Categories
ತೀರ್ಥಹಳ್ಳಿ ವ್ಯವಹಾರ

ಫ್ಯಾಷನ್ ಬ್ರಿಗೇಡ್ ವಾರ್ಷಿಕ ಡ್ರಾ..!

ಫ್ಯಾಷನ್ ಬ್ರಿಗೇಡ್ ವಾರ್ಷಿಕ ಡ್ರಾ..!
– 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ.. ಯಾರಿಗೆ ಲಕ್?..ಇಲ್ಲಿದೆ ಡೀಟೇಲ್ಸ್
– ಸಂತೋಷ್ ದೇವಾಡಿಗ, ಸುಜಿತ್ ಸಾಲಿಯಾನ್, ಕಟ್ಟೆ ಕರಣ್, ಉಮೇಶ್ ಶೆಟ್ಟಿ, ಶ್ರೀನಂದಾ ಅವರಿಂದ ಡ್ರಾ

NAMMUR EXPRESS BUSINESS NEWS
ತೀರ್ಥಹಳ್ಳಿಯ ಪ್ರಸಿದ್ಧ ಪುರುಷರ ಫ್ಯಾಷನ್ ವಸ್ತ್ರ ಮಳಿಗೆ ಫ್ಯಾಷನ್ ಬ್ರಿಗೇಡ್ ಸಂಸ್ಥೆಯ ವಾರ್ಷಿಕ ಡ್ರಾ ನಡೆದಿದ್ದು, ಸುಮಾರು 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ ಲಭ್ಯವಾಯಿತು. ಪುರುಷರ ಎಲ್ಲಾ ರೀತಿಯ ವಸ್ತ್ರಗಳು, ಫ್ಯಾಷನ್ ಬಟ್ಟೆಗಳು ಲಭ್ಯವಿರುವ ಅಪಾರ ಗ್ರಾಹಕರ ಮೆಚ್ಚಿನ ಅಂಗಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಘಟಕದ ತಾಲೂಕು ಅಧ್ಯಕ್ಷರಾದ ಸಂತೋಷ್ ದೇವಾಡಿಗ, ತೀರ್ಥಹಳ್ಳಿ ಎನ್ ಎಸ್ ಯು ಐ ಅಧ್ಯಕ್ಷ ಸುಜಿತ್ ಸಾಲಿಯಾನ್, ಕರವೇ ಪ್ರಮುಖರೂ ಉದ್ಯಮಿ ಕಟ್ಟೆ ಕರಣ್, ಉಮೇಶ್ ಶೆಟ್ಟಿ, ದಬ್ಬಣಗದ್ದೆ ಶ್ರೀನಂದಾ ಡ್ರಾ ನಡೆಸಿಕೊಟ್ಟರು.

ಏನಿದು ಯೋಜನೆ..?

ವಿಶೇಷ ಬಂಪರ್ ಬಹುಮಾನ ಪ್ರತಿ 1000 ರೂ ಖರೀದಿ ಮೇಲೆ ಒಂದು ಕೂಪನ್ ನೀಡಲಾಗಿತ್ತು. ಗ್ರಾಹಕರು ಈ ಯೋಜನೆ ಜತೆಗೆ ಅತ್ಯಂತ ಉತ್ತಮ ಡಿಸೈನ್, ಗುಣಮಟ್ಟ, ಸೇವೆಗಾಗಿ ಫ್ಯಾಷನ್ ಬ್ರಿಗೇಡ್ ಬಟ್ಟೆ ಅಂಗಡಿಯಲ್ಲಿ ಖರೀದಿ ಮಾಡಿದ್ದರು. ಈ ಹಿಂದೆ ತಿಲಿ ಫ್ಯಾಷನ್ ಇದ್ದ ಅಂಗಡಿ ಹೊಸ ಮ್ಯಾನೇಜ್ ಮೆಂಟ್ ಜತೆ ಫ್ಯಾಷನ್ ಬ್ರಿಗೇಡ್ ಆಗಿ ಬದಲಾಗಿ ಇದೀಗ ವಸ್ತ್ರ ಉದ್ಯಮದಲ್ಲಿ ತಮ್ಮದೇ ಗ್ರಾಹಕರನ್ನು ಹೊಂದಿದೆ.

ಬಹುಮಾನ ಗೆದ್ದವರು ಯಾರು ಯಾರು..?

ಬಂಪ‌ರ್ ಬಹುಮಾನ: ವಾಷಿಂಗ್ ಮೆಷಿನ್
ಶ್ರೇಯಸ್ ಕುಕ್ಕೆ 9901310067

ಮೊದಲ ಬಹುಮಾನಃ  ಸ್ಮಾರ್ಟ್ ಎಲ್‌.ಇ. ಡಿ ಟಿವಿ
ಮಹಾಬಲೇಶ್ ಪುರ್ಲೆಕೊಪ್ಪ 9481063239

ದ್ವಿತೀಯ ಬಹುಮಾನ: ಸ್ಪೋರ್ಟ್ಸ್ ಸೈಕಲ್
ಸುನಿಲ್ S L ಶಿವಳ್ಳಿ 9480766112

ತೃತೀಯ ಬಹುಮಾನ : ಸ್ಮಾರ್ಟ್ ವಾಚ್
ಸುನಿಲ್ H R ಹುಲಿಗುದ್ದು 8762329033

ಆಕರ್ಷಕ 5 ಸಮಾಧಾನಕರ ಬಹುಮಾನಗಳು

ಮಹೇಶ್ R ಬೆಟ್ಟಮಕ್ಕಿ 9731315573

ಸುನಿಲ್ ಕುಮಾರ್ V M ವರ್ತೆಕೇರಿ 8147651947

ಶಿವರಾಜ್ ಬಂಡಿಗಡಿ 9731368464

ಪವನ್ K ದವಣೆಬೈಲು 8217047189

ರಥನ್ ನಾಲೂರು 8277331235

ಕೂಡಲೇ ಭೇಟಿ ನೀಡಿ ಬಹುಮಾನ ಪಡೆದುಕೊಳ್ಳಿ

ಕಟ್ಟೆ ಕಾಂಪ್ಲೆಕ್ಸ್, ಮಾರಿಕಾಂಬಾ ದೇವಸ್ಥಾನ ಪಕ್ಕ ಆಜಾದ್ ರಸ್ತೆ, ತೀರ್ಥಹಳ್ಳಿ

9740556069, 9845497914

Categories
ತೀರ್ಥಹಳ್ಳಿ

ತೀರ್ಥಹಳ್ಳಿಯ ದೊಡ್ಡ ಸರ್ಕಾರಿ ಕಟ್ಟಡ ಉದ್ಘಾಟನೆಗೆ ಸಿದ್ಧ!

ತೀರ್ಥಹಳ್ಳಿಯ ದೊಡ್ಡ ಸರ್ಕಾರಿ ಕಟ್ಟಡ ಉದ್ಘಾಟನೆಗೆ ಸಿದ್ಧ!
– 3 ಅಂತಸ್ತಿನ ತಾಲೂಕು ಪಂಚಾಯತ್ ನೂತನ ಕಟ್ಟಡ
– ಮಾ.4 ಸೋಮವಾರ ಉದ್ಘಾಟನೆ: ಏನಿದು ವಿಶೇಷ?
– ಎಸಿಸಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯಿಂದ ಉತ್ತಮ ಕಾಮಗಾರಿ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತೀ ದೊಡ್ಡ ಸರ್ಕಾರಿ ಕಟ್ಟಡ ನೂತನ ತಾಲೂಕು ಪಂಚಾಯತ್ ಮಾ.4ರ ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಮಾ.4ಕ್ಕೆ ಸೋಮವಾರದಂದು ಮಧ್ಯಾಹ್ನ 3:00ಕ್ಕೆ ಗ್ರಾಮೀಣಾಭಿವೃದ್ಧಿ ಭವನ(ತಾಲ್ಲೂಕು ಪಂಚಾಯತ್ ಕಟ್ಟಡ ) ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿದೆ. ಶಾಸಕರಾದ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮೀಣಾ ಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಗ್ರಾಮೀಣಾಭಿವೃದ್ಧಿ ಭವನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈಗಾಗಲೇ ಅಂತಿಮ ಸಿದ್ಧತೆ ನಡೆದಿದೆ. ತೀರ್ಥಹಳ್ಳಿಯ ಪ್ರಸಿದ್ಧ ಗುತ್ತಿಗೆ ಸಂಸ್ಥೆ ಎಸಿಸಿ ಕನ್ಸ್ಟ್ರಕ್ಷನ್ಸ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಕಾಮಗಾರಿ ಮಾಡಿದೆ. ಮೂರು ಅಂತಸ್ತಿನ ಈ ಕಟ್ಟಡದ ಮೇಲೆ ದೊಡ್ಡ ಗಡಿಯಾರ ಇರಲಿದ್ದು, ಗಂಟೆಗೊಮ್ಮೆ ಹೊಡೆದುಕೊಳ್ಳಲಿದೆ.

ಏನೇನಿದೆ ಈ ಕಟ್ಟಡದಲ್ಲಿ…?

ರಾಜ್ಯದಲ್ಲೇ ಮಾದರಿಯಂತಿರುವ ಹಾಗೂ ತೀರ್ಥಹಳ್ಳಿಯ ಹೆಗ್ಗುರುತು ಆಗಲಿರುವ ಈ ಗ್ರಾಮೀಣಾಭಿವೃದ್ಧಿ ಭವನದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅಕ್ಷರ ದಾಸೋಹ, ಹಿಂದುಳಿದ ವರ್ಗಗಳ ಇಲಾಖೆ, ಕಾರ್ಮಿಕ ಹಾಗೂ ಕೈಗಾರಿಕಾ ಇಲಾಖೆ ಒಂದೇ ಸೂರಿನಡಿ ಸೇವೆ ಸಲ್ಲಿಸಲಿವೆ.

Categories
ತೀರ್ಥಹಳ್ಳಿ ಶಿಕ್ಷಣ

ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಾಗ್ದೇವಿ ಪಿಯು ವಿದ್ಯಾರ್ಥಿಗಳು

ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಾಗ್ದೇವಿ ಪಿಯು ವಿದ್ಯಾರ್ಥಿಗಳು

NAMMUR EXPRESS NEWS
2023-24 ನೆಯ ಸಾಲಿನ ಜೆ.ಇ.ಇ. ಮೇನ್ಸ್ ಪರೀಕ್ಷೆಯ ‘ಫೇಸ್ 1’ ಫಲಿತಾಂಶವು ಪ್ರಕಟಗೊಂಡಿದ್ದು, ಅದರಲ್ಲಿ ವಾಗ್ದೇವಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಪರ್ಸಂಟೈಲ್ ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ.
ವಿವರ ಕೆಳಗಿನಂತಿದೆ.
1. ಹರ್ಷ ಎಂ. ಆರ್. -97.74
2. ಸುಚಿಂತ್ ಎಸ್. – 93.87
3. ಜೀಶನ್ ಡಿಸಿಲ್ವ – 92.02
4. ಶ್ರೀವತ್ಸ . ಆರ್. – 82.98
5. ಶರಣ್ಯಾ ಎನ್.‌ ಎಸ್. – 81.33
ಇವರಿಗೆ ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಉಪನ್ಯಾಸಕರು ಹಾಗೂ ಪೋಷಕ ವೃಂದ ಅಭಿನಂದಿಸಿರುತ್ತಾರೆ.

Categories
ತೀರ್ಥಹಳ್ಳಿ ರಾಜಕೀಯ

ಮತ್ತೆ ಕುಣಜೆ ಕಿರಣ್ ಅವರಿಗೆ ಜೆಡಿಎಸ್ ಸಾರಥ್ಯ!

ಮತ್ತೆ ಕುಣಜೆ ಕಿರಣ್ ಅವರಿಗೆ ಜೆಡಿಎಸ್ ಸಾರಥ್ಯ!
– ಶಿವಮೊಗ್ಗ ಜಿಲ್ಲಾಧ್ಯಕ್ಷ ಗೋಪಾಲ್ ನೇತೃತ್ವದಲ್ಲಿ ನೇಮಕ
– ತೀರ್ಥಹಳ್ಳಿ ಕೆಟಿಕೆಯಲ್ಲಿ ನಡೆದ ಜೆಡಿಎಸ್ ಸಭೆ

NAMMUR EXPRESS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ಮುಂದಿನ ಅವಧಿಗೆ ಹಾಲಿ ಅಧ್ಯಕ್ಷರಾಗಿದ್ದ ಕುಣಜೆ ಕಿರಣ್ ಪ್ರಭಾಕರ್ ಮರು ನೇಮಕಗೊಂಡಿದ್ದಾರೆ. ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಡಾ. ಕಡಿದಾಳು ಗೋಪಾಲ್ ಅವರು ಮತ್ತು ಜಿಲ್ಲಾ ಮುಖಂಡರು ತೀರ್ಥಹಳ್ಳಿಯ ಕೆಟಿಕೆಯಲ್ಲಿ ನಡೆದ ಸಭೆಯಲ್ಲಿ ತೀರ್ಥಹಳ್ಳಿ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ನಿರ್ಣಯದಂತೆ ಜೆಡಿಎಸ್ ಪಕ್ಷದ ಅಧ್ಯಕ್ಷರ ಸ್ಥಾನವನ್ನು ಕಿರಣ್ ಅವರಿಗೆ ಮುಂದುವರಿಯಲು ಸೂಚಿಸಿದ್ದಾರೆ. ಈ ಮೂಲಕ ಪಕ್ಷ ಬಲವರ್ಧನೆಗೆ ಅವಕಾಶ ಕೊಟ್ಟಿದ್ದಾರೆ. ರಾಮಕೃಷ್ಣ, ಮಹಿಳಾ ಘಟಕದ ಪ್ರಮುಖರು, ಗುರುದತ್, ತಲಬಿ ರಾಘವೇಂದ್ರ, ಮೇದೋಳಿಗೆ ರಾಮಸ್ವಾಮಿ, ರಥನ್ ಇತರರು ಇದ್ದರು.

ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಡಿಮ್ಯಾಂಡ್

ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಡಿಮ್ಯಾಂಡ್ ಬರಲಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಒಂದೊಂದು ಕ್ಷೇತ್ರದಲ್ಲಿ 5 ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಜೆಡಿಎಸ್ ಕೂಡ ಅನಿವಾರ್ಯ ಆಗಲಿದೆ.

Categories
ತೀರ್ಥಹಳ್ಳಿ ರಾಜಕೀಯ ಶಿವಮೊಗ್ಗ

ತೀರ್ಥಹಳ್ಳಿಯಲ್ಲಿ ಬಿಜೆಪಿ ನೂತನ ಟೀಂಗೆ ಅಧಿಕಾರ!

ತೀರ್ಥಹಳ್ಳಿಯಲ್ಲಿ ಬಿಜೆಪಿ ನೂತನ ಟೀಂಗೆ ಅಧಿಕಾರ!
– ಪಕ್ಷದ ಧ್ವಜ ಕೊಡುವ ಮೂಲಕ ಜವಾಬ್ದಾರಿ ಹಸ್ತಾಂತರ
– ಎಲ್ಲಾ ಘಟಕಗಳ ಪಕ್ಷದ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಕಾರ್ಯಕರ್ತರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆರಗ

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಫೆ.10ರಂದು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಜವಾಬ್ದಾರಿಯನ್ನು ಸಾವಿರಾರು ಸಂಖ್ಯೆಯ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಸಲಾಯಿತು. ಹಿಂದಿನ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಬಾಳೆಬೈಲು ರಾಘವೇಂದ್ರ ಅವರು ಪಕ್ಷದ ಧ್ವಜವನ್ನು ಹೆದ್ದೂರು ನವೀನ್ ಅವರಿಗೆ ಕೊಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ತೀರ್ಥಹಳ್ಳಿಯಲ್ಲಿ ಸಂಘಟನೆಯ ಆಧಾರದ ಮೇಲೆ ಪಕ್ಷವನ್ನು ಕಟ್ಟಿದ್ದೇವೆ. ನಮ್ಮ ಕಾರ್ಯಕರ್ತರಿಂದ ತೀರ್ಥಹಳ್ಳಿಯಲ್ಲಿ ಬಿಜೆಪಿ ಎಷ್ಟೋ ಬಾರಿ ಗೆಲುವು ಸಾಧಿಸಿದೆ. ಕಾರ್ಯಕರ್ತರು ಎಲ್ಲೂ ಸುಳ್ಳು ಹೇಳಲಿಲ್ಲ, ಎಲ್ಲೂ ಮೋಸ ಮಾಡಲಿಲ್ಲ ಇದರ ಬಗ್ಗೆ ನಮಗೆ ಹೆಮ್ಮೆ ಹಾಗೂ ವಿಶ್ವಾಸ ಇದೆ. ಅತಿ ದೊಡ್ಡ ತಂಡವನ್ನು ನಮ್ಮ ತಾಲೂಕಿನಲ್ಲಿ ನಾವು ಹೊಂದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತ ಬಿಜೆಪಿಗೆ ಬರುವ ಹಾಗೆ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ತೀರ್ಥಹಳ್ಳಿ ತಾಲ್ಲೂಕಿನ ಬಿಜೆಪಿ ನೂತನ ಅಧ್ಯಕ್ಷರಾದ ಹೆದ್ದೂರು ನವೀನ್ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷರಾಗುವ ಜವಾಬ್ದಾರಿಯನ್ನು ನನಗೆ ನಂಬಿ ನನಗೆ ಕೊಟ್ಟಿದ್ದೀರಾ ಅದಕ್ಕೆ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಹಾಗೂ ಅದಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಆರಗ ಜ್ಞಾನೇಂದ್ರ ಹಾಗೂ ನಮ್ಮ ಸಂಘಟನೆಯ ಹಿರಿಯರ ಹೋರಾಟದ ಪರಿಶ್ರಮದಿಂದ ಕಟ್ಟಿದಂತಹ ಸಂಘಟನೆಯಾಗಿದೆ. ಯುವಜನತೆಯು ತೀರ್ಥಹಳ್ಳಿಯ ಇತಿಹಾಸದ ಅಧ್ಯಯನ ಮಾಡಿ, ಅದರ ಹಿಂದಿನ ಪರಿಶ್ರಮ ಎಷ್ಟು ಜನರ ತ್ಯಾಗ ಇದೆ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಯುವ ಪೀಳಿಗೆಗೆ ಮನವಿ ಮಾಡಿದರು.

ಸುಮಾರು 6 ಸಾವಿರ ಜನರಲ್ಲಿ ಕೆಲವರ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಂದು ತಂಡ ಈ ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಬೇಕಿದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಂಡಕ್ಕೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಬಳಿಕ ಪ್ರಾಸ್ತವಿಕ ನುಡಿಗಳನ್ನಾಡಿದ ಉಪಾಧ್ಯಕ್ಷರಾದ ಬಾಳೆಬೈಲ್ ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಮೇಘರಾಜ್, ಸಂಘಟನೆಯ ಹಿರಿಯರಾದ ಪ್ರಕಾಶ್, ಪ್ರಮುಖರಾದ ನಾಗರಾಜ್ ಶೆಟ್ರು, ನಿರ್ದೇಶಕರಾದ ಈಶ್ವರ್, ಶಂಕರನಾರಾಯಣ ಐತಾಕಳ್, ಐತಾಳ್, ಅಶೋಕ್ ಮೂರ್ತಿ, ಸಾಲೆಕೊಪ್ಪ ರಾಮಚಂದ್ರ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋಧ ಮಂಜುನಾಥ್, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್, ಶ್ರೀನಿವಾಸ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಸೇರಿ ಬಹುತೇಕ ಎಲ್ಲಾ ನಾಯಕರು ಹಾಜರಿದ್ದರು.

Categories
ತೀರ್ಥಹಳ್ಳಿ

ತೀರ್ಥಹಳ್ಳಿ ಚಿತ್ರಮಂದಿರಕ್ಕೆ ಮತ್ತೆ ಮತ್ತೆ ಸಿನಿಮಾ!

ತೀರ್ಥಹಳ್ಳಿ ಚಿತ್ರಮಂದಿರಕ್ಕೆ ಮತ್ತೆ ಮತ್ತೆ ಸಿನಿಮಾ!
– ಪ್ರತಿ ದಿನ 4 ಶೋ… ಒಂದೊಳ್ಳೆ ಕಾಮಿಡಿ ಸಿನಿಮಾ
– ಡಾ. ಅರುಣ್ ಹೊಸಕೊಪ್ಪ ನಿರ್ದೇಶನ, ನೈರುತ್ಯ ಮೀಡಿಯಾ ನಿರ್ಮಾಣ
– ಕೋಣಂದೂರು ಇಮ್ತಿಯಾಜ್ ಗಾಯನ

NAMMUR EXPRESS NEWS
ತೀರ್ಥಹಳ್ಳಿ: ನೈರುತ್ಯ ಆರ್ಟ್ ಮೀಡಿಯಾದ ಅಡಿಯಲ್ಲಿ ನಿರ್ಮಾಣಗೊಂಡ ‘ಮತ್ತೆ ಮತ್ತೆ’ ಕನ್ನಡ ಸಿನಿಮಾ ಶುಕ್ರವಾರ ತೆರೆಕಾಣಲಿದ್ದು ಅದ್ಭುತ ಯಶಸ್ಸು ಕಾಣಲಿ ಎಂದು ಹಾರೈಸುತ್ತಾ ಮೂಲತಃ ಉಪನ್ಯಾಸಕರಾದ ಡಾ.ಅರುಣ್ ಈ ಚಿತ್ರವನ್ನು ನಿರ್ದೇಶಿಸಿದ್ದು ಅವರದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಪ್ರೊಡ್ಯೂಸರ್ ಬೇಕಾಗಿದ್ದಾರೆ ಎಂಬ ಅಡಿಬರಹ ಇರುವ ಈ ಚಿತ್ರದ ೩ ಹಾಡುಗಳಿಗೆ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜನೆ ಮಾಡಿದ್ದು, ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಹಾಡುಗಳ ಜೊತೆಗೆ ಟ್ರೈಲರ್ ಪ್ರದರ್ಶನದ ಸಂದರ್ಭದಲ್ಲಿ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿತು. ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯನಟ ಎಂ.ಎಸ್.ಉಮೇಶ್ ಮಾತನಾಡಿ, ಈ ಚಿತ್ರ ಅರುಣ್‌ರ ಕನಸಿನ ಕೂಸು. ಇಲ್ಲಿ ಕಥೆಯೇ ಹೀರೋ. ಮನದೀಪ್‌ರಾಯ್, ಸತ್ಯಜಿತ್, ರಾಕ್‌ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ, ಆದರೆ ಈ ಚಿತ್ರ ಅವರನ್ನು ಜೀವಂತವಾಗಿರಿಸಿದೆ. ಅರುಣ್ ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಅವರ ಶ್ರಮಕ್ಕೆ ಫಲ ಸಿಗಬೇಕು ಎಂದಿದ್ದಾರೆ.

ನಿರ್ಮಾಪಕ ಕಮ್ ನಿರ್ದೇಶಕ ಡಾ.ಅರುಣ್ ಹೊಸಕೊಪ್ಪ ಮಾತನಾಡುತ್ತಾ ಇದು ಸಂಪೂರ್ಣ ಕಾಮಿಡಿ ಸಿನಿಮಾ. ನಾನೊಬ್ಬ ಉಪನ್ಯಾಸಕ. ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತು, ಒಂದು ಸಿನಿಮಾ ನಿರ್ದೇಶನ ಮಾಡಬೇಕೆಂದು ಈ ಕಥೆ ರೆಡಿಮಾಡಿದೆ. ಚಿಕ್ಕ ಪಾತ್ರದಲ್ಲೂ ಅಭಿನಯಿಸಿದ್ದೇನೆ. ಚಿತ್ರ ನೋಡಿದ ಎಲ್ಲರೂ ತುಂಬಾ ಚೆನ್ನಾಗಿ ಬಂದಿದೆ ಎಂದಿದ್ದಾರೆ. ಜರ್ನಲಿಸಂ ಮುಗಿಸಿದ ೫ ಜನ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಅಂತ ಯೋಚಿಸಿ ನಂತರ ಅವರೆಲ್ಲ ಸೇರಿ ಸಿನಿಮಾವೊಂದನ್ನು ನಿರ್ಮಿಸಿ, ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೇನೆಲ್ಲ ಆಗಿಹೋಯ್ತು, ಸಾಕಷ್ಟು ಅಡೆ, ತಡೆಗಳನ್ನು ಎದುರಿಸಿ, ಕೊನೆಗೂ ಅವರು ಸಿನಿಮಾ ಮಾಡಿ ಮುಗಿಸಿದರೇ, ಇಲ್ಲವೇ ಎನ್ನುವುದೇ ಮತ್ತೆ ಮತ್ತೆ ಚಿತ್ರದ ಕಥಾಹಂದರ. ಹಿರಿಯ ಕಲಾವಿದರನ್ನು ಕರೆಸಿ ನಮ್ಮ ಚಿತ್ರದಲ್ಲಿ ಪಾತ್ರ ಮಾಡಿಸಿದ್ದೇನೆ. ಕನ್ನಡ ಚಿತ್ರರಂಗದ ಬಹುತೇಕ ಹಿರಿಯ, ಹಾಸ್ಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದರಿಂದ ಬರುವ ಲಾಭದಲ್ಲಿ ಶೇ.೨೫ರಷ್ಟು ಹಣವನ್ನು ಬಡ ಕಲಾವಿದರಿಗೆ ಕೊಡಬೇಕು ಎಂದುಕೊಂಡಿದ್ದೇನೆ.

೧೯ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ ಎಂದಿದ್ದಾರೆ. ಒಮ್ಮೆ ಸಿನಿಮಾನೋಡಿ ನಂತರ ಅಭಿಪ್ರಾಯ ವ್ಯಕ್ತಪಡಿಸಿ ಎನ್ನುವುದೇ ನನ್ನ ಪ್ರಾರ್ಥನೆ. ಚಿತ್ರದಲ್ಲಿ ಉಮೇಶಣ್ಣ ಅವರ ಜೊತೆ ಸಿಹಿಕಹಿ ಚಂದ್ರು ಅವರು ಮುಖ್ಯಮಂತ್ರಿಯಾಗೇ ಕಾಣಿಸಿಕೊಂಡಿದ್ದಾರೆ.. ಇನ್ನು ಸಂಜನಾ ಗಲ್‌ರಾನಿ ಅವರದು ಚಿಕ್ಕ ಪಾತ್ರವಾದರೂ ಕಥೆಗೆ ತಿರುವು ಕೊಡುತ್ತದೆ.. ಉಳಿದಂತೆ ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶಂಖನಾದ ಅಂಜಿನಪ್ಪ, ಪ್ರಕಾಶ್ ತುಮ್ಮಿನಾಡ್, ಶ್ರೀನಿವಾಸ್‌ಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಬೆಂಗಳೂರು, ನೆಲಮಂಗಲ, ಮುರುಡೇಶ್ವರ, ಶಿರಾಲಿ ಹೀಗೆ ಹಲವಾರು ಲೊಕೇಶನ್‌ಗಳಲ್ಲಿ ೫೦ ದಿನಗಳವರೆಗೆ ಚಿತ್ರೀಕರಣ ನಡೆಸಿದ್ದೇವೆ ಎಂದು ವಿವರಿಸಿದರು. ನಂತರ ಕೋಟೆ ಪ್ರಭಾಕರ್, ಆರ್‌.ಜೆ. ವಿಕ್ಕಿ, ಸ್ವಾತಿ, ನೃತ್ಯನಿರ್ದೇಶಕ ಅನಿ ಇವರೆಲ್ಲ ಚಿತ್ರದ ಕುರಿತಂತೆ ಮಾತನಾಡಿದರು. ಚಿತ್ರ ಅದಾಗಲೇ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದ್ದು ತೀರ್ಥಹಳ್ಳಿಯಲ್ಲಿ ನಾಳೆಯಿಂದ ನಾಲ್ಕು ಪ್ರದರ್ಶನಗಳಿರುತ್ತವೆ.

Categories
ತೀರ್ಥಹಳ್ಳಿ

ಅಂತರಾಷ್ಟ್ರೀಯ ಮಟ್ಟಕ್ಕೆ ಮಹಮದ್ ನಿಯಾಜ್!

ಅಂತರಾಷ್ಟ್ರೀಯ ಮಟ್ಟಕ್ಕೆ ಮಹಮದ್ ನಿಯಾಜ್!
– ಕರಾಟೆ ಸ್ಪರ್ಧೆಯಲ್ಲಿ ಗಮನ ಸೆಳೆದ ಕೋಣಂದೂರು ಹುಡುಗ
– ಚಿತ್ರಕಲೆಯಲ್ಲಿ ಪ್ರಾಪ್ತಿ ಪೇಟೆ ಶೆಣೈ ಪ್ರಥಮ ಸ್ಥಾನ

NAMMUR EXPRESS NEWS
ಕೋಣಂದೂರು: ತೀರ್ಥಹಳ್ಳಿ ತಾಲೂಕು ರಾಷ್ಟ್ರೀಯ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಹಮದ್ ನಿಯಾಜ್ ಈಚೆಗೆ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮಾರ್ಷಲ್ ಆರ್ಟ್ ಸಂಸ್ಥೆ ಮಹಾರಾಷ್ಟದಲ್ಲಿ ಜ.18ರಿಂದ 21ರವರೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕೌಶಲ್ ವೈಯಕ್ತಿಕ (ಕತಾ)ಹಾಗೂ ಕೌಶಲ್ (ಗುಂಪು ಕತಾ ವಿಭಾಗ )ನಲ್ಲಿ ದ್ವಿತೀಯ ಸ್ಥಾನ ಪಡೆದು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಪಡೆದಿರುತ್ತಾನೆ. ಈತ ರಿಪ್ಪನ್ ಪೇಟೆಯ ನಾಸಿರ್ ಅಹಮದ್ ಮತ್ತು ಜೀನತ್ ದಂಪತಿಗಳ ಪುತ್ರನಾಗಿದ್ದಾನೆ. ವಿಜೇತ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಚಿತ್ರಕಲೆಯಲ್ಲಿ ಪ್ರಾಪ್ತಿ ಪೇಟೆ ಶೆಣೈ ಪ್ರಥಮ ಸ್ಥಾನ

ಕೋಣಂದೂರು: ತೀರ್ಥಹಳ್ಳಿ ರಾಷ್ಟ್ರೀಯ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಾಪ್ತಿ ಪೇಟೆ ಶೆಣೈ ಈಚೆಗೆ ಶಿವಮೊಗ್ಗದ ಎಸ್.ಬಿ.ವಿಜನ್ ಮೈಲಾರೇಶ್ವರ ದೇವಸ್ಥಾನ ಏರ್ಪಡಿಸಿದ್ದ ಅಂತರ ಶಾಲಾ ಮಟ್ಟದ ಶ್ರೀ ರಾಮನ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಶ್ರೀರಾಮ ಜನ್ಮ ಭೂಮಿ ಅಯೋಧ್ಯಾ ಮಂದಿರದ ಶ್ರೀರಾಮ ಪ್ರತಿಷ್ಠಾಪನೆಯ ನೆನಪಿಗಾಗಿ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ತೀರ್ಥಹಳ್ಳಿಯ ಪ್ರಸನ್ನ ಪೇಟೆ ಶೆಣೈ ಮತ್ತು ಪ್ರಕೃತಿ ಪೇಟೆ ಶೆಣೈ ದಂಪತಿಗಳ ಪುತ್ರಿ. ವಿಜೇತ ವಿದ್ಯಾರ್ಥಿಯನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Categories
ಹೊಸನಗರ

ನಗರದ ಮಾರಿಕಾಂಬ ಜಾತ್ರೆ ರಂಗು!

ನಗರದ ಮಾರಿಕಾಂಬ ಜಾತ್ರೆ ರಂಗು!
– ಅದ್ಧೂರಿಯಾಗಿ ಶುರು: ಮೊದಲ ದಿನ ಪೂಜೆ ವಿಧಿ ವಿಧಾನ
– ಜ.27ವರೆಗೆ ಜಾತ್ರಾ ಮಹೋತ್ಸವ: ಅಂಗಡಿ ಬಂದವು
– ಸುತ್ತಮುತ್ತಲಿನಿಂದ ಸಾವಿರಾರು ಭಕ್ತರ ಆಗಮನ
– 3 ದಿನ ನಡೆಯಲಿದೆ ನಗರ ಹಬ್ಬ

NAMMUR EXPRESS NEWS
ನಗರ: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದಲ್ಲಿ ಮಾರಿಕಾಂಬ ದೇವಿ ಜಾತ್ರೆಯು 23-01-2024 ರ ಮಂಗಳವಾರದಿಂದ 27-01-2024 ರ ಶನಿವಾರದವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದದ್ದು ಈಗಾಗಲೇ ಚಾಲನೆ ಸಿಕ್ಕಿದೆ ಜಾತ್ರೆಗೆ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿದ್ದು ಆಟೋಪಕರಣಗಳೂ ಸಜ್ಜಾಗಿವೆ. ಅಪಾರ ಸಂಖ್ಯೆಯಲ್ಲಿ ಭಕ್ತರ ಆಗಮನವಾಗುತ್ತಿದೆ. ಈ ವಾರಾಂತ್ಯದಲ್ಲಿ ರಜೆಗಳೂ ಇರುವುದರಿಂದ ದೂರದ ಊರುಗಳಲ್ಲಿ ಇರುವವರೂ ಸಹ ಜಾತ್ರೆಗೆ ಬರುತ್ತಿದ್ದಾರೆ. ನಗರದಲ್ಲಿ ಹಿಂದಿನ ಕಾಲದ ಕೋಟೆಯು ಐತಿಹಾಸಿಕ ಹಿನ್ನಲೆ ಹೊಂದಿದ್ದು ಅಲ್ಲಿಗೆ ಪ್ರವಾಸಿಗರ ಆಗಮನವೂ ಬಹಳಷ್ಟಿದೆ. ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡುವ ಜೊತೆಗೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು. ಇಂದು ಬುಧವಾರ ದೇವಿಗೆ ಕುರಿ ಕೋಳಿ ಹರಕೆಗಳನ್ನು ನೀಡುತ್ತಾರೆ.

ಗುರುವಾರ ಮತ್ತು ಶುಕ್ರವಾರಗಳಂದು ದೇವಿಗೆ ಮಡಿಲು ತುಂಬುವ ಸೇವೆಗಳು, ಕಾರ್ಯಕ್ರಮಗಳಿರುತ್ತವೆ. ಶನಿವಾರ ದೇವಿಯ ವಿಗ್ರಹವನ್ನು ಎರಡು ಕಿ.ಲೋ .ಸಮೀಪದಲ್ಲಿನ ಗಂಡನ ಮನೆಗೆ ಎತ್ತಿನ ಬಂಡಿಯ ಮೆರವಣಿಗೆಯ ಮೂಲಕ ಕೊಂಡೊಯ್ದು ನಂತರ ಅಲ್ಲಿ ಪೂಜೆ ಸಲ್ಲಿಸಿ, ನಾಲ್ಕು ಕಿಲೋ ಮಿಟರ್ ದೂರದ ಕಲಾವತಿ ನದಿಯ ಹಿನ್ನೀರಿನಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ. ಜಾತ್ರೆಯ ಪ್ರಯುಕ್ತ ವಿಶೇಷ ಮನರಂಜನೆ ಕಾರ್ಯಕ್ರಮಗಳೂ ನಡೆಯಲಿದ್ದು.

ಜ.23 ರ ಮಂಗಳವಾರ ರಾತ್ರಿ 10 ರಿಂದ ಬತ್ತದ ಗದ್ದೆ ಮೈದಾನದಲ್ಲಿ ಕೃಷ್ಣ ಅರ್ಜುನ ಯಕ್ಷಗಾನ ನಡೆಯಿತು. ಜ.24 ರ ಬುಧವಾರ ರಾತ್ರಿ ಹತ್ತರಿಂದ ಮಲೆನಾಡಿನಲ್ಲಿ ಪ್ರಪ್ರಥಮ ಬಾರಿಗೆ ಶ್ರೀರಾಮ್ ಬಳಗ ಪುತ್ತೂರು, ಶ್ರೀಜಿತ್ ಸರಳಾಯ ಹಾಗೂ ಧನುಷ್ ಇವರಿಂದ ಕಾರ್ಯಕ್ರಮ ನಡೆಯಲಿದೆ. ಜ.25 ರ ಗುರುವಾರ ರಾತ್ರಿ 10 ರಿಂದ ಮನೆ ಒಕ್ಲ್ ಎಂಬ ನಾಟಕ ನಡೆಯಲಿದೆ. ಜ.26 ರ ಶುಕ್ರವಾರ ರಾತ್ರಿ ಹತ್ತರಿಂದ ಲೈವ್ ಮ್ಯೂಸಿಕ್ ನೈಟ್ ಆರ್ಕೆಸ್ಟ್ರಾ ನಡೆಯಲಿದೆ. ಪ್ರತಿ ನಿತ್ಯ ಐದರಿಂದ ಹತ್ತು ಸಾವಿರ ಜನ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಆಶಿರ್ವಾದ ಪಡೆಯುತ್ತಾರೆ. ಇನ್ನೂ ಹೆಚ್ಚಿನ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರವಾಗುವಂತೆ ಸಮಿತಿ ಮನವಿಮಾಡಿದೆ.

Categories
ತೀರ್ಥಹಳ್ಳಿ

ವಾಗ್ದೇವಿ ಶಾಲೆಯಲ್ಲಿ ಮಕ್ಕಳ ಟ್ಯಾಲೆಂಟ್ ಹಬ್ಬ!

ವಾಗ್ದೇವಿ ಶಾಲೆಯಲ್ಲಿ ಮಕ್ಕಳ ಟ್ಯಾಲೆಂಟ್ ಹಬ್ಬ!
– ರಚನಾತ್ಮಕ ಸೈನ್ಸ್ ಮಾಡೆಲ್: ವಿವಿಧ ರೀತಿಯ ಆಹಾರಗಳ ಫುಡ್ ಫೆಸ್ಟ್
– ವಾಗ್ದೇವಿ ಶಾಲೆಯ ತುಂಬ ಮಕ್ಕಳ ಕಲರವ!

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಅತ್ಯಂತ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯಾದ ವಾಗ್ದೇವಿ ಶಾಲೆಯಲ್ಲಿ ಫುಡ್ ಫೆಸ್ಟ್ ಮತ್ತು ಸೈನ್ಸ್ ಫೇರ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಂದರಿಂದ ಹತ್ತನೇಯ ತರಗತಿಯ ಮಕ್ಕಳು ಈ ಈವೆಂಟ್ ನಲ್ಲಿ ಭಾಗವಹಿಸಿ ವಿಧ ವಿಧ ಮಾದರಿಯ ವೈಜ್ಞಾನಿಕ ಮಾಡೆಲ್ ಗಳನ್ನು ಪ್ರಸ್ತುತಪಡಿಸಿದರು. ಮಕ್ಕಳ ತಂತ್ರಜ್ಞಾನ, ಸಂಶೋಧನೆ, ನಾವಿನ್ಯತೆ, ಮಾತುಗಾರಿಕೆ ಪೋಷಕರು ಹಾಗೂ ಗಣ್ಯರ ಗಮನ ಸೆಳೆಯಿತು. ಫುಡ್ ಫೆಸ್ಟ್ ನಲ್ಲಿ ತಾವೇ ತಯಾರಿಸಿದ ಆಹಾರವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ವಿಶೇಷ.

ಮಕ್ಕಳು ಗುರುಗಳ ಮತ್ತು ಪೋಷಕರ ಸಹಾಯದಿಂದ ಹಲವು ರೀತಿಯ ವಿಜ್ಞಾನದ ಮಾಡೆಲ್ ಗಳನ್ನು ಮಾಡಿ ಅದನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ. ಪ್ರಾಯೋಗಿಕವಾಗಿ ಹೇಗೆ ಕೆಲಸ ಮಾಡುತ್ತವೆ ಮತ್ತು ಅವುಗಳ ರಚನೆ ಹೇಗೆ ? ಉದ್ಧೇಶಗಳೇನು? ಎಂಬ ಬಗ್ಗೆ ಬಹಳ ಸುಂದರವಾಗಿ ವಿವರಣೆ ನೀಡುತ್ತಿದ್ದಾರೆ. ಇನ್ನೊಂದು ಭಾಗದಲ್ಲಿ ಫುಡ್ ಫೆಸ್ಟ್ ಪ್ರದರ್ಶನವಾಗುತ್ತಿದೆ. ಮಕ್ಕಳೇ ಸ್ವಯಂ ಮನೆಯಲ್ಲಿ ತಯಾರಿಸಿದ ಫುಡ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಫುಡ್ ಫೆಸ್ಟ್ ನಲ್ಲಿ ಸ್ಥಳೀಯ ಆಹಾರದಿಂದ ಹಿಡಿದು ಬೇರೆ ಬೇರೆ ಪ್ರದೇಶಗಳ ಪಾರಂಪರಿಕ ಆಹಾರವನ್ನು ಪ್ರತಿನಿಧಿಸುವ ಫೆಸ್ಟ್ ಇದಾಗಿದೆ. ಕಾರ್ಯಕ್ರಮ ಸಂಜೆಯವರೆಗು ನಡೆದಿದ್ದು ಮಕ್ಕಳು, ಸಿಬ್ಬಂದಿ ಮತ್ತು ಪೋಷಕರು ಹಾಗು ಸ್ಥಳೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತೀರ್ಥಹಳ್ಳಿ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಭರತ್, ನ್ಯಾ. ಯಶವಂತ ಮಾತನಾಡಿ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಾಗ್ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್, ಬಿ ಇ ಒ ಗಣೇಶ್, ತೀರ್ಪುಗಾರರಾದ ರಾಘವೇಂದ್ರ ಭಟ್, ಇಸಿಒ ಜ್ಯೋತಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್ ಸೇರಿದಂತೆ ಹಲವರು ಇದ್ದರು ವಾಗ್ದೇವಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿಯ ಶ್ರಮಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಯಿತು.

Categories
ತೀರ್ಥಹಳ್ಳಿ

ಹೆದ್ದೂರಲ್ಲಿ ದನ ಸಾಗಣೆ ಅಲ್ಲ, ಗೋ ಶಾಲೆಗೆ

ಹೆದ್ದೂರಲ್ಲಿ ದನ ಸಾಗಣೆ ಅಲ್ಲ, ಗೋ ಶಾಲೆಗೆ
– ಶಿವಮೊಗ್ಗ ಅಮೃತ್ ಗೋ ಶಾಲೆಗೆ ಸಾಗಣೆ ವೇಳೆ ಗೊಂದಲ
– ದಾಖಲೆ ಇಲ್ಲದ ಕಾರಣ ಗೊಂದಲ ಸೃಷ್ಟಿ

NAMMUR EXPRESS NEWS
ತೀರ್ಥಹಳ್ಳಿ: ಹೆದ್ದೂರು ಗ್ರಾಮ ಪಂಚಾಯ್ತಿ ಹೊಸಹಳ್ಳಿಯಲ್ಲಿ ಶಿವಮೊಗ್ಗದ ಗೋ ಶಾಲೆಗೆ ಗೋವುಗಳನ್ನು ಸಾಗಣೆ ಮಾಡುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದು ಬಳಿಕ ಆ ಗೋವುಗಳು ಶಿವಮೊಗ್ಗ ಸಂತೆಕಡೂರಿನ ಗೋ ಶಾಲೆಗೆ ತೆಗೆದುಕೊಂಡು ಹೋಗುತ್ತಿರುವುದು ದೃಢಪಟ್ಟಿದೆ. ಆದ್ದರಿಂದ ಪ್ರಕರಣದಲ್ಲಿ ಊರವರು ಗೊಂದಲ ಸೃಷ್ಟಿ ಮಾಡಿದ್ದರಿಂದ ಗೂಡ್ಸ್ ಚಾಲಕನ ವಿಚಾರಣೆ ಮಾಡಲಾಗಿತ್ತು. ಇದೀಗ ಗೋವುಗಳನ್ನು ಶಿವಮೊಗ್ಗ ಗೋ ಶಾಲೆಗೆ ಬಿಡಲು ಸಾಗಣೆ ಮಾಡಲಾಗುವುದನ್ನು ಅಲ್ಲಿನ ಆಡಳಿತ ಹಾಗೂ ದಾಖಲೆ ದೃಢಪಡಿಸಿದ್ದರಿಂದ ಇದೀಗ ಪೊಲೀಸರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಗೋ ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಹೆದ್ದೂರು ಬಳಿ ಸ್ಥಳೀಯರು ಅಡ್ಡ ಹಾಕಿ ಸುಳ್ಳು ಮಾಹಿತಿ ನೀಡಿದ್ದರು. ಪೊಲೀಸ್ ವಿಚಾರಣೆ ಬಳಿಕ ಈಗ ಸತ್ಯ ಬಯಲಾಗಿದೆ. ಅಪೂರ್ವ ಎಂಬುವರ ತಪ್ಪು ಇರಲಿಲ್ಲ. ಆದ್ರೆ ದಾಖಲೆ ವಾಹನದಲ್ಲಿ ಇರದ ಕಾರಣ ಈ ಗೊಂದಲ ಸೃಷ್ಟಿ ಆಗಿದೆ. ಅಪೂರ್ವ ಅವರು ಈ ಹಿಂದೆ ಕೂಡ ಗೋ ಶಾಲೆಗಳಿಗೆ ಸ್ಥಳೀಯರ ಸಹಕಾರದಿಂದ ಗೋವುಗಳನ್ನು ನೀಡುತ್ತಿದ್ದರು. ಬುಧವಾರ ಶಿವಮೊಗ್ಗದ ಗೋ ಶಾಲೆಗೆ ಕೊಂಡೋಯ್ಯುವಾಗ ಗೊಂದಲವಾಗಿತ್ತು. ಇದೀಗ ಎಲ್ಲಾ ಗೊಂದಲಕ್ಕೆ ತೆರೆ ಬಿದ್ದಿದೆ.