ಶ್ವಾನ ಪ್ರದರ್ಶನದಲ್ಲಿ ದಾಳಿ ನಡೆಸಿದ ರಾಟ್ ವೀಲರ್
– ವಿದ್ಯಾವಂತ ಕಳ್ಳರನ್ನು ಬಂಧಿಸಿದ ಸಾಗರ ಪೊಲೀಸರು!
– ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಕಾರ್ಗಲ್ ಪೊಲೀಸರು !
NAMMUR EXPRESS NEWS
ಸಾಗರ: ಶ್ವಾನ ಪ್ರದರ್ಶನದಲ್ಲಿ ಪ್ರೇಕ್ಷಕನ ಮೇಲೆ ರಾಟ್ ವೀಲರ್ ಎಂಬ ನಾಯಿಯು ಮನಸೋ ಇಚ್ಛೆ ದಾಳಿ ನಡೆಸಿದೆ. ಸಾಗರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ, ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಟ್ ವೀಲರ್ ಜಾತಿಯ ನಾಯಿ ಪ್ರೇಕ್ಷಕ ಶರತ್ ಎನ್ನುವವರ ಮೇಲೆ ಮನಸೊ ಇಚ್ಛೆ ದಾಳಿ ಮಾಡಿದೆ. ಡಾಗ್ ಶೋ ನೋಡಲು ಬಂದ ಪ್ರೇಕ್ಷಕ ಶರತ್ ರಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೆ ವೇಳೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಆಯೋಜಕರು ಹಿಂದೇಟು ಹಾಕಿದಾಗ ಶರತ್ ಆಯೋಜಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಘಟನೆ ನಡೆದ ನಂತರ ಆಯೋಜಕರ ವಿರುದ್ಧ ಗಾಯಾಳು ಆಕ್ರೋಶ ವ್ಯಕ್ತಪಡಿಸಿದ್ದು, 11 ಬಾರಿ ದಾಳಿ ನಡೆಸಿದ ನಾಯಿಯನ್ನು ಶ್ವಾನ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದು ದೊಡ್ಡ ತಪ್ಪಾಗಿದ್ದು ನನ್ನ ಮೇಲೆ ನಾಯಿ ದಾಳಿ ಮಾಡಿದ ನಂತರ ಸ್ಥಳದಲ್ಲಿ ಯಾವುದೇ ರೀತಿಯಾದ ವೈದ್ಯಕೀಯ ವ್ಯವಸ್ಥೆ ಹಾಗೂ ಅಂಬುಲೆನ್ಸ್ ಕೂಡ ಇರಲಿಲ್ಲ. ಹೀಗಾಗಿ ನಾನು ಆಸ್ಪತ್ರೆಗೆ ದಾಖಲಾಗಲು ತಡವಾಯಿತು ಎಂದು ಆಯೋಜಕರ ವಿರುದ್ಧ ಶರತ್ ಆಕ್ರೋಶ ಹೊರಹಾಕಿದ್ದಾರೆ.
ವಿದ್ಯಾವಂತ ಕಳ್ಳರನ್ನು ಬಂಧಿಸಿದ ಸಾಗರ ಪೊಲೀಸರು!
ಸಾಗರ: ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದಿಂದ ನಕಲಿ ಚೆಕ್ ಮೂಲಕ 4.25 ಕ್ವಿಂಟಲ್ ಕಾಳು ಮೆಣಸು ಖರೀದಿಸಿ, ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದ ವಿದ್ಯಾವಂತ ಕಳ್ಳರನ್ನು ಪೇಟೆ ಠಾಣೆ ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ. ಆರೋಪಿಗಳನ್ನು ಸಾಗರದ ಅಕ್ಷಯ್, ಹರ್ಷಿತ್, ಕುಮಾರ್, ಅಭಿನಂದನ್ ರನ್ನು ಸೆರೆ ಹಿಡಿದು ಇವರಿಂದ 2.76 ಲಕ್ಷ ರೂ. ಮೌಲ್ಯದ 4.25 ಕ್ವಿಂಟಾಲ್ ಕಾಳು ಮೆಣಸನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ವಿಕ್ಕಿ ತಲೆ ಮರೆಸಿಕೊಂಡಿದ್ದು ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಆದೇಶದಂತೆ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಸೀತಾರಾಮ ಹಾಗೂ ಪಿಎಸ್ಐ ನಾಗರಾಜ ನೇತೃತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ, ಶ್ರೀನಿವಾಸ, ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ್ ಅವರ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಬಂದಿತರೆಲ್ಲರೂ ಉನ್ನತ ವ್ಯಾಸಂಗ ಮಾಡಿದವರಾಗಿದ್ದಾರೆ.
ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಕಾರ್ಗಲ್ ಪೊಲೀಸರು !!
ಸಾಗರ : ಬ್ಯಾಕೋಡು ಭಾಗದಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿತನ್ನನ್ನು ಬಂಧಿಸಲಾಗಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡು ಭಾಗದಲ್ಲಿ ದಿನಾಂಕ:16/12/2023 ರಂದು ಕಳ್ಳತನವಾಗಿದ್ದು, ಹಾಗೂ ದಿನಾಂಕ:29/12/2023 ರಂದು ಕಳ್ಳತನವಾಗಿದ್ದು, ಕಾರ್ಗಲ್ ಪೊಲಿಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತವೆ. ಕಳ್ಳತನವಾಗಿರುವ ಮಾಲು ಮತ್ತು ಆರೋಪಿ ಪತ್ತೆಗಾಗಿ ಮಿಥುನ್ ಕುಮಾರ್ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು.
ಶಿವಮೊಗ್ಗ ಮತ್ತು ಕಾರಿಯಪ್ಪ, ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರುರವರು ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ ಗೋಪಾಲ ಕೃಷ್ಣ ಟಿ ನಾಯಕ್ ಪೋಲೀಸ್ ಉಪಧೀಕ್ಷಕರು, ಸಾಗರ ರವರ ಮಾರ್ಗದರ್ಶನದ ಮೇರೆಗೆ ಸಾಗರ ಗ್ರಾಮಾಂತರ ವೃತ್ತ ಸಿಪಿಐ ರವರಾದ ಮಹಾಬಲೇಶ್ವರ ನಾಯ್ಕ ಮತ್ತು ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಹೊಳಬಸಪ್ಪ ಹೋಳಿ ರವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಸನಾವುಲ್ಲಾ, ಜಯೇಂದ್ರ,ಮಂಜುನಾಥ್ ನಾಯ್ಕ್, ಶರತ್ ಕುಮಾರ್ ಪುರುಷೋತ್ತಮ ಹಾಗೂ ಕಾರ್ಯಾಚರಣೆಗೆ ಸಹಕರಿಸಿದ ತಾಂತ್ರಿಕ ಸಿಬ್ಬಂದಿಯವರಾದ ವಿಜಯ್ ಹಾಗೂ ಇಂದ್ರೇಶ್ ರವರನ್ನೊಳಗೊಂಡ ತಂಡ ಮಂಗಳೂರು ಮೂಲದ ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಡಿಸಲಾಗಿರುತ್ತದೆ.
ಇನ್ನು 3-4 ಜನ ಆರೋಪಿತರ ಕೈವಾಡವಿದ್ದು, ಇವರು ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣ ದಾಖಲಾದ ಒಂದು ವಾರದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಬಹುಮಾನ ಘೋಷಣೆ ಮಾಡುವುದರ ಜೊತೆಗೆ ಅಭಿನಂದನೆ ಸಲ್ಲಿಸಿರುತ್ತಾರೆ.