ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ!
– ದಿವ್ಯ ಘಳಿಗೆಗೆ ದಿನ ಗಣನೆ!
– ದೂರದರ್ಶನ/ಎಲ್ಇಡಿ ಮೂಲಕ ವೀಕ್ಷಣೆಗೆ ವ್ಯವಸ್ಥೆ!
– ಶ್ರೀರಾಮ ಜನ್ಮಭೂಮಿ ಮಂದಿರದ ಸಂಪೂರ್ಣ ವಿವರಗಳು
NAMMUR EXPRESS NEWS
ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ರಾಷ್ಟ್ರವೇ ಪುಳಕದಿಂದ ಕಾಯುತ್ತಿದೆ. ಇತ್ತ ಅಯೋಧ್ಯೆಯಿಂದ ಮನೆ ಮನೆಗೂ ಮಂತ್ರಾಕ್ಷತೆಯೊಂದಿಗೆ ನಿವೇದನಾ ಪತ್ರವೂ ಬಂದಿದೆ.
ಈ ಪತ್ರದಲ್ಲಿ ಏನಿದೆ? ನೋಡಿ :
ವಿಕ್ರಮ ಸಂವತ್ಸರ 2080, ಯುಗಾಬ್ದ 5125 ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶಿ, ಸೋಮವಾರ ( ದಿನಾಂಕ: 22-01-2024) ಈ ಶುಭದಿನದಂದು, ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲ ಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ( ಬಲರಾಮ) ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ನೆರವೇರಲಿದೆ. ದಿನಾಂಕ: 22-01-2024 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1ರ ಮಧ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅಯೋಧ್ಯ ನಗರಿಯಲ್ಲಿ ಈ ಸಂದರ್ಭದಲ್ಲಿ ಅಭೂತಪೂರ್ವ ಸಂಭ್ರಮದ ವಾತಾವರಣವು ನಿರ್ಮಾಣವಾಗಲಿದೆ. ಈ ಅಮೃತಗಳಿಗೆಯಲ್ಲಿ ತಾವು ಸಹ ತಮ್ಮ ತಮ್ಮ ಗ್ರಾಮ ಮೋಹಲ್ಲ, ಕಾಲೋನಿ, ಬಸ್ತಿಗಳಲ್ಲಿರುವ ಮಂದಿರಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುವುದು ಮಂದಿರ ಕೇಂದ್ರಿತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುವುದು ಆಯಾ ಗ್ರಾಮದಲ್ಲಿರುವ ಮಂದಿರದಲ್ಲಿ ಆಸು ಪಾಸಿನಲ್ಲಿರುವ ರಾಮ ಭಕ್ತರನ್ನು ಒಗ್ಗೂಡಿಸಿ, ಕಾರ್ಯಕ್ರಮವನ್ನು ಆಯೋಜಿಸುವುದು.
ದೂರದರ್ಶನ ಅಥವಾ ಎಲ್ಇಡಿ ಪರದೆ ಮೇಲೆ ಪ್ರೊಜೆಕ್ಟರ್ ಹಾಗೂ ಯಾವುದೇ ತರಹದ ಪರದೆಯಲ್ಲಿ ಅಯೋಧ್ಯೆಯ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡುವುದು, ಆಯಾ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಿರುವ ವಿವಿಧ ದೇವತೆಗಳ ಭಜನೆ, ಕೀರ್ತನೆ, ಪೂಜೆ ಮತ್ತು ಆರತಿಗಳನ್ನು ಮಾಡುವುದು. ಶ್ರೀರಾಮ ಜಯರಾಮ ಜಯ ಜಯ ರಾಮ ವಿಜಯ ಮಹಾಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು. ಇದರ ಜೊತೆಗೆ ಹನುಮಾನ್ ಚಾಲೀಸಾ, ಸುಂದರಕಾಂಡ ಪಾರಾಯಣ, ರಾಮರಕ್ಷಾ ಸ್ತೋತ್ರದ ಪಠಣಗಳನ್ನು ಸಹ ಜೋಡಿಸಿಕೊಳ್ಳಬಹುದು. ಇದರಿಂದ ಎಲ್ಲಾ ದೇವಾದಿ ದೇವತೆಗಳು ಪ್ರಸನ್ನರಾಗಲಿ ಮತ್ತು ವಾತಾವರಣವು ಸ್ವಸ್ತಿಕವಾಗಿ ರಾಮಮಯವಾಗಲಿ. ಪ್ರತಿಷ್ಠಾಪನೆಯ ನಂತರ ಶಂಖನಾದ ಮತ್ತು ಗಂಟನಾದದೊಂದಿಗೆ ಆರತಿ ಮತ್ತು ಪ್ರಸಾದದ ವಿತರಣೆಯನ್ನು ಮಾಡುವುದು, ಈ ಶುಭದಿನದಂದು ಎಲ್ಲ ದೂರದರ್ಶನ ಚಾನೆಲ್ ಗಳಲ್ಲಿ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ನೇರಪ್ರಸಾರ ಇರುತ್ತದೆ.
ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಎಲ್ಲಾ ದೇವಾದಿದೇವತೆಗಳನ್ನು ಪ್ರಸನ್ನಗೊಳಿಸಲು ದೀಪಗಳನ್ನು ಬೆಳಗುವುದು. ಜಗತ್ತಿನ ಕೋಟಿ ಕೋಟಿ ಮನೆಗಳ ಮುಂದೆ ದೀಪೋತ್ಸವ ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ ಜ್ಯೋತಿರ್ಮಯವಾಗುವುದು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನದ ನಂತರ ಪ್ರಭು ಶ್ರೀ ರಾಮಲಲ್ಲ ದರ್ಶನ ಮತ್ತು ನವ ನಿರ್ಮಿತ ಭವ್ಯ ಜನ್ಮಭೂಮಿ ಮಂದಿರವನ್ನು ದರ್ಶಿಸಲು ತಮಗೆ ಅನುಕೂಲದ ಸಮಯದಲ್ಲಿ ಪರಿವಾರ ಸಮೇತರಾಗಿ ಅಯೋಧ್ಯ ನಗರಿಗೆ ಬರುವಂತೆ ಮತ್ತು ಅದರಿಂದ ಪ್ರಭು ಶ್ರೀರಾಮಚಂದ್ರನ ಸಂಪೂರ್ಣ ಕೃಪೆಗೆ ಪಾತ್ರರಾಗುವಂತೆ ತಮ್ಮಲ್ಲಿ ವಿನಂತಿಸುತ್ತೇವೆ. ವಿ. ಸು : ಈ ಪ್ರತಿಷ್ಠಾಪನೆಯ ದಿನ ಯಾವುದೇ ಮೆರವಣಿಗೆ, ಶೋಭಾಯಾತ್ರೆ, ಸಾರ್ವಜನಿಕ ಕಾರ್ಯಕ್ರಮ ಮತ್ತು ಪಟಾಕಿ ಸಿಡಿಸುವುದಕ್ಕೆ ಅವಕಾಶವಿರುವುದಿಲ್ಲ.
ಶ್ರೀರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯ :
– ಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ಮಾಣ.
– ಪೂರ್ವ ಪಶ್ಚಿಮವಾಗಿ ಉದ್ದ 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಅಳತೆಯಲ್ಲಿ ಮಂದಿರ ನಿರ್ಮಾಣ.
– ಮೂರು ಮಹಡಿಗಳ ಮಂದಿರ ಪ್ರತಿ ಮಹಡಿಯ ಎತ್ತರ 20 ಅಡಿ, ಒಟ್ಟು 392 ಸ್ತಂಭಗಳು ಮತ್ತು 44 ಬಾಗಿಲುಗಳು.
– ನೆಲಮಹಡಿಯ ಗರ್ಭಗೃಹದಲ್ಲಿ ಶ್ರೀರಾಮಲಲ್ಲನ ವಿಗ್ರಹ ಮತ್ತು ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಶ್ರೀರಾಮ್ ದರ್ಬಾರ್.
– ಒಟ್ಟು ಐದು ಮಂಟಪಗಳು : ನೃತ್ಯ ಮಂಟಪ, ರಂಗಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನ ಮಂಟಪ.
– ಸ್ತಂಭಗಳು ಮತ್ತು ಬಾಗಿಲುಗಳ ಮೇಲೆ ದೇವಾದಿ ದೇವತೆಗಳ ಮತ್ತು ದೇವಾಂಗನಿಯರ ಮೂರ್ತಿಗಳು.
– 16.5 ಅಡಿ ಎತ್ತರವನ್ನು 32 ಮೆಟ್ಟಿಲುಗಳಲ್ಲಿ ಕ್ರಮಿಸಿ, ಸಿಂಹದ್ವಾರದ ಮೂಲಕ ಪೂರ್ವದಿಕ್ಕಿನಿಂದ ಮಂದಿರಕ್ಕೆ ಪ್ರವೇಶ.
– ದಿವ್ಯಾಂಗರು ಮತ್ತು ವೃದ್ಧರಿಗಾಗಿ ಜಾರು ಮೆಟ್ಟಿಲು ಮತ್ತು ಲಿಫ್ಟ್ ವ್ಯವಸ್ಥೆ.
– ಆಯತಾಕಾರವಾಗಿ ಮಂದಿರದ ಸುತ್ತಲೂ ಪರಿಕ್ರಮ – ಉದ್ದ 732 ಮೀಟರ್, ಅಗಲ 4.25 ಮೀಟರ್.
– ಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳು: ಭಗವಾನ್ ಸೂರ್ಯ, ಭಗವಾನ್ ಶಂಕರ, ಭಗವಾನ್ ಗಣಪತಿ, ದೇವಿ ಭಗವತಿ, ದಕ್ಷಿಣ ದಿಕ್ಕಿನಲ್ಲಿ ಹನುಮಂತ ಮತ್ತು ಉತ್ತರ ದಿಕ್ಕಿನಲ್ಲಿ ಮಾತಾ ಅನ್ನಪೂರ್ಣೇಶ್ವರಿಯ ಮಂದಿರ.
– ಮಂದಿರದ ಸಮೀಪದಲ್ಲಿ ಪೌರಾಣಿಕ ಕಾಲದ ಸೀತಾ ಕೊಳ.
– ಶ್ರೀ ರಾಮ ಜನ್ಮಭೂಮಿ ಮಂದಿರದ ಪರಿಸರದಲ್ಲಿ ಪ್ರಾಸ್ತವಿತ ಅನ್ನ ಮಂದಿರಗಳು : ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದರಾಜ ಗುಹ, ಮಾತಾ ಶಬರಿ ಮತ್ತು ದೇವಿ ಅಹಲ್ಯ.
– ನೈರುತ್ಯ ಭಾಗದಲ್ಲಿ ನವರತ್ನ ಕುಬೇರ ಪೀಠದಲ್ಲಿ ಸ್ಥಿತನಾದ ಶಿವ ಮಂದಿರದ ಜೀರ್ಣೋದ್ಧಾರ ಮತ್ತು ರಾಮಭಕ್ತ ಜಟಾಯು ರಾಜನ ಪ್ರತಿಮೆಯ ಸ್ಥಾಪನೆ ಯಾಗಿದೆ.