ಸಾಗರದ ಎಂಎಸ್ಐಎಲ್ ನ ಡೋರ್ ಒಡೆದು ಕಳ್ಳತನ!
– ಬರೊಬ್ಬರಿ 2,95,473/- ರೂ. ಹಣ ದರೋಡೆ!
– ಸಾಗರ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲು!
NAMMUR EXPRESS NEWS
ಸಾಗರ: ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸಾಗರದ ಜಂಬಗಾರಿನಲ್ಲಿರುವ ಎಂಎಸ್ಐಎಲ್ ಮದ್ಯದ ಮಳಿಗೆಯಲ್ಲಿ ಕಳ್ಳತನವಾಗಿದೆ. ಬರೊಬ್ಬರಿ 2,95,473/- ರೂ. ಹಣ ದೋಚಿಕೊಂಡು ಹೋಗಿದ್ದಾರೆ. ಜಂಬಗಾರುವಿನಲ್ಲಿರುವ ಸರ್ಕಾರಿ ಎಂಎಸ್ಐಎಲ್ ಮದ್ಯದ ಮಳಿಗೆಯಲ್ಲಿ ಈಗ ಎರಡು ವರ್ಷದಿಂದ ವೆಂಡರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಆನಂದಪ್ಪ ಮತ್ತು ಅಶೋಕ್ ಎಂಬುವವರು ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಪ್ರತಿದಿನ ಬೆಳಗ್ಗೆ 11-00 ಗಂಟೆಗೆ ಶಾಪನ್ನು ಓಪನ್ ಮಾಡಿ ದಿನವಿಡಿ ವ್ಯಾಪಾರ ಮಾಡಿ ರಾತ್ರಿ 10-00 ಗಂಟೆಗೆ ಶಾಪನ್ನು ಕ್ಲೋಸ್ ಮಾಡಲಾಗುತ್ತಿತ್ತು. ಆನಂದಪ್ಪ ಪ್ರತಿದಿನ ಮದ್ಯದ ಮಾರಾಟದಿಂದ ಬಂದ ಹಣವನ್ನು ಮಾರನೆ ದಿನ ಬ್ಯಾಂಕ್ ಅಕೌಂಟ್ ಗೆ ಡೆಪಾಸಿಟ್ ಮಾಡುತಿದ್ದರು.
ಡಿ.31, 2023 ರಂದು ಎಂದಿನಂತೆ ಶಾಪನ್ನು ಬೆಳಿಗ್ಗೆ ಓಪನ್ ಮಾಡಿ ದಿನವಿಡಿ ವ್ಯಾಪಾರ ಮಾಡಿದ್ದ ಆನಂದಪ್ಪ ಮತ್ತು ಅಶೋಕ್ ಭಾನುವಾರ ಆಗಿದ್ದರಿಂದ 2 ದಿನದಿಂದ ಸಂಗ್ರಹವಾದ 2,95,473/- ರೂ ನಗದು ಹಣವನ್ನು ಎಣಿಸಿ ಮಳಿಗೆಯ ಒಳಗೆ ಇದ್ದ ಲಾಕರ್ ನಲ್ಲಿ ಇಟ್ಟು ಲಾಕ್ ಮಾಡಿಕೊಂಡು ತೆರಳಿದ್ದರು. ಮಾರನೆಯ ದಿನ 2024 ರ ಬೆಳಗ್ಗೆ 10-15 ಗಂಟೆಗೆ ಎಂದಿನಂತೆ ಎಂಎಸ್ಐಎಲ್ ಮದ್ಯದ ಶಾಪಿನ ಡೋರ್ ಲಾಕ್ ತೆಗೆದು ಒಳಗೆ ಹೋಗಿ ನೋಡಿದಾಗ ಲಾಕರ್ ಒಪನ್ ಆಗಿತ್ತು. ಅದರಲ್ಲಿ ಇಟ್ಟಿದ್ದ 295473/- ರೂ ಹಣ ಕಳ್ಳತನ ವಾಗಿದೆ. ಈ ಬಗ್ಗೆ ಸಾಗರ ಟೌನ್ ಪೊಲೀಸ್ ಠಾಣೆಗೆ ಆನಂದಪ್ಪ ದೂರು ನೀಡಿದ್ದಾರೆ.