ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರು!
– ಎಲ್ಲೆಡೆ ಹೊಸ ವರ್ಷಕ್ಕೆ ಸ್ವಾಗತಕ್ಕೆ ಸಜ್ಜು
– ರಾಜ್ಯಾದ್ಯಂತ ಹೆಚ್ಚಿದ ಪೋಲಿಸ್ ಭದ್ರತೆ
– ಹೋಟೆಲ್, ಪಬ್ ಬಾರುಗಳಲ್ಲಿ ಸಿದ್ದತೆ
– ಸಾರ್ವಜನಿಕರಲ್ಲಿ ಹೆಚ್ಚಿದ ಜೋಷ್..!
NAMMUR EXPRESS NEWS
ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜನ ಕೂಡ ಹೊಸ ವರ್ಷಕ್ಕೆ ಸಜ್ಜುಗೊಂಡಿದ್ದಾರೆ. ಬೇಕರಿಗಳಲ್ಲಿ ಮುಂಚಿತವಾಗಿ ಹೊಸ ವರ್ಷಕ್ಕೆ ಕೇಕ್ ಗಳನ್ನು ಆರ್ಡರ್ ಮಾಡುತ್ತಿದ್ದಾರೆ ಹಾಗೂ ಪಬ್, ಪಾರ್ಟಿ, ಹೋಟೆಲ್ ಗಳಲ್ಲಿ ತಯಾರಿ ಜೋರಾಗಿದೆ. ಹಾಗಾಗಿ ಹೊಸವರ್ಷ ಆಚರಣೆಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಹಾಗೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ವಿವಿಧ ಇಲಾಖೆಗಳು ಸಭೆ ನಡೆಸಿ ಕೆಲವೊಂದು ನಿಯಮ ಜಾರಿಗೊಳಿಸಿದ್ದಾರೆ.
ಪ್ರವಾಸಿ ತಾಣಗಳತ್ತ ಹೆಚ್ಚಾಗುವ ಜನ!
ಡಿಸೆಂಬರ್ 30 ಶನಿವಾರ ಹಾಗೂ 31 ಭಾನುವಾರ ಆಗಿರುವುದರಿಂದ ಹೊಸ ವರ್ಷಕ್ಕೆ ಪ್ರವಾಸಿ ತಾಣಗಳತ್ತ ಹೆಚ್ಚು ಜನ ಸೇರಿದ್ದಾರೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಫುಲ್ ಆಗಿವೆ. ಕಠಿಣ ಕ್ರಮದ ಎಚ್ಚರಿಕೆ : ಹೊಸ ವರ್ಷಕ್ಕೆ ನಗರಾದ್ಯಂತ ಸುಮಾರು 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಲಬ್ ಗಳು, ರೆಸ್ಟೋರೆಂಟ್ಗಳು ಪಾರ್ಟಿಗಳು ನಿಗದಿತ ಸಮಯಕ್ಕೆ ಮುಗಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಮಧ್ಯರಾತ್ರಿ ಒಂದು ಗಂಟೆಯವರೆಗೆ ಮಾತ್ರ ಕ್ಲಬ್ಗಳು, ರೆಸ್ಟೋರೆಂಟ್ಗಳಿಗೆ ಅನುಮತಿ ನೀಡಲಾಗಿದೆ. ಸಮಯ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಅಹಿತರಕರ ಘಟನೆಗಳು, ಡ್ರಗ್ಸ್ ಪಾರ್ಟಿಗಳು ಗಮನಕ್ಕೆ ಬಂದರೆ 112ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.