ವಿವಿಧ ಕೃಷಿ ಚಟುವಟಿಕೆಗಳಿಗೆ 10 ಲಕ್ಷದವರೆಗೂ ಸಾಲ
– ಮೇಲಾಧಾರವಿಲ್ಲದೆ ಸಾಲ ಸೌಲಭ್ಯ!
– ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
NAMMUR EXPRESS NEWS
ಬೆಂಗಳೂರು: ಭಾರತೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಬೃಹತ್ ಕಂಪನಿಗಳಲ್ಲಿ ಒಂದಾದ ಹೆಚ್ ಡಿಎಫ್ ಸಿ ಬ್ಯಾಂಕ್ ರೈತರಿಗೆ ಹೈನುಗಾರಿಕೆ ಸೇರಿದಂತೆ ವಿವಿಧ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳನ್ನು ಉತ್ತೇಜಿಸಲು ಸಾಲದ ಸೌಲಭ್ಯವನ್ನು ನೀಡುತ್ತಿದೆ. ಗ್ರಾಮೀಣ ಭಾಗದ ಜನರು ಕೃಷಿ ಚಟುವಟಿಕೆಗಳಲ್ಲಿ ಪರಿಣಿತಿ ಹೊಂದಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ತಮ್ಮ ಚಟುವಟಿಕೆಗಳನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಕೃಷಿ, ಪಶುಪಾಲನೆಯಲ್ಲಿ ಹೊಸದನ್ನು ಮಾಡುವ ಆಸಕ್ತಿ ಇದ್ದರೂ ಕೂಡ ಬಂಡವಾಳದ ಕಾರಣಕ್ಕೆ ಪರಿತಪಿಸುವವರಿಗೆ ಸರಕಾರ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ವಿವಿಧ ಸಾಲ ಸೌಲಭ್ಯಗಳನ್ನು ಕಲ್ಪಿಸಿವೆ. ಈ ನಿಟ್ಟಿನಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನ ಈ ಸೌಲಭ್ಯ ಸಹಕಾರಿಯಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಹೆಚ್ ಡಿಎಫ್ ಸಿ ಬ್ಯಾಂಕ್ ನಿಮ್ಮ ಅರ್ಹತೆಗೆ ಅನುಗುಣವಾಗಿ 10 ಲಕ್ಷದ ವರೆಗೆ ಲೋನ್ ಸೌಲಭ್ಯ ನೀಡುತ್ತದೆ. ಈ ಲೋನ್ ಪಡೆಯಲು ಯಾವುದೇ ಮೇಲಾಧಾರದ ಅವಶ್ಯಕತೆ ಇರುವುದಿಲ್ಲ. ಸಂಬಂಧಪಟ್ಟ ಕೃಷಿ, ಪಶುಪಾಲನೆ ಚಟುವಟಿಕೆಗಳಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವ, ಕನಿಷ್ಠ 18 ಮತ್ತು ಗರಿಷ್ಟ 60 ವರ್ಷದ ವಯೋಮಿತಿಯವರು ಈ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವ್ಯಾವ ಕೃಷಿ ಚಟುವಟಿಕೆಗಳಿಗೆ ಲೋನ್ ಸೌಲಭ್ಯ ಸಿಗಲಿದೆ? ಹೈನುಗಾರಿಕೆ,ಹಂದಿ ಸಾಕಾಣಿಕೆ, ಶ್ರೇಣೀಕರಣ ಹಾಗೂ ವಿಂಗಡೀಕರಣ ಘಟಕ,ಕೋಳಿ ಸಾಕಾಣಿಕೆ, ಜೇನು ಕೃಷಿ,ಸಣ್ಣ ಆಹಾರ ಸಂಸ್ಕರಣ ಘಟಕಗಳು, ಮೀನು ಸಾಕಾಣಿಕೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
ಆಧಾರ್ ಕಾರ್ಡ, ಪಾನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಒಂದು ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್. ಅರ್ಜಿ ಸಲ್ಲಿಸುವುದು ಹೇಗೆ? : ಹೆಚ್ ಡಿಎಫ್ ಸಿ ಲೋನ್ ಸೌಲಭ್ಯ ಪಡೆಯಲು ನಿಮ್ಮ ಹತ್ತಿರವಿರುವ ಹೆಚ್ ಡಿಎಫ್ ಸಿ ಬ್ಯಾಂಕ್ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಕೆಳಗೆ ನೀಡಿರುವ ಸಹಾಯವಾಣಿ ಸಂಖ್ಯೆಗೆ ಕರೆ ಅರ್ಜಿ ಸಲ್ಲಿಕೆಯ ಮತ್ತಷ್ಟು ವಿವರ, ಬಡ್ಡಿ ಮತ್ತು ಸಾಲ ಮರುಪಾವತಿ ಸಂಬ೦ಧಿತ ವಿವರಗಳ ಬಗ್ಗೆ ವಿಚಾರಿಸಬಹುದು.
ಈ ಲೋನ್ ಸಂಬಂಧಿತ ಯಾವುದೇ ಸಲಹೆ ಮತ್ತು ಸಹಾಯ ಬೇಕಿದ್ದರೆ ಈ ಕೆಳಗಿನ ಸಹಾಯವಾಣಿಗೆ ಕರೆ ಮೊ: 8310840750