ್ರಗಳು ಯೋಜನೆಗೆ ಉಚಿತವಾಗಿ ನೋಂದಾಯಿಸಲು ಯುವಕರಿಗೆ ಸಹಾಯ ಮಾಡಲು ಸಿದ್ಧವಾಗಿವೆ.
-ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗಳ ಮೂಲಕ web ವೆಬ್ಸೈಟ್ https://sevasindhugs.karnataka.gov.in ದಲ್ಲಿ ನೋಂದಾಯಿಸಬಹುದಾಗಿದೆ.|