ಪಶ್ಚಿಮ ವಲಯದ ನೂತನ ಡಿಐಜಿ ಅಮಿತ್ ಸಿಂಗ್
– ಹೊಸ ವರ್ಷದಂದು ಅಧಿಕಾರ ಸ್ವೀಕಾರ!
NAMMUR EXPRESS NEWS
ಮಂಗಳೂರು: ಪಶ್ಚಿಮ ವಲಯದ ನೂತನ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಡ್ರಗ್ಸ್ ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು. ಸೆಂಟ್ರಲ್ ಕ್ರೇಡರ್ನಲ್ಲಿ ಕೆಲಸ ಮಾಡುವ ಅನುಭವ ವಿಭಿನ್ನವಾಗಿದ್ದು, ಇದೀಗ ಮತ್ತೆ ಮರಳಿ ಈ ಹುದ್ದೆಗೆ ಬಂದಿರುವುದು ಮರಳಿ ತವರಿಗೆ ಬಂದ ಅನುಭವವಾಗಿದೆ.
ಮಂಗಳೂರಿಗೆ ಹೋಲಿಸಿದರೆ, 10 ವರ್ಷಗಳ ಹಿಂದಿನ ಅನುಭವಕ್ಕೂ ಈಗಲಿಗೂ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಅಪರಾಧ ಪ್ರಕರಣಗಳೂ ಸಾಕಷ್ಟು ಬದಲಾಗಿದ್ದು, ಇಂದು ಕಳ್ಳತನ ಸೈಬರ್ ಕ್ರೈನಂತಹ ವೈಟ್ ಕಾಲರ್ ಅಪರಾಧಗಳು ಹೆಚ್ಚಿವೆ. ಇಲ್ಲಿನ ಎಸ್ಪಿ, ಇನ್ಸ್ಪೆಕ್ಟರ್ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಮಯದಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.