ನಗರದ ಮಾರಿಕಾಂಬ ಜಾತ್ರೆ ರಂಗು!
– ಅದ್ಧೂರಿಯಾಗಿ ಶುರು: ಮೊದಲ ದಿನ ಪೂಜೆ ವಿಧಿ ವಿಧಾನ
– ಜ.27ವರೆಗೆ ಜಾತ್ರಾ ಮಹೋತ್ಸವ: ಅಂಗಡಿ ಬಂದವು
– ಸುತ್ತಮುತ್ತಲಿನಿಂದ ಸಾವಿರಾರು ಭಕ್ತರ ಆಗಮನ
– 3 ದಿನ ನಡೆಯಲಿದೆ ನಗರ ಹಬ್ಬ
NAMMUR EXPRESS NEWS
ನಗರ: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದಲ್ಲಿ ಮಾರಿಕಾಂಬ ದೇವಿ ಜಾತ್ರೆಯು 23-01-2024 ರ ಮಂಗಳವಾರದಿಂದ 27-01-2024 ರ ಶನಿವಾರದವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದದ್ದು ಈಗಾಗಲೇ ಚಾಲನೆ ಸಿಕ್ಕಿದೆ ಜಾತ್ರೆಗೆ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿದ್ದು ಆಟೋಪಕರಣಗಳೂ ಸಜ್ಜಾಗಿವೆ. ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಈ ವಾರಾಂತ್ಯದಲ್ಲಿ ರಜೆಗಳೂ ಇರುವುದರಿಂದ ದೂರದ ಊರುಗಳಲ್ಲಿ ಇರುವವರೂ ಸಹ ಜಾತ್ರೆಗೆ ಬರುತ್ತಿದ್ದಾರೆ. ನಗರದಲ್ಲಿ ಹಿಂದಿನ ಕಾಲದ ಕೋಟೆಯು ಐತಿಹಾಸಿಕ ಹಿನ್ನಲೆ ಹೊಂದಿದ್ದು ಅಲ್ಲಿಗೆ ಪ್ರವಾಸಿಗರ ಆಗಮನವೂ ಬಹಳಷ್ಟಿದೆ. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡುವ ಜೊತೆಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಇಂದು ಬುಧವಾರ ದೇವಿಗೆ ಕುರಿ ಕೋಳಿ ಹರಕೆಗಳನ್ನು ನೀಡುತ್ತಾರೆ.
ಗುರುವಾರ ಮತ್ತು ಶುಕ್ರವಾರಗಳಂದು ದೇವಿಗೆ ಮಡಿಲು ತುಂಬುವ ಸೇವೆಗಳು, ಕಾರ್ಯಕ್ರಮಗಳಿರುತ್ತವೆ. ಶನಿವಾರ ದೇವಿಯ ವಿಗ್ರಹವನ್ನು ಎರಡು ಕಿ.ಲೋ .ಸಮೀಪದಲ್ಲಿನ ಗಂಡನ ಮನೆಗೆ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಕೊಂಡೊಯ್ದು ನಂತರ ಅಲ್ಲಿ ಪೂಜೆ ಸಲ್ಲಿಸಿ, ನಾಲ್ಕು ಕಿಲೋ ಮಿಟರ್ ದೂರದ ಕಲಾವತಿ ನದಿಯ ಹಿನ್ನೀರಿನಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ. ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆಯಲಿದ್ದು.
ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಿತು. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆಯಲಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆಯಲಿದೆ. ಜ.26 ರ ಶುಕ್ರವಾರ ರಾತ್ರಿ ಹತ್ತರಿಂದ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾ ನಡೆಯಲಿದೆ. ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ಜನ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಆಶಿರ್ವಾದ ಪಡೆಯುತ್ತಾರೆ. ಇನ್ನೂ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರವಾಗುವಂತೆ ಸಮಿತಿ ಮನವಿಮಾಡಿದೆ.