ತೀರ್ಥಹಳ್ಳಿಯಲ್ಲಿ ಬಿಜೆಪಿ ನೂತನ ಟೀಂಗೆ ಅಧಿಕಾರ!
– ಪಕ್ಷದ ಧ್ವಜ ಕೊಡುವ ಮೂಲಕ ಜವಾಬ್ದಾರಿ ಹಸ್ತಾಂತರ
– ಎಲ್ಲಾ ಘಟಕಗಳ ಪಕ್ಷದ ಅಧಿಕಾರ ಸ್ವೀಕಾರ
– ತೀರ್ಥಹಳ್ಳಿ ಕಾರ್ಯಕರ್ತರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಆರಗ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಫೆ.10ರಂದು ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಜವಾಬ್ದಾರಿಯನ್ನು ಸಾವಿರಾರು ಸಂಖ್ಯೆಯ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಸಲಾಯಿತು. ಹಿಂದಿನ ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಬಾಳೆಬೈಲು ರಾಘವೇಂದ್ರ ಅವರು ಪಕ್ಷದ ಧ್ವಜವನ್ನು ಹೆದ್ದೂರು ನವೀನ್ ಅವರಿಗೆ ಕೊಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ ತೀರ್ಥಹಳ್ಳಿಯಲ್ಲಿ ಸಂಘಟನೆಯ ಆಧಾರದ ಮೇಲೆ ಪಕ್ಷವನ್ನು ಕಟ್ಟಿದ್ದೇವೆ. ನಮ್ಮ ಕಾರ್ಯಕರ್ತರಿಂದ ತೀರ್ಥಹಳ್ಳಿಯಲ್ಲಿ ಬಿಜೆಪಿ ಎಷ್ಟೋ ಬಾರಿ ಗೆಲುವು ಸಾಧಿಸಿದೆ. ಕಾರ್ಯಕರ್ತರು ಎಲ್ಲೂ ಸುಳ್ಳು ಹೇಳಲಿಲ್ಲ, ಎಲ್ಲೂ ಮೋಸ ಮಾಡಲಿಲ್ಲ ಇದರ ಬಗ್ಗೆ ನಮಗೆ ಹೆಮ್ಮೆ ಹಾಗೂ ವಿಶ್ವಾಸ ಇದೆ. ಅತಿ ದೊಡ್ಡ ತಂಡವನ್ನು ನಮ್ಮ ತಾಲೂಕಿನಲ್ಲಿ ನಾವು ಹೊಂದಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತ ಬಿಜೆಪಿಗೆ ಬರುವ ಹಾಗೆ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ತೀರ್ಥಹಳ್ಳಿ ತಾಲ್ಲೂಕಿನ ಬಿಜೆಪಿ ನೂತನ ಅಧ್ಯಕ್ಷರಾದ ಹೆದ್ದೂರು ನವೀನ್ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷರಾಗುವ ಜವಾಬ್ದಾರಿಯನ್ನು ನನಗೆ ನಂಬಿ ನನಗೆ ಕೊಟ್ಟಿದ್ದೀರಾ ಅದಕ್ಕೆ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಹಾಗೂ ಅದಕ್ಕೆ ಧಕ್ಕೆ ಬರದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು. ಆರಗ ಜ್ಞಾನೇಂದ್ರ ಹಾಗೂ ನಮ್ಮ ಸಂಘಟನೆಯ ಹಿರಿಯರ ಹೋರಾಟದ ಪರಿಶ್ರಮದಿಂದ ಕಟ್ಟಿದಂತಹ ಸಂಘಟನೆಯಾಗಿದೆ. ಯುವಜನತೆಯು ತೀರ್ಥಹಳ್ಳಿಯ ಇತಿಹಾಸದ ಅಧ್ಯಯನ ಮಾಡಿ, ಅದರ ಹಿಂದಿನ ಪರಿಶ್ರಮ ಎಷ್ಟು ಜನರ ತ್ಯಾಗ ಇದೆ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಯುವ ಪೀಳಿಗೆಗೆ ಮನವಿ ಮಾಡಿದರು.
ಸುಮಾರು 6 ಸಾವಿರ ಜನರಲ್ಲಿ ಕೆಲವರ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ಕೊಟ್ಟಿದ್ದಾರೆ. ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಂದು ತಂಡ ಈ ತಾಲೂಕಿನಲ್ಲಿ ಬಿಜೆಪಿಯನ್ನು ಕಟ್ಟಬೇಕಿದೆ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ತಂಡಕ್ಕೆ ಕರೆ ನೀಡಿದರು. ಕಾರ್ಯಕ್ರಮದ ಉದ್ಘಾಟನೆ ಬಳಿಕ ಪ್ರಾಸ್ತವಿಕ ನುಡಿಗಳನ್ನಾಡಿದ ಉಪಾಧ್ಯಕ್ಷರಾದ ಬಾಳೆಬೈಲ್ ರಾಘವೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಮೇಘರಾಜ್, ಸಂಘಟನೆಯ ಹಿರಿಯರಾದ ಪ್ರಕಾಶ್, ಪ್ರಮುಖರಾದ ನಾಗರಾಜ್ ಶೆಟ್ರು, ನಿರ್ದೇಶಕರಾದ ಈಶ್ವರ್, ಶಂಕರನಾರಾಯಣ ಐತಾಕಳ್, ಐತಾಳ್, ಅಶೋಕ್ ಮೂರ್ತಿ, ಸಾಲೆಕೊಪ್ಪ ರಾಮಚಂದ್ರ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಯಶೋಧ ಮಂಜುನಾಥ್, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾದ ಮೋಹನ್, ಶ್ರೀನಿವಾಸ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ ಸೇರಿ ಬಹುತೇಕ ಎಲ್ಲಾ ನಾಯಕರು ಹಾಜರಿದ್ದರು.