ಅಯೋಧ್ಯೆ ಬಳಿಕ ಹಿಂದೂಗಳಿಗೆ ಸಿಹಿ ಸುದ್ದಿ!
– ಜ್ಞಾನವ್ಯಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಕೆಗೆ ಅನುಮತಿ
– ಏನಿದು ಕೇಸ್..? ಹಿಂದೂಗಳಿಗೆ ಕೋರ್ಟ್ ಹೇಳಿದ್ದೇನು?
NAMMUR EXPRESS NEWS
ರಾಮ ಜನ್ಮ ಭೂಮಿ ಅಯೋಧ್ಯೆ ಉದ್ಘಾಟನೆ ಬಳಿಕ ಇದೀಗ ದೇಶದ ಹಿಂದೂಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಜ್ಞಾನವ್ಯಾಪಿ ಮಸೀದಿ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮಸೀದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ. ಈ ಮೂಲಕ ಹಿಂದುಪರ ಅರ್ಜಿದಾರರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಇನ್ನು ಈ ನಡುವೆ ವಾರಣಾಸಿಯ ಜ್ಞಾನವ್ಯಾಪಿ ಮಸೀದಿಯ ‘ವುಜುಖಾನಾ’ ಸಮೀಕ್ಷೆಗೆ ಸಂಬಂಧಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅಂಜುಮನ್ ಇಂಟೆಜಾಮಿಯಾ ಮಸಾಜಿದ್ ಸಮಿತಿ ಮತ್ತು ಇತರ ವಿರೋಧ ಪಕ್ಷಗಳಿಗೆ ನೋಟಿಸ್ ನೀಡಿದೆ.