ಚಳಿಗಾಲ ಜೋರು: ಕಾಯಿಲೆಗಳು ಉಲ್ಬಣ..!
– ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
– ಆರೋಗ್ಯದ ಮೇಲೆ ಇರಲಿ ಎಚ್ಚರ!
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿ ಒಂದು ತಿಂಗಳಗಳೇ ಕಳೆದಿದೆ. ಆಗಲೇ ಜನರು ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಕಳೆದೊಂದು ವಾರದಿಂದ ಚಳಿ ಹೆಚ್ಚಾಗಿದೆ. ಶೀತ, ಜ್ವರ, ಚರ್ಮದ ಕಾಯಿಲೆ, ಅಸ್ತಮಾ, ಸಂದಿವಾತ, ವೈರಸ್ ಸೋಂಕಿನ ಬಾಧೆ ಜನರನ್ನು ಕಾಡುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ 1 ತಿಂಗಳಿನಿಂದ ವೈರಾಣು ಸೋಂಕಿಗೆ ಚಿಕಿತ್ಸೆ ಪಡೆದವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಹೆಚ್ಚಾಗಿದೆ. ಜತೆಗೆ ಶ್ವಾಸಕೋಶ ಸೋಂಕು, ತೀವ್ರ ಗಂಟಲಿನ ಸೋಂಕು ಹೆಚ್ಚಾಗಿರುವುದು ವರದಿಯಾಗುತ್ತಿದೆ.ವಾತಾವರಣದಲ್ಲಿ ಶುಷ್ಕ ಗಾಳಿಯಿಂದ ಜ್ವರ, ಗಂಟಲು ಕೆರೆತ ಹಾಗೂ ಕೆಮ್ಮು ಸಾಮಾನ್ಯವಾಗಿದೆ. ಮಾಮೂಲಿ ದಿನಗಳಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಅಧಿವಾಗಿದೆ